Header Ads Widget

ಸರ್ಚ್ ಕೂರ್ಗ್ ಮೀಡಿಯ

"ಪರಾಕ್ರಮ ದಿನ" ಆಚರಣೆ

"ಪರಾಕ್ರಮ ದಿನ" ಆಚರಣೆ


ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವಾದ ಜನವರಿ 23ರಂದು