Header Ads Widget

Responsive Advertisement

ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ

ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ, ಗುಜರಾತ್ ರಾಜ್ಯಪಾಲ ಶ್ರೀ ನರೇಂದ್ರ ಸಿಂಗ್ ತೋಮರ್, ಗುಜರಾತ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯದ 100ನೇ ವರ್ಷದವರೆಗಿನ ಪ್ರಯಾಣದಲ್ಲಿ ಹೊಸ ಸವಾಲುಗಳು, ಹೊಸ ಅವಶ್ಯಕತೆಗಳಿಗೆ ಅನುಗುಣವಾಗಿ ಕೃಷಿಯನ್ನು ಹೊಂದಿಸಿಕೊಳ್ಳುವಂತೆ ಕರೆ ನೀಡಿದರು. ಕಳೆದ 6-7 ವರ್ಷಗಳಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ಬೀಜದಿಂದ ಹಿಡಿದು ಮಾರುಕಟ್ಟೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಪ್ರಧಾನಿ ಉಲ್ಲೇಖಿಸಿದರು. ಮಣ್ಣು ಪರೀಕ್ಷೆಯಿಂದ ಹಿಡಿದು ನೂರಾರು ಹೊಸ ತಳಿಯ ಬೀಜಗಳವರೆಗೆ, ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಹಿಡಿದು ಉತ್ಪಾದನಾ ವೆಚ್ಚಕ್ಕೆ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿವರೆಗೆ, ನೀರಾವರಿಯಿಂದ ಹಿಡಿದು ಬಲಿಷ್ಠ ಕಿಸಾನ್ ರೈಲು ಜಾಲದವರೆಗೆ ಕೈಗೊಂಡ ಹತ್ತಾರು ಕ್ರಮಗಳು ಈ ವಲಯವನ್ನು ಆ ದಿಕ್ಕಿನಲ್ಲಿ ಕೊಂಡೊಯ್ದಿವೆ ಎಂದರು. ವಿಡಿಯೋ ಕಾನ್ಫರೆನ್ಸ್‌ ಮತ್ತು ಇತರೆ ವೇದಿಕೆಗಳ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ದೇಶಗಳ ರೈತರಿಗೆ ಅವರು ಶುಭ ಕೋರಿದರು.

ಹಸಿರು ಕ್ರಾಂತಿಯಲ್ಲಿ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಪ್ರಮುಖ ಪಾತ್ರ ವಹಿಸಿದ್ದನ್ನು ಒಪ್ಪಿಕೊಂಡ ಪ್ರಧಾನಮಂತ್ರಿಯವರು, ಏಕ ಕಾಲದಲ್ಲಿ ಅದರ ಪರ್ಯಾಯಗಳ ಮೇಲೂ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಕೀಟನಾಶಕಗಳು ಮತ್ತು ಆಮದು ಮಾಡಿದ ರಸಗೊಬ್ಬರಗಳ ಅಪಾಯಗಳ ವಿರುದ್ಧ ಅವರು ಎಚ್ಚರಿಕೆ ನೀಡಿದರು. ಇದು ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸುವ ಮೊದಲು ದೊಡ್ಡ ಕ್ರಮಗಳನ್ನು ಕೈಗೊಳ್ಳಲು ಇದು ಸರಿಯಾದ ಸಮಯ ಎಂದು ಪ್ರಧಾನಿ ಒತ್ತಿ ಹೇಳಿದರು. "ನಾವು ನಮ್ಮ ಕೃಷಿಯನ್ನು ರಸಾಯನಶಾಸ್ತ್ರದ ಪ್ರಯೋಗಾಲಯದಿಂದ ಒರತಂದು ಪ್ರಕೃತಿಯ ಪ್ರಯೋಗಾಲಯಕ್ಕೆ ಒಡ್ಡಬೇಕಿದೆ. ನಾನು ಮಾತನಾಡುತ್ತಿರುವ ಪ್ರಕೃತಿಯ ಪ್ರಯೋಗಾಲಯವು ಸಂಪೂರ್ಣವಾಗಿ ವಿಜ್ಞಾನ ಆಧಾರಿತವಾಗಿದೆ", ಎಂದು ಪ್ರಧಾನಿ ಹೇಳಿದರು. ಇಂದು ಜಗತ್ತು ಹೆಚ್ಚು ಆಧುನಿಕವಾಗುತ್ತಿದೆ, ಅದು 'ಮೂಲಕ್ಕೆ ಹಿಂತಿರುಗಿ' ಕಡೆಗೆ ಸಾಗುತ್ತಿದೆ ಎಂದು ಪ್ರಧಾನಿ ಹೇಳಿದರು. "ಇದರರ್ಥ ನಿಮ್ಮ ಬೇರುಗಳೊಂದಿಗೆ ಸಂಪರ್ಕ ಸಾಧಿಸುವುದು ಎಂದರ್ಥ. ನಿಮ್ಮೆಲ್ಲರ ರೈತ ಸ್ನೇಹಿತರಿಗಿಂತ ಇದನ್ನು ಯಾರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ? ನಾವು ಬೇರುಗಳಿಗೆ ನೀರು ಎಷ್ಟು ಹೆಚ್ಚು ನೀರು ನೀಡುತ್ತೇವೆ, ಸಸ್ಯ ವು ಬೆಳೆಯುತ್ತದೆ", ಎಂದು ಪ್ರಧಾನಿ ಹೇಳಿದರು.

