Header Ads Widget

Responsive Advertisement

ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.10 ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆ

ಮಾಯಮುಡಿ ಗ್ರಾಮ  ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.10 ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆ


ಪೊನ್ನಂಪೇಟೆ, ಜ.18:  ವಿಧಾನ ಪರಿಷತ್ ಸದಸ್ಯರಾಗಿರುವ ವೀಣಾ ಅಚ್ಚಯ್ಯ ಅವರ ಅನುದಾನದಲ್ಲಿ ಮಾಯಮುಡಿ ಗ್ರಾ  ಪಂ. ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ತಲಾ ರೂ. 5 ಲಕ್ಷ ವೆಚ್ಚದ 2 ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮಗಳಲ್ಲಿ ಪೂಜೆ ಸಲ್ಲಿಸಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮಂಜೂರಾಗಿರುವ ಅನುದಾನದಲ್ಲಿ ಧನುಗಾಲ ಗ್ರಾಮದ ಬಸಪ್ಪ ಕಾಲೋನಿಗೆ ತೆರಳುವ ಮತ್ತು ಮಾಯಮುಡಿ ಗ್ರಾಮದ ಕಲ್ತೋಡು ಪೈಸಾರಿಗೆ ತೆರಳುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಧನುಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು, ಜಿಲ್ಲೆಯಲ್ಲಿ ಇದುವರೆಗೂ ಅಭಿವೃದ್ಧಿ ಕಾಣದ ಬಹಳಷ್ಟು ಗ್ರಾಮೀಣ ರಸ್ತೆಗಳಿವೆ. ತೀರ ಈ ಪೈಕಿ ತೀರಾ ಶೋಚನಿಯವಾಗಿರುವ  ರಸ್ತೆಗಳನ್ನು ಗುರುತಿಸಿ  ಅವುಗಳನ್ನು ಹಂತಹಂತವಾಗಿ  ಅಭಿವೃದ್ಧಿಪಡಿಸಲು ನನ್ನ ಅವಧಿಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಈ ಕಾರಣದಿಂದಲೇ ಸರಕಾರದಿಂದ ಬರುವ ಅನುದಾನಗಳ ಪೈಕಿ ಗರಿಷ್ಠ ಮೊತ್ತವನ್ನು ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ನೀಡಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸುಮಾವಸಂತ್,  ವಿಧಾನಪರಿಷತ್ ಮಾಜಿ ಸದಸ್ಯರಾದ ಸಿ. ಎಸ್. ಅರುಣ್ ಮಾಚಯ್ಯ, ಮಾಯಮುಡಿ ಗ್ರಾ. ಪಂ. ಅಧ್ಯಕ್ಷೆ ಎಂ.ಪಿ. ಮೀನಾ ಪೀಟರ್, ಉಪಾಧ್ಯಕ್ಷೆ ಸುಮಿತ್ರ ರವಿ, ಸದಸ್ಯರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಟಿ.ಸಿ. ನಾರಾಯಣ, ಸಿದ್ದಪ್ಪ ಸುಮಿತ್ರಾ ಬಸವಣ್ಣ, ಶಾಂತ, ಎಚ್.ಆರ್. ಸುಶೀಲಾ, ಸರಸ್ವತಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕಡೇಮಾಡ ಕುಸುಮ ಜೋಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಕೊಳೇರ ಭಾರತಿ, ಜಿ.ಪಂ. ಮಾಜಿ ಸದಸ್ಯೆ ಪಿ. ಬಿ. ಮಂಜುಳ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,