Header Ads Widget

Responsive Advertisement

ವಿಧ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವ ಮೊದಲು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಕಡಿವಾಣ ಹಾಕಬೇಕಿದೆ; ಕೊಡಗು ಸಂರಕ್ಷಣಾ ಒಕ್ಕೂಟ ಮನವಿ

ವಿಧ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವ ಮೊದಲು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಕಡಿವಾಣ ಹಾಕಬೇಕಿದೆ; ಕೊಡಗು ಸಂರಕ್ಷಣಾ ಒಕ್ಕೂಟ ಮನವಿ


ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕು ರಣಕೇಕೆ ಹಾಕುತ್ತಿದ್ದು ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಸ್ಪೋಟಗೊಂಡಿದೆ, ವಿಧ್ಯಾರ್ಥಿಗಳ ಭವಿಷ್ಯ ಮೂರಾಬಟ್ಟೆಯಾಗುವ ಮೊದಲು ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಒಂದಷ್ಟು ಸಮಯ ಬ್ರೇಕ್ ಹಾಕಬೇಕಿದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟದ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಕಳೆದ ಮೂರು ವರ್ಷಗಳಿಂದ ವಿಧ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಆನ್ಲೈನ್ ವಿದ್ಯಾಭ್ಯಾಸದಿಂದ ವಿದ್ಯಾರ್ಥಿಗಳ ಬದುಕು ಹಳಿತಪ್ಪಿದ ರೈಲಿನಂತಾಗಿದೆ. ಈ ಬಾರಿ ಮಕ್ಕಳಿಗೆ ತರಗತಿ ಆರಂಭವಾಗಿ ಒಂದಷ್ಟು ಆಶಾಭಾವನೆ ಮೂಡಿಸಿತ್ತಾದರೂ, ಯಾವುದೇ ಹಿಡಿತವಿಲ್ಲದ ಪ್ರವಾಸೋದ್ಯಮ ಚಟುವಟಿಕೆಗಳಿಂದ ಇದೀಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಕೊರೋನ ಸ್ಪೋಟ ಮತ್ತೊಮ್ಮೆ ವಿಧ್ಯಾರ್ಥಿಗಳನ್ನು ಕತ್ತಲ ಕೂಪದಲ್ಲಿ ತಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರೊಂದಿಗೆ ರಸ್ತೆಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿರುವವರ ಬದುಕನ್ನು ಮತ್ತೊಮ್ಮೆ ಈ ಪ್ರವಾಸೋದ್ಯಮ ಬಲಿ ತೆಗೆದುಕೊಳ್ಳಲಿದೆಯಾ ಎಂಬ ಭಯ ಎಲ್ಲಾರನ್ನು ಕಾಡುತ್ತಿದೆ. ಈ ಕೂಡಲೆ ಒಂದು ತಿಂಗಳ ಕಾಲ ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಕಡಿವಾಣ ಹಾಕಬೇಕಿದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.