"ನಾವು ಕೃಷಿ ಕುರಿತಾದ ಈ ಪ್ರಾಚೀನ ಜ್ಞಾನವನ್ನು ಮತ್ತೆ ಕಲಿಯುವುದಷ್ಟೇ ಅಲ್ಲ, ಆಧುನಿಕ ಕಾಲಕ್ಕೆ ತಕ್ಕಂತೆ ಅದನ್ನು ತೀಕ್ಷ್ಣಗೊಳಿಸಬೇಕಾಗಿದೆ" ಎಂದು ಪ್ರಧಾನಿ ಸಲಹೆ ನೀಡಿದರು. ಈ ನಿಟ್ಟಿನಲ್ಲಿ ನಾವು ಹೊಸ ಸಂಶೋಧನೆಯನ್ನು ಮಾಡಬೇಕು, ಪ್ರಾಚೀನ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಚೌಕಟ್ಟಿನಲ್ಲಿ ರೂಪಿಸಬೇಕಾಗಿದೆ," ಎಂದರು. ಬೇರೆಡೆಯಿಂದ ಸ್ವೀಕರಿಸಿದ ಬಾಹ್ಯ ಜ್ಞಾನದ ಬಗ್ಗೆ ಜಾಗರೂಕರಾಗಿರಲು ಪ್ರಧಾನಿ ಸೂಚಿಸಿದರು. ಹಲವು ರಾಜ್ಯಗಳಲ್ಲಿ ಬೆಳೆಯ ಅವಶೇಷಗಳನ್ನು ಹೊಲದಲ್ಲೇ ಸುಡುವ ಪ್ರಚಲಿತ ಪರಿಪಾಠದ ಬಗ್ಗೆ ಉಲ್ಲೇಖಿಸಿದ ಅವರು, ಹೊಲಕ್ಕೆ ಬೆಂಕಿ ಹಚ್ಚುವುದರಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ ಎಂದು ತಜ್ಞರು ಸಾಬೀತುಪಡಿಸಿದ್ದಾರೆ. ಇದರ ಹೊರತಾಗಿಯೂ ಇದು ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ರಾಸಾಯನಿಕಗಳಿಲ್ಲದೆ ಉತ್ತಮ ಬೆಳೆ ಅಸಾಧ್ಯ ಎಂಬ ಭ್ರಮೆಯೂ ನಮ್ಮಲ್ಲಿದೆ ಎಂದು ಅವರು ಹೇಳಿದರು. ಆದರೆ ಸತ್ಯವು ಇದಕ್ಕೆ ತದ್ವಿರುದ್ಧವಾಗಿದೆ. ಈ ಮೊದಲು ಯಾವುದೇ ರಾಸಾಯನಿಕಗಳು ಇರಲಿಲ್ಲ, ಆದರೆ ಕೊಯ್ಲು ಉತ್ತಮವಾಗಿತ್ತು. ಮನುಕುಲದ ಅಭಿವೃದ್ಧಿಯ ಇತಿಹಾಸವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ವಿಶ್ಲೇಷಿಸಿದರು. "ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ, ನಮ್ಮ ಕೃಷಿಯಲ್ಲಿ ನುಸುಳಿರುವ ತಪ್ಪು ಅಭ್ಯಾಸಗಳನ್ನು ನಾವು ಕೈಬಿಡಬೇಕಿದೆ", ಎಂದು ಅವರು ಹೇಳಿದರು.  ʻಐಸಿಎಆರ್ʼ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಂತಹ ಸಂಸ್ಥೆಗಳು ಕಾಗದಪತ್ರಗಳನ್ನು ಮೀರಿದ ಪ್ರಾಯೋಗಿಕ ಯಶಸ್ಸಿನ ಮೂಲಕ ಈ ನಿಟ್ಟಿನಲ್ಲಿ ದೊಡ್ಡ ಪಾತ್ರ ವಹಿಸಬಹುದು ಎಂದು ಶ್ರೀ ಮೋದಿ ಅವರು ಸಲಹೆ ನೀಡಿದರು.

