Header Ads Widget

ಸರ್ಚ್ ಕೂರ್ಗ್ ಮೀಡಿಯ

ರಿಯಾಯ್ತಿ ದರದಲ್ಲಿ ಕೃಷಿ ಯಂತ್ರೋಪಕರಣ ವಿತರಣೆ

ರಿಯಾಯ್ತಿ ದರದಲ್ಲಿ ಕೃಷಿ ಯಂತ್ರೋಪಕರಣ ವಿತರಣೆ


ಮಡಿಕೇರಿ ಜ.27(ಕರ್ನಾಟಕ ವಾರ್ತೆ):-ಕೃಷಿ ಇಲಾಖೆ ವತಿಯಿಂದ 2021-22 ನೇ ಸಾಲಿನ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ಶೇ.50 ರ ವರೆಗಿನ ರಿಯಾಯ್ತಿ ದರದಲ್ಲಿ ಕಳೆಕೊಚ್ಚುವ ಯಂತ್ರಗಳು (ಪವರ್ ವೀಡರ್), ಬ್ಯಾಟರಿ ಸ್ಪ್ರೇಯರ್ಸ್, ಪವರ್ ಸ್ಪ್ರೇಯರ್ಸ್, ರೋಟೋವೇಟರ್, 5 ಎಚ್.ಪಿ., 8 ಎಚ್.ಪಿ. ಮತ್ತು 10 ಎಚ್‍ಪಿ ಡೀಸೆಲ್ ಪಂಪ್‍ಸೆಟ್‍ಗಳನ್ನು ವಿತರಿಸಲು ಉಪಕರಣಗಳು ಲಭ್ಯವಿದೆ. 

ಆಸಕ್ತ ರೈತರು, ಅಗತ್ಯ ದಾಖಲಾತಿಗಳನ್ನು ನೀಡಿ ಮಡಿಕೇರಿ, ಭಾಗಮಂಡಲ, ನಾಪೋಕ್ಲು ಮತ್ತು ಸಂಪಾಜೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳಲು ಕೋರಿದೆ. ಮತ್ತು ಶೇ.90 ರ ರಿಯಾಯ್ತಿಯಲ್ಲಿ ತುಂತುರು ನೀರಾವರಿ ಘಟಕ ವಿತರಿಸುವ ಕಾರ್ಯಕ್ರಮವಿದ್ದು ರೈತರು ಅರ್ಜಿ ನೀಡಬಹುದು ಎಂದು ಮಡಿಕೇರಿ ತಾ. ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,