Header Ads Widget

Responsive Advertisement

ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಸೇವಾ ಭಾರತಿಯಿಂದ ಉಚಿತ ಆರೋಗ್ಯ ತಪಾಸಣೆ ಉಚಿತ ಔಷಧ ವಿತರಣೆ

ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಸೇವಾ ಭಾರತಿಯಿಂದ ಉಚಿತ ಆರೋಗ್ಯ ತಪಾಸಣೆ ಉಚಿತ  ಔಷಧ ವಿತರಣೆ


ಸೇವಾ ಭಾರತಿ ಕೊಡಗು ಘಟಕದ ವತಿಯಿಂದ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಇದ್ದವರಿಗೆ ಔಷಧ ವಿತರಿಸಲಾಯಿತು.

ಸುಮಾರು ನಲವತ್ತಕ್ಕೂ ಅಧಿಕ ಮಂದಿ ಪೈಸಾರಿ ನಿವಾಸಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಔಷಧಿಯನ್ನು ಪಡೆದರು.

ಕೊಡಗು ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ರಮ್ಯಶ್ರೀ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾಗೂ ಸಂಘದ ಕಾರ್ಯಕರ್ತ ಲಿಖಿತ್, ಕೆದಮುಳ್ಳೂರು ಸಮುದಾಯದ ಆರೋಗ್ಯ ಕೇಂದ್ರದ ಆಧಿಕಾರಿ ನಿತಿನ್ ತಪಾಸಣೆ ಮಾಡಿ ಔಷಧ ವಿತರಿಸಿದರು.

ಈ ಸಂದರ್ಭ ಸೇವಾ ಭಾರತಿ ಕೊಡಗು ಘಟಕದ ಅಧ್ಯಕ್ಷ ಟಿ.ಸಿ.ಚಂದ್ರನ್, ವನವಾಸಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಚೆಕ್ಕೇರ ಮನು ಕಾವೇರಪ್ಪ, ಸೇವಾ ಭಾರತಿ ಪ್ರಮುಖರಾದ ಚಂದ್ರ ಉಡೋತ್, ಪದ್ಮನಾಭ ಹಾಗೂ ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,