ಭಾಗಮಂಡಲ.- ಕಾವೇರಿ ನದಿ ಬದಿಯ ಟೆಂಟ್ ತೆರವಿಗೆ ಅಖಿಲ ಕೊಡವ ಸಮಾಜ ಯೂತ್ ವಿಂಗ್' ಒತ್ತಾಯ.
●ಭಾಗಮಂಡಲ ತ್ರಿವೇಣಿ ಸಂಗಮದ ಸಮೀಪ ಕಾವೇರಿ ಹೊಳೆಯ ದಡದಲ್ಲಿ ಗ್ರಾಮ ಪಂಚಾಯಿತಿಯ ಹೊರಗುತ್ತಿಗೆ ಕಾಮಗಾರಿಯ ಕಾರ್ಮಿಕರಿಗೆ ಟೆಂಟ್ ಹಾಕಿಕೊಳ್ಳಲು ಅವಕಾಶ ನೀಡಿದ ಭಾಗಮಂಡಲ ಗ್ರಾಮ ಪಂಚಾಯಿತಿ.
●ಹೊಳೆಯಿಂದ ಕೇವಲ 10 ಅಡಿ ದೂರದಲ್ಲಿದ್ದ ಟೆಂಟ್ ವಾಸಿಗಳ ಮಲ ಮೂತ್ರ ನೇರವಾಗಿ ಹೊಳೆಗೆ ಸೇರುವ ಆತಂಕ.
●ಪಿಂಡ ಪ್ರಧಾನಕ್ಕೆ ತೊಂದರೆಯ ಭಯದಲ್ಲಿ ಭಕ್ತಾದಿಗಳು ಅಖಿಲ ಕೊಡವ ಸಮಾಜ ಯೂತ್ ವಿಂಗ್'ಗೆ ಮನವಿ.
●ಕೂಡಲೇ ಟೆಂಟ್'ಗಳನ್ನು ತೆರವುಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್'ನಿಂದ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಗೆ ಆನ್ಲೈನ್ ದೂರು ದಾಖಲು.
●ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಕ್ಕೆ ಮಣಿದು ಕೂಡಲೇ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯತಿಯಿಂದ ಟೆಂಟ್'ಗಳ ಸ್ಥಳಾಂತರ.
ಕೊಡವರು ಹಾಗೂ ಇಲ್ಲಿನ ಮೂಲ ನಿವಾಸಿಗಳ ಶ್ರದ್ಧಾಭಕ್ತಿಯ ಕೇಂದ್ರವಾದ ಭಾಗಮಂಡಲದ ಪವಿತ್ರ ತ್ರಿವೇಣಿ ಸಂಗಮದ ಹೊಳೆಯ ದಡದಲ್ಲಿ ಟೆಂಟ್ ಹಾಕಿಕೊಂಡ ಗ್ರಾಮ ಪಂಚಾಯತ್ ಹೊರಗುತ್ತಿಗೆ ಕಾರ್ಮಿಕರಿಂದ ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ, ತ್ರಿವೇಣಿ ಸಂಗಮದಿಂದ ಕೇವಲ 30 ರಿಂದ 40 ಮೀಟರ್ ದೂರದಲ್ಲಿ ತ್ರಿವೇಣಿ ಸಂಗಮಕ್ಕೆ ಸೇರುವ ಕಾವೇರಿ ಹೊಳೆಯಿಂದ ಕೇವಲ 10 ಅಡಿ ದೂರದ ಹೊಳೆದಂಡೆಯಲ್ಲಿಯೇ ಗ್ರಾಮ ಪಂಚಾಯತಿಯ ಹೊರಗುತ್ತಿಗೆಯ ವಲಸೆ ಕಾರ್ಮಿಕರಿಗೆ ಸೆಡ್ಡು ನಿರ್ಮಿಸಲು ಅವಕಾಶ ಮಾಡಿಕೊಟ್ಟು, ಕಾರ್ಮಿಕರ ಮಲಮೂತ್ರ ನೇರವಾಗಿ ತ್ರಿವೇಣಿ ಸಂಗಮಕ್ಕೆ ಸೇರುವಂತೆ ಅವಕಾಶ ಮಾಡಿಕೊಟ್ಟಿರುವುದು ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ಕಾರ್ಮಿಕರಿಗೆ ದೂರದಲ್ಲಿ ಅಥವಾ ಪಂಚಾಯತ್ ಅಕ್ಕಪಕ್ಕದಲ್ಲಿ ತಂಗಲು ಅವಕಾಶ ಮಾಡಿ ಕೊಡುವುದು ಬಿಟ್ಟು, ತ್ರಿವೇಣಿ ಸಂಗಮದ ಹೊಳೆಯ ದಂಡೆಯಲ್ಲಿಯೇ ಇವರಿಗೆ ಶೆಡ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ, ಟೆಂಟ್ ನಿರ್ಮಿಸಿಕೊಂಡ ಜಾಗದಲ್ಲಿ ಕಾರ್ಮಿಕರು ಮಾಡುವ ಗಲೀಜು ನದಿ ನೀರನ್ನು ಸೇರಿ ಇದನ್ನೆ ನಾವು ಪವಿತ್ರ ತೀರ್ಥಸ್ನಾನ ಮಾಡುವ ಅನಿವಾರ್ಯತೆ ಎದುರಾಗಿದೆ. ಒಂದೆಡೆ ಪ್ರಧಾನ ಮಂತ್ರಿಯವರು ಸ್ವಚ್ಛ ಗ್ರಾಮ ಯೋಜನೆ ಹಾಗೂ ನದಿ ನೀರು ಸ್ವಚ್ಛತಾ ಆಂದೋಲನ ಕೈಗೊಂಡಿರುವಾಗ ಈ ರೀತಿ ಜೀವನದಿಯನ್ನು ಕಲುಷಿತ ಮಾಡುವುದು ಸರಿಯಲ್ಲ, ಇದು ಸ್ಥಳೀಯರ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ ಕೂಡಲೆ ಸೆಡ್'ಗಳನ್ನು ತೆರವುಗೊಳಿಸಬೇಕು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿ.ಡಿ.ಓ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ದೂರನ್ನು ನೀಡಿತ್ತು. ಕೂಡಲೇ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡುವ ಮೂಲಕ ಹೊಳೆಯ ದಡದಲ್ಲಿ ನಿರ್ಮಿಸಲಾದ ಟೆಂಟ್'ಗಳನ್ನು ಸ್ಥಳಾಂತರಿಸಿದ್ದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕಾವೇರಿ ಮಾತೆ ಕೊಡವರ ಕುಲದೇವತೆಯಾಗಿದ್ದಾಳೆ ಮಾತೆಗೆ ಅಪಚಾರವಾದರೆ ಹಾಗೂ ನಮ್ಮ ಧಾರ್ಮಿಕ ಭಾವನೆಗೆ ದಕ್ಕೆಯಾದರೆ ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಹಾಗೇ ಕೊಡಗಿನಲ್ಲಿ ನೆಲೆ ಕಂಡುಕೊಂಡಿರುವ ವಿವಿಧ ಸಮುದಾಯ ಕೂಡ ಕಾವೇರಿ ಮಾತೆಯನ್ನು ಹೆತ್ತಮ್ಮನಂತೆ ಆರಾದಿಸುತ್ತಾರೆ. ಹೀಗಿರುವಾಗ ಸ್ಥಳೀಯ ಗ್ರಾಮ ಪಂಚಾಯಿತಿ ತಲಕಾವೇರಿ ಭಾಗಮಂಡಲ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು.ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ತಮ್ಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಕರೆತರಲಾದ ಹೊರಜಿಲ್ಲೆ ಕಾರ್ಮಿಕರನ್ನು ತ್ರಿವೇಣಿ ಸಂಗಮದಿಂದ ಕೇವಲ 30ರಿಂದ 40 ಮೀಟರ್ ದೂರದಲ್ಲಿ ಹೊಳೆಯಿ ದಡದ ಮೇಲೆ ಗುಡಿಸಲು ನಿರ್ಮಿಸಲು ಅವಕಾಶ ಮಾಡಿಕೊಟ್ಟು, ಯಾವುದೇ ಶೌಚಾಲಯ ವ್ಯವಸ್ಥೆ ಇಲ್ಲದೆ ಹೆಂಗಸರು ಮಕ್ಕಳು ಸೇರಿದಂತೆ ಇಲ್ಲಿನ ಕಾರ್ಮಿಕರ ಮಲಮೂತ್ರ ನೇರವಾಗಿ ಕಾವೇರಿ ನದಿಗೆ ಸೇರಿ ಕೇವಲ 30 ಮೀಟರ್ ದೂರದಲ್ಲಿರುವ ತ್ರಿವೇಣಿ ಸಂಗಮಕ್ಕೆ ಸೇರುವ ಅವಕಾಶ ಹೆಚ್ಚಾಗಿತ್ತು. ಸಂಗಮದಲ್ಲಿ ಪಿಂಡ ಪ್ರಧಾನ ಮಾಡಿ ಇದೇ ಮಲೀನ ನೀರಿನಲ್ಲಿ ತೀರ್ಥ ಸ್ನಾನ ಮಾಡುವ ಅನಿವಾರ್ಯತೆ ಎದುರಾಗಿತ್ತು, ಇದನ್ನು ಮನಗಂಡು ಭಕ್ತರಿಂದ ನಮಗೆ ದೂರು ಬಂದ ತಕ್ಷಣ ಮಡಿಕೇರಿ ಗ್ರಾಮಾಂತರ ವಿಭಾಗದ ವೃತ್ತ ನಿರೀಕ್ಷಕರಿಗೆ ಸದ್ಯಕ್ಕೆ ಆನ್ಲೈನ್ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಕೂಡಲೇ ಕ್ರಮ ಕೈಗೊಂಡ ಪೊಲೀಸ್ ಇಲಾಖೆ 6 ಗುಡಿಸಲುಗಳನ್ನು ತೆರವುಗೊಳಿಸಿದೆ. ತ್ವರಿತಗತಿಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ ಇದು ಸ್ವಾಗತಾರ್ಹ ಎಂದು ಪ್ರವೀಣ್ ಉತ್ತಪ್ಪ ಹೇಳಿದ್ದಾರೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network