ನೈಸರ್ಗಿಕ ಕೃಷಿಯಿಂದ ಹೆಚ್ಚು ಪ್ರಯೋಜನ ಪಡೆಯಲಿರುವವರಲ್ಲಿ ದೇಶದ ಶೇ.80ರಷ್ಟು ರೈತರು ಸೇರಿದ್ದಾರೆ. ಇಂತಹ ಸಣ್ಣ ರೈತರು, 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ಈ ರೈತರಲ್ಲಿ ಹೆಚ್ಚಿನವರು ರಾಸಾಯನಿಕ ಗೊಬ್ಬರಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಅವರು ನೈಸರ್ಗಿಕ ಕೃಷಿಯತ್ತ ಹೊರಳಿದರೆ,ಅವರ ಸ್ಥಿತಿ ಉತ್ತಮವಾಗಿರುತ್ತದೆ ಎಂದು ಪ್ರಧಾನಿ ಕರೆ ನೀಡಿದರು.

ನೈಸರ್ಗಿಕ ಕೃಷಿಯನ್ನು ಜನಾಂದೋಲನವನ್ನಾಗಿ ಮಾಡಲು ಪ್ರತಿಯೊಂದು ರಾಜ್ಯ, ಪ್ರತಿಯೊಂದು ರಾಜ್ಯ ಸರಕಾರ ಮುಂದೆ ಬರಬೇಕು ಎಂದು ಪ್ರಧಾನಿ ಒತ್ತಾಯಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಕನಿಷ್ಠ ಒಂದು ಹಳ್ಳಿಯನ್ನು ಸಂಪೂರ್ಣ ನೈಸರ್ಗಿಕ ಗ್ರಾಮವಾಗಿಸಲು ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು.

'ಪರಿಸರಕ್ಕಾಗಿ ಜೀವನಶೈಲಿ' (`Lifestyle for Environment’-LIFE’) ಅನ್ನು ಒಂದು ಜಾಗತಿಕ ಧ್ಯೇಯವನ್ನಾಗಿ ಮಾಡುವಂತೆ ʻಹವಾಮಾನ ಬದಲಾವಣೆ ಶೃಂಗʼದಲ್ಲಿ ತಾವು ವಿಶ್ವ ಸಮುದಾಯಕ್ಕೆ ಕರೆ ನೀಡಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದರು. ಭಾರತೀಯರು ಮತ್ತು ದೇಶದ ರೈತರು 21ನೇ ಶತಮಾನದಲ್ಲಿ ಈ ನಿಟ್ಟಿನ ಪ್ರಯತ್ನಗಳ ನೇತೃತ್ವವನ್ನು ವಹಿಸಲಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಭಾರತ ಮಾತೆಯ ಭೂಮಿಯನ್ನು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ಕೈಗೊಳ್ಳೋಣ ಎಂದು ಪ್ರಧಾನಮಂತ್ರಿಯವರು ಜನತೆಗೆ ಕರೆ ನೀಡಿದರು.

ಗುಜರಾತ್ ಸರಕಾರವು ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿತ್ತು. ಈ ಮೂರು ದಿನಗಳ ಶೃಂಗಸಭೆಯು 2021ರ ಡಿಸೆಂಬರ್ 14ರಿಂದ 16ರವರೆಗೆ ನಡೆಯಿತು. 5000ಕ್ಕೂ ಹೆಚ್ಚು ರೈತರು ಇದರಲ್ಲಿ ಭಾಗವಹಿಸಿದ್ದರು. ಜೊತೆಗೆ ಕೇಂದ್ರ ಕೃಷಿ ಸಂಶೋಧನಾ ಸಂಸ್ಥೆ ಕಚೇರಿಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯಗಳಲ್ಲಿರುವ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ (ಎಟಿಎಂಎ) ಕಚೇರಿಗಳಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,