ಆನ್ಲೈನ್ ವಿದ್ಯಾಭ್ಯಾಸ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಹಲವಾರು ವಿದ್ಯಾರ್ಥಿಗಳಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ದೃಷ್ಟಿಗೂ ತೊಂದರೆಯಾಗಿದೆ ಮಾತ್ರವಲ್ಲ, ಕೆಲವು ವಿದ್ಯಾರ್ಥಿಗಳು ಹಾದಿ ತಪ್ಪಿದ್ದಾರೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಕೃಷಿಯನ್ನೆ ನಂಬಿ ಬದುಕು ಸಾಗಿಸುತ್ತಿರುವ ಕೊಡಗಿನ ಮಂದಿಗೆ ಇದೀಗ ಕಾಫಿ ಹಾಗೂ ಕರಿಮೆಣಸು ಕೊಯ್ಲಿನ ಸಮಯವಾಗಿದ್ದು, ಒಂದು ವರ್ಷದ ಬದುಕನ್ನು ಕಟ್ಟಿಕೊಳ್ಳುವ ಸಮಯ. ಇದೀಗ ಕೆಲಸದಾಳುಗಳನ್ನು ಕರೆದುಕೊಂಡು ಬರಲು ಭಯದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡವಾರು 90% ಜನರು ಕೃಷಿ ಹಾಗೂ ಕೃಷಿ ಅವಲಂಬಿತ ವ್ಯಾಪಾರವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಇನ್ನೂ ಶೇಕಡಾ 10% ಪ್ರವಾಸೋದ್ಯಮ ಅವಲಂಬಿತರಲ್ಲಿ ಶೇಕಡ 9% ಮಂದಿ ಆರ್ಥಿಕವಾಗಿ ಸದೃಡರಾಗಿದ್ದಾರೆ, ಇವರಿಗೆ ಒಂದು ತಿಂಗಳು ಪ್ರವಾಸೋದ್ಯಮ ಚಟುವಟಿಕೆ ನಿಲ್ಲಿಸುವುದರಿಂದ ಅಷ್ಟೊಂದು ತೊಂದರೆಯಾಗುವುದಿಲ್ಲ, ಉಳಿದ ಕೇವಲ ಒಂದು ಪರ್ಸೆಂಟ್ ಜನರಿಗೆ ಸರಕಾರ ಹಾಗೂ ಜಿಲ್ಲಾಡಳಿತ ಆರ್ಥಿಕವಾಗಿ ಸಹಾಯ ಮಾಡಬೇಕಿದೆ, ಅವರಿಗೆ ಭದ್ರತೆ ನೀಡಬೇಕಿದೆ. ಅದುಬಿಟ್ಟು ಪ್ರವಾಸೋದ್ಯಮಕ್ಕೆ ಮಣೆಹಾಕಿ ಕೊಡಗಿನ ಶೇಕಡಾ 90% ಕೃಷಿ ಅವಲಂಬಿತರನ್ನು ಹಾಗೂ ವಿಧ್ಯಾರ್ಥಿಗಳ ಭವಿಷ್ಯವನ್ನು ಕತ್ತಲ ಕೂಪಕ್ಕೆ ತಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಪ್ರವಾಸೋದ್ಯಮದಿಂದ ಬಳುವಳಿಯಾಗಿ ಜಿಲ್ಲೆಯಲ್ಲಿ ಕೊರೋನ ಸ್ಪೋಟಗೊಂಡು ಹಿಂದೆಂದೂ ಕಾಣದ ಪಾಸಿಟಿವಿಟಿ ದರ ಕಾಣಿಸಿಕೊಂಡಿದೆ, ಕಳೆದ ಸೋಮವಾರ 6.31% ತಲುಪಿದ್ದ ಕೊರೋನ ಪಾಸಿಟಿವಿಟಿ ದರ ಈ ಸೋಮವಾರ(17/01/2022) ದುಬಾರಿ ಎಂಬಂತೆ ಶೇಕಡಾ 23.33% ಪಾಸಿಟಿವಿಟಿ  ಕಾಣಿಸಿಕೊಳ್ಳುವುದರ ಮೂಲಕ ಜಿಲ್ಲೆಯಲ್ಲಿ ಭಯದ ವಾತಾವರಣ ಮೂಡಿಸಿದೆ. 

ಇದೀಗ ರೆಸಾರ್ಟ್ ಹೋಂಸ್ಟೇಗಳಲ್ಲಿ ಅದಿಕ ಸಂಖ್ಯೆಯಲ್ಲಿ ಕೊರೋನ ಸ್ಪೋಟಗೊಳ್ಳುತ್ತಿದ್ದು, ಜಿಲ್ಲೆಯ ಎಲ್ಲಾ ಹೋಂಸ್ಟೇ ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮ ಅವಲಂಬಿತರನ್ನು ಕಡ್ಡಾಯವಾಗಿ ಕೊರೋನ ಸೋಂಕು ತಪಾಸಣೆ ಒಳಪಡಿಸಿದ್ದರೆ ಕೇವಲ ಒಂದೆರಡು ರೆಸಾರ್ಟ್ ಸೀಲ್ಡೌನ್ ಮಾಡುವುದಲ್ಲ, ಬಹುತೇಕ ಹೋಂಸ್ಟೇ ರೆಸಾರ್ಟ್'ಗಳಿಗೆ ಬೀಗ ಬೀಳಲಿದೆ. ಇಷ್ಟಿದ್ದರೂ ಜಿಲ್ಲಾಧಿಕಾರಿಗಳ ವಿಧ್ಯಾರ್ಹತೆಯ ಬಗ್ಗೆ ಪ್ರಶ್ನೆ ಮಾಡಿದ ಕೆಲವರು ವಿಕೇಂಡ್ ಕರ್ಫ್ಯೂ ತೆರವುಗೊಳಿಸಿ ಎಂಬ ಮೊಂಡು ವಾದಕ್ಕೆ ಇಳಿದ್ದರು. ಇದೀಗ ಇಷ್ಟೊಂದು ಪ್ರಮಾಣದಲ್ಲಿ ಕೊರೋನ ಸೋಂಕು ಸ್ಪೋಟಗೊಳ್ಳುವಾಗ ಇವರು ಎಲ್ಲಿ ಹೋದರು. ಕನಿಷ್ಠಪಕ್ಷ ಸೋಂಕು ಸ್ಪೋಟಗೊಂಡಿರುವ ರೆಸಾರ್ಟ್ ಆದರೂ ಬಂದ್ ಮಾಡಿ ಎಂದು ಒತ್ತಾಯಿಸುವ ಸೌಜನ್ಯ ಇವರಿಗಿಲ್ಲವೇ.? ಇವರ ದೃಷ್ಟಿಯಿಂದ ಜಿಲ್ಲೆಯ ಜನರು ಏನಾದರೂ ಜಿಂತೆಯಿಲ್ಲ ಇವರು ಮಾತ್ರ ನೆಮ್ಮದಿಯಿಂದ ಬದುಕಬೇಕು ಎಂಬ ಆಲೋಚನೆಯೇ. ಕೊರೋನ ಸ್ಪೋಟದಿಂದ ಜಿಲ್ಲೆಯ ಪ್ರಮುಖ ಪದ್ದತಿ ಸಂಸ್ಕೃತಿ ಹಾಗೂ ಆಚರಣೆಯ ಒಂದು ಭಾಗವಾಗಿರುವ ಪಿಂಡ ಪ್ರಧಾನ ಸೇರಿದಂತೆ ಇತರ ಸೇವೆಗಳನ್ನು ಭಾಗಮಂಡಲ ತಲಕಾವೇರಿಯಲ್ಲಿ ತಡೆಹಿಡಿದ್ದಾಗ ಇವರ ದ್ವನಿ ಎಲ್ಲಿ ಅಡಗಿತ್ತು. ಇದೆಲ್ಲಾವು ಪ್ರವಾಸೋದ್ಯಮದ ಕೊಡುಗೆಯಲ್ಲದೆ ಬೇರೇನೂ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಸರಕಾರ ಕೊಡಗಿನ ಪ್ರವಾಸಿ ತಾಣಗಳನ್ನು  ಹಾಗೂ ಹೋಂಸ್ಟೇ ರೆಸಾರ್ಟ್'ಗಳನ್ನು ಒಂದು ತಿಂಗಳ ಕಾಲ ಅಥವಾ ಜಿಲ್ಲೆಯಲ್ಲಿ ಕೊರೋನ ಹತೋಟಿಗೆ ಬರುವವರೆಗೂ ಬಂದ್ ಮಾಡುವುದರ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಕೊಡಗು ಜಿಲ್ಲೆ ಲಾಕ್ಡೌನ್ ಆಗಿ ಸ್ಥಳೀಯ ಅಂಗಡಿ ಮುಗ್ಗಟ್ಟುಗಳಿಗೆ ಬೀಗಹಾಕುವ ಮೊದಲು ಅಥವಾ ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಅತಂತ್ರವಾಗುವ ಮುಂಚೆ, ಇಲ್ಲವೇ ಶಾಲೆಗಳಿಗೆ ಮತ್ತೊಮ್ಮೆ ಬೀಗಬೀಳುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,