Header Ads Widget

ಸರ್ಚ್ ಕೂರ್ಗ್ ಮೀಡಿಯ

ರೈತರು ವಿವಿಧ ಸೌಲಭ್ಯಗಳನ್ನು ಪಡೆಯಲು "ಎಫ್‍.ಐ.ಡಿ" ಕಡ್ಡಾಯ

ರೈತರು ವಿವಿಧ ಸೌಲಭ್ಯಗಳನ್ನು ಪಡೆಯಲು "ಎಫ್‍.ಐ.ಡಿ" ಕಡ್ಡಾಯ


ಮಡಿಕೇರಿ ಜ.07: ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಲು ರೈತರ ಆಧಾರ್ ಕಾರ್ಡ್‍ನ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಪ್ರತಿ ಹಾಗೂ ಪಹಣಿ ಕಡ್ಡಾಯವಾಗಿ ಬೇಕಾಗಿದೆ. ಈ ದಾಖಲೆಗಳೊಂದಿಗೆ ಜಾತಿ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಅಂಗವಿಕಲ ದೃಢೀಕರಣ ಪತ್ರ ಮತ್ತು ಛಾಯಾಚಿತ್ರವನ್ನು ಫ್ರೂಟ್ಸ್ ತಂತ್ರಾಂಶದೊಂದಿಗೆ ಜೋಡಣಿ ಮಾಡಬಹುದಾಗಿದೆ. ಬೆಳೆ ಸಮೀಕ್ಷೆಯ ವಿವರಗಳು ಫ್ರೂಟ್ಸ್ ತಂತ್ರಾಂಶಕ್ಕೆ ಲಿಂಕ್ ಆಗಿರುತ್ತದೆ. 

ಈ ಎಫ್‍ಐಡಿಯನ್ನು ಕೃಷಿ ಇಲಾಖೆಯ ಯೋಜನೆಗಳಾದ ಪಿಎಂಕಿಸಾನ್, ಬೆಳೆ ವಿಮೆ, ಕೃಷಿ ಯಾಂತ್ರೀಕರಣ ಮತ್ತು ಇತರೆ ಯೋಜನೆಗಳಲ್ಲಿ ವಿವಿಧ ಸವಲತ್ತುಗಳನ್ನು ಕೊಡಲು ಬಳಸಿಕೊಳ್ಳಲಾಗುತ್ತದೆ. ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಗಳ ಯೋಜನೆಗಳ ವಿವಿಧ ಸೌಲಭ್ಯಗಳನ್ನು ಪಡೆಯಲು, ಭತ್ತ ಖರೀದಿ ಕೇಂದ್ರದಲ್ಲಿ ಭತ್ತವನ್ನು ಮಾರಲು ನೋಂದಣಿಯಾಗಲು ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆಯಲು ಎಫ್‍ಐಡಿ ಕಡ್ಡಾಯವಾಗಿರುತ್ತದೆ. 

ಆದ್ದರಿಂದ ಎಲ್ಲಾ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಒದಗಿಸಿ ಎಫ್‍ಐಡಿಯನ್ನು ಪಡೆಯಲು ಮತ್ತು ತಮ್ಮ ಎಲ್ಲಾ ಪಹಣಿಗಳನ್ನು ಫ್ರೂಟ್ಸ್ ತಂತ್ರಾಂಶಕ್ಕೆ ಸೇರ್ಪಡೆಗೊಳಿಸಲು ಕೊಡಗು ಜಿಲ್ಲೆಯ ರೈತರಲ್ಲಿ ತಿಳಿಸಿದೆ. 

ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಒಟ್ಟು 62,685 ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿದ್ದಾರೆ. ಹಾಗೂ 2,59,796 ತಾಕುಗಳಲ್ಲಿ ಫ್ರೂಟ್ಸ್ ತಂತ್ರಾಂಶಕ್ಕೆ 1,55,790 ತಾಕುಗಳು ಸೇರ್ಪಡೆಯಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ.ಶೇಕ್ ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,