Header Ads Widget

ಸರ್ಚ್ ಕೂರ್ಗ್ ಮೀಡಿಯ

ನಿಮ್ಮಂತೆ ಯಾರೂ ಇಲ್ಲಿಲ್ಲ; ನಿಮ್ಮವರಾರೂ ಇಲ್ಲಿಲ್ಲ....

ನಿಮ್ಮಂತೆ ಯಾರೂ ಇಲ್ಲಿಲ್ಲ; ನಿಮ್ಮವರಾರೂ ಇಲ್ಲಿಲ್ಲ.... 


ಓ ವಿವೇಕಾನಂದ ಸುಭಾಷ್ ಚಂದ್ರ ಬೋಸ್ 

ಸರ್ಧಾರ್ ವಲ್ಲಬಾಯಿ ಪಟೇಲರೆ ಸುಮ್ಮನೆ 

ಎದ್ದು ಹೋದಿರೇಕೆ ಭಾರತ ಮಾತೆಯ ಸೇವೆ

ಗೆಂದು ವಿಶ್ವಾಸಿಗರಾರನ್ನಾದರೂ ನಿಲ್ಲಿಸಿ 

ಹೋಗಬಹುದಿತ್ತು ನಿಮ್ಮವರಾರೂ ಇಲ್ಲಿಲ್ಲ 


ಓ ಲಾಲ್ ಬಹಾದ್ದೂರ್ ಶಾಸ್ತ್ರಿಗಳೇ

ಡಾ. ಅಬ್ದುಲ್ ಕಲಾಂರವರೆ ಫೀಲ್ಡ್ 

ಮಾರ್ಷಲ್ ಕಾರ್ಯಪ್ಪನವರೇ ತ್ಯಾಗ 

ನಿಷ್ಠೆಗೆ ಹೆಸರಾಗಿ ಹೇಳದೇ ನಡೆದಿರೇಕೆ 

ನಿಮ್ಮಂತಾರೂ ಇಲ್ಲ ನಿಮ್ಮವರಾರೂ ಇಲ್ಲಿಲ್ಲ 


ಓ ತ್ರಿವಿಧ ದಾಸೋಹಿ ಶ್ರೀ ಸಿದ್ಧಗಂಗಾ ಮಠದ

ಶಿವಕುಮಾರ ಸ್ವಾಮಿಜೀಗಳೆ ಕರ್ತವ್ಯದ ಕರೆಗೆ 

ಓಗೊಟ್ಟು ದುಡಿದವರೇ ಶಿಷ್ಯ ಪರಂಪರೆಯ

ತೊರೆದು ಪಯಣಿಸಿದಿರೇಕೆ ಶಾಲು ಹಾರಗಳ 

ಹೊತ್ತು ನಡೆದವರು ನಿಮ್ಮವರಾರೂ ಇಲ್ಲಿಲ್ಲ


ಓ ಧೀರೋದಾತ್ತ ಹೆಜ್ಜೆಗಳನ್ನಿರಿಸಿ ದೇಶಕ್ಕಾಗಿ

ಗುಂಡಿಗೆ ಗುಂಡಿಗೆಯ ಕೊಟ್ಟು ದೇಹವನ್ನು  

ಅರ್ಪಿಸಿದ ಮಹಾನ್ ಯೋಧರೇ ನಿಮ್ಮ ಧೈರ್ಯ

ಮೆಚ್ಚುವೆ ನಿಮ್ಮ ಕರ್ತವ್ಯ ಪ್ರಜ್ಞೆ ನಮ್ಮ ಕಾಯುತಿದೆ

ದೇಶದೊಳಗೆ ನಿಮ್ಮಂತೆ ನಮ್ಮವರಾರೂ ಇಲ್ಲಿಲ್ಲ


ಈ ಮಾತೃಭೂಮಿಗೆ ಮಾತೃಭಾಷೆಗೆ ದೇಶದೇಕತೆಗೆ

ತಲೆಗೊಟ್ಟು ಲಂಚ ರುಷುವತ್ತುಗಳ ಬದಿಗಿಟ್ಟು

ದುಡಿದವರೇ ನಿಮ್ಮ ಹೆಸರು ನಮಗ್ಯಾರಿಗೂ 

ನೆನಪಿಲ್ಲ ಕೇವಲ ಧನಗಳಿಕೆಯೊಂದೇ ಎಲ್ಲರ 

ಗುರಿಯಾಗಿದೆ ನಿಮ್ಮಂತೆ ಯಾರೂ ಇಲ್ಲಿಲ್ಲ 

ನಿಮ್ಮವರಾರೂ ಇಲ್ಲಿಲ್ಲ 

✍️....ಶಿವೈ

ವೈಲೇಶ್ ಪಿ.ಎಸ್. ಕೊಡಗು

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,