Header Ads Widget

Responsive Advertisement

ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 2022 ರ ಜನವರಿ 10 ರಿಂದ 16 ರವರೆಗೆ ‘ನ್ಯಾಷನಲ್ ಇನ್ನೊವೇಶನ್ ವೀಕ್ ' ಅನ್ನು ಶಿಕ್ಷಣ ಸಚಿವಾಲಯ, ಎ.ಐ.ಸಿ.ಟಿ.ಇ. ಮತ್ತು ಡಿ.ಪಿ.ಐ.ಐ.ಟಿ.ಗಳು ಆಯೋಜಿಸಲಿವೆ

ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 2022 ರ ಜನವರಿ 10 ರಿಂದ 16 ರವರೆಗೆ ‘ನ್ಯಾಷನಲ್ ಇನ್ನೊವೇಶನ್ ವೀಕ್ ' ಅನ್ನು ಶಿಕ್ಷಣ ಸಚಿವಾಲಯ, ಎ.ಐ.ಸಿ.ಟಿ.ಇ. ಮತ್ತು ಡಿ.ಪಿ.ಐ.ಐ.ಟಿ.ಗಳು ಆಯೋಜಿಸಲಿವೆ


ಭಾರತ 'ಆಜಾದಿ ಕಾ ಅಮೃತ್ ಮಹೋತ್ಸವ'ದ 75 ನೇ ವರ್ಷಗಳ ನೆನಪಿಗಾಗಿ, ಕೇಂದ್ರ ಶಿಕ್ಷಣ ಸಚಿವಾಲಯ , ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎ.ಐ.ಸಿ.ಟಿ.ಇ.) ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (ಡಿ.ಪಿ.ಐ.ಐ.ಟಿ.) ಜಂಟಿಯಾಗಿ ಜನವರಿ 10 ರಿಂದ 16, 2022 ರವರೆಗೆ 'ನ್ಯಾಷನಲ್ ಇನ್ನೊವೇಶನ್ ವೀಕ್' ಅನ್ನು ಆಯೋಜಿಸುತ್ತಿವೆ. ಇದು ಶಿಕ್ಷಣ ಸಚಿವಾಲಯದ ಮಾದರಿ ವಾರ ಕೂಡಾ ಆಗಿದೆ. 

ಭಾರತದಲ್ಲಿ ನವೀನತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಜಾಗೃತಿಯನ್ನು ಹರಡಲು ಈ ಸಂಸ್ಥೆಗಳು ಕೈಗೊಂಡ ವಿವಿಧ ಉಪಕ್ರಮಗಳು ಈ ವಾರ ವಿಶೇಷವಾಗಿ ಎತ್ತಿ ತೋರಿಸಲಿದೆ. ಝೋಹೋ ಕಾರ್ಪೊರೇಷನ್ ಸಂಸ್ಥಾಪಕರಾದ ಶ್ರೀ ಶ್ರೀಧರ್ ವೆಂಬು, ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್, ಫೂಲ್ ಸಂಸ್ಥಾಪಕ ಮತ್ತು ಸಿ.ಇ.ಒ. ಶ್ರೀ ಅಂಕಿತ್ ಅಗರ್ವಾಲ್, ಶ್ರೀಮತಿ ಅರುಂಧತಿ ಭಟ್ಟಾಚಾರ್ಯ, ಸೇಲ್ಸ್‌ಫೋರ್ಸ್ ಅಧ್ಯಕ್ಷೆ ಮತ್ತು ಸಿ.ಇ.ಒ., ಶ್ರೀಮತಿ ಶ್ರೀ ದೇವಿ ಪಂಕಜಮ್, ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ಆಡಳಿತ ನಿರ್ದೇಶಕ ಶ್ರೀ ಸಿ ವಿ ರಾಮನ್, ಮುಖ್ಯ ತಂತ್ರಜ್ಞಾನ ಅಧಿಕಾರಿ ಮಾರುತಿ ಮತ್ತು ಇನ್ನೂ ಅನೇಕ ಪ್ರಖ್ಯಾತ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಹೊಸತನ ಶೋಧನೆಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದರ' ಕುರಿತು ಜನವರಿ 11 ಮತ್ತು 12, 2022 ರಂದು '2 ದಿನಗಳ ಕಾಲ ದೀರ್ಘ ಇ-ವಿಚಾರ ಸಂಕಿರಣ(ಗೋಷ್ಠಿ ) ಜರುಗಲಿದೆ. ಜನವರಿ 11 2022 ರಂದು ಬೆಳಗ್ಗೆ 10.30 ಗಂಟೆಗೆ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಶ್ರೀ ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಇ-ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು, ಶಾಲೆಗಳು, ಉದ್ಯಮ, ಸ್ಟಾರ್ಟ್-ಅಪ್ ಮತ್ತು ಹೂಡಿಕೆದಾರ ಸಮುದಾಯದಿಂದ ಹೆಚ್ಚಿನ ಭಾಗವಹಿಸುವಿಕೆಯನ್ನು ಹೊಂದಿರುವ ಈ ಕಾರ್ಯಕ್ರಮವು ವಿಡಿಯೊ ಸಮಾವೇಶ ಮೂಲಕ ಇ-ವಿಚಾರ ಸಂಕಿರಣ ( ಗೋಷ್ಠಿ) ನಡೆಯಲಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು ನಡೆಸುವ ರಾಷ್ಟ್ರೀಯ ಆವಿಷ್ಕಾರ ಸ್ಪರ್ಧೆ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್, ಯುಕ್ತಿ 2.0 ಮತ್ತು ಟಾಯ್‌ಕಥಾನ್‌ನಂತಹ ವಿವಿಧ ಕಾರ್ಯಕ್ರಮಗಳಿಂದ ಆಯ್ಕೆಯಾದ 75 ನವೀನ ತಂತ್ರಜ್ಞಾನಗಳು ಕಾರ್ಯಕ್ರಮದ ಇ-ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಹೊಸ ಶೋಧಗಳನ್ನು ಜನವರಿ 10, 2022 ರಿಂದ ಇದರಲ್ಲಿ ಪ್ರದರ್ಶಿಸುತ್ತವೆ. ಪ್ರದರ್ಶನದ ಜೊತೆಗೆ, ಹೆಚ್.ಇ.ಐ. ಗಳು ಮತ್ತು ಶಾಲೆಗಳಲ್ಲಿ ನವೀನತೆ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಉದಯೋನ್ಮುಖ ಕ್ಷೇತ್ರಗಳ ಕುರಿತು ಬಹು ಮುಖ್ಯ ಟಿಪ್ಪಣಿ ಅವಧಿಗಳು ಮತ್ತು  ಚರ್ಚೆಗಳನ್ನು ಒಳಗೊಂಡಿರುವ ಪೂರ್ಣ ದಿನದ ಚಟುವಟಿಕೆಗಳು ಕೂಡಾ ಜನವರಿ 11 ಮತ್ತು 12, 2022 ವರೆಗೆ ಜರುಗಲಿದೆ. 

ರಚನಾತ್ಮಕ ಆಲೋಚನೆಗಳ ಮೂಲಕ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ಇಂತಹ ನವೋದ್ಯಮ ಸಪ್ತಾಹವು ಯುವ ಶೋಧಕರನ್ನು ಪ್ರೇರೇಪಿಸುತ್ತದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎ.ಐ.ಸಿ.ಟಿ.ಇ.) ಅಧ್ಯಕ್ಷ ಪ್ರೊ ಅನಿಲ್ ಡಿ ಸಹಸ್ರಬುಧೆ ಅವರು ಹೇಳಿದರು. ಪ್ರಸ್ತಾವಿತ ಇ-ವಿಚಾರ ಸಂಕಿರಣವು ಹೂಡಿಕೆ, ಮಾರ್ಗದರ್ಶನ ಇತ್ಯಾದಿಗಳಂತಹ ಹೊಸತನ ಶೋಧದ ವ್ಯವಸ್ಥೆಯನ್ನು ನಿರ್ಮಿಸಲು ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತವೆ. ಮತ್ತು ಈ ಇ-ವಿಚಾರ ಸಂಕಿರಣವು ನಮ್ಮ ಶಿಕ್ಷಣ ಸಂಸ್ಥೆಗಳನ್ನು ತಮ್ಮ ಕ್ಯಾಂಪಸ್‌ಗಳಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸುವಂತೆ ಪ್ರೋತ್ಸಾಹಿಸುತ್ತವೆ ಎಂದು ನಾವು ಭಾವಿಸಿದ್ಧೇವೆ. ಭಾರತವು ಸ್ಟಾರ್ಟ್-ಅಪ್‌ಗಳ ಸಂಖ್ಯೆಯಲ್ಲಿ ಅತಿ ವೇಗದ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವುದರಿಂದ, ಸಮಗ್ರ ನಾವೀನ್ಯತೆಯ ಸಂಸ್ಕೃತಿಯನ್ನು ಸೃಷ್ಟಿಸುವ ಸಂಘಟಿತ ಪ್ರಯತ್ನಗಳು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಶಿಸುವ ಆತ್ಮನಿರ್ಭರ ಭಾರತ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ರೂಪಿಸಲು ದಾರಿ ಮಾಡಿಕೊಡುತ್ತವೆ ಎಂದು ಅಧ್ಯಕ್ಷ ಪ್ರೊ ಅನಿಲ್ ಡಿ ಸಹಸ್ರಬುದ್ಧೆ ಅವರು ಹೇಳಿದರು.

ಶಿಕ್ಷಣ ಸಚಿವಾಲಯದ ನಾವಿನ್ಯ ಘಟಕ/ಕೇಂದ್ರ (ಇನ್ನೋವೇಶನ್ ಸೆಲ್‌) ಇದರ ಮುಖ್ಯ ಆವಿಷ್ಕಾರ ಅಧಿಕಾರಿ ಡಾ. ಅಭಯ್ ಜೇರೆ ಮಾತನಾಡಿ, ಈ ನಾವೀನ್ಯತಾ ಸಪ್ತಾಹವು ಎಲ್ಲಾ ನವೋದ್ಯಮಿಗಳಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಯುವ ಮನಸ್ಸುಗಳನ್ನು ತಮ್ಮ ಉದ್ಯಮಶೀಲತೆಯ ಪ್ರಯಾಣವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲು, ಜಾಗತಿಕ ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್‌ಗಳ ಕೇಂದ್ರವಾಗಲು ಪ್ರೇರೇಪಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದರು. ನಾವೀನ್ಯತೆ ಕೋಶವಾಗಿ, ನಾವು ಬಹು ನಾವೀನ್ಯತೆ, ಉದ್ಯಮಶೀಲತೆ ಸಂಬಂಧಿತ ಉಪಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಈ ವಿಚಾರ ಸಂಕಿರಣದ ಮೂಲಕ ನಮ್ಮ ಶಿಕ್ಷಣ ಸಂಸ್ಥೆಗಳು ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ, ಇದರಿಂದಾಗಿ ಕ್ಯಾಂಪಸ್‌ ನಲ್ಲಿ ಸುಸ್ಥಿರ ಪರಿಸರ ವ್ಯವಸ್ಥೆಯು ಸ್ಥಾಪನೆಯಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಪ್ರಖ್ಯಾತ ಉದ್ಯಮ ನಾಯಕರು, ಉದಯೋನ್ಮುಖ ಸಂಸ್ಥೆಗಳ ಸಂಸ್ಥಾಪಕರು, ಹೂಡಿಕೆದಾರರು, ತಜ್ಞರು, ಪ್ರಮುಖ ಟಿಪ್ಪಣಿ ನಿರೂಪಕರುಗಳು ಮತ್ತು ಪ್ಯಾನೆಲಿಸ್ಟ್‌ ಗಳು ಇದರಲ್ಲಿ ಭಾಗವಹಿಸಲಿದ್ದಾರೆ. ನಾವೀನ್ಯತೆ ಮತ್ತು ವಿವಿಧ ಇತರೆ ಅಂಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮತ್ತು ದೃಷ್ಟಿಕೋನವನ್ನು ಇ-ವಿಚಾರ ಸಂಕಿರಣದಲ್ಲಿ ಹಂಚಿಕೊಳ್ಳಲಿದ್ದಾರೆ. ಶಾಲಾ ಮಕ್ಕಳು ಮತ್ತು ಯುವ ಮನಸ್ಸುಗಳನ್ನು ವೃತ್ತಿ ಆಯ್ಕೆಯಾಗಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಮುಂದುವರಿಸಲು ಪ್ರೇರೇಪಿಸಲು ಪೂರಕವಾಗಿ ಆರಂಭಿಕ ಹಂತದ ಸ್ಟಾರ್ಟ್-ಅಪ್ ಸಂಸ್ಥಾಪಕರಿಂದ ಮತ್ತು ವಿದ್ಯಾರ್ಥಿ ನವೋದ್ಯಮಿಗಳಿಂದ , ತಜ್ಞ ಪ್ಯಾನೆಲಿಸ್ಟ್‌ ಗಳನ್ನು ಒಳಗೊಂಡ ವಿಶೇಷ ಪ್ಯಾನಲ್ ಸಭೆಗಳು ಜರುಗಲಿದೆ. 

ಶೈಕ್ಷಣಿಕ ಸಂಸ್ಥೆಗಳಲ್ಲಿ ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಸೃಜನಶೀಲತೆಯ ಭಾಗವಾಗಿ   ಸ್ಟಾರ್ಟ್ ಅಪ್ ಗಳ ಕುರಿತು ಪರಿಚಯಿಸುವ ಗುರಿಯನ್ನು ಈ ಇ-ವಿಚಾರ  ಕಾರ್ಯಕ್ರಮ ಹೊಂದಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,