Header Ads Widget

ಸರ್ಚ್ ಕೂರ್ಗ್ ಮೀಡಿಯ

ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ನೂತನ ಶವಗಾರ ಕಟ್ಟಡ ಕಾಮಗಾರಿ ಪ್ರಾರಂಭ

ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ನೂತನ ಶವಗಾರ ಕಟ್ಟಡ ಕಾಮಗಾರಿ ಪ್ರಾರಂಭ


ಹಲವಾರು ವರ್ಷಗಳಿಂದ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ  ಶವಗಾರ ಕಟ್ಟಡ ಕೊರತೆ ಇದ್ದು ದೂರದ ಕಾಡಿನ ಮದ್ಯೆ ಶವಗಾರ ಇತ್ತು. ಅಲ್ಲಿ ಯಾವುದೇ ಸೌಕರ್ಯವಿರಲಿಲ್ಲ. ಕಳೆದ ವರ್ಷ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ  ಸಮಾಜ ಸೇವಕರು ಹಾಗೂ ವಕೀಲರಾದ ಎಂ.ಟಿ. ಕಾರ್ಯಪ್ಪನವರು ಈ ಬಗ್ಗೆ ಪತ್ರ ನೀಡಿ ಮನವಿ ಮಾಡಿದ ಹಿನ್ನಲೆಯಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ ನೂತನ ಶವಗಾರ ಕೊಠಡಿ ನಿರ್ಮಾಣವಾಗುತ್ತಿದೆ.

ಇದಕ್ಕೆ ಸಹಕರಿಸಿದ ಆಸ್ಪತ್ರೆ ವೈದ್ಯಾಧಿಕಾರಿ ಸಿಬ್ಬಂದಿ ವಿಶೇಷವಾಗಿ ಹಿಂದಿನ ಜಿಲ್ಲಧಿಕಾರಿ ಚಾರುಲತಾ ಸೋಮಲ್‌, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಸಮಾಜ ಸೇವಕರು ಹಾಗೂ ವಕೀಲರಾದ ಎಂ.ಟಿ. ಕಾರ್ಯಪ್ಪನವರು ಪತ್ರಿಕಾ ಹೇಳಿಕೆ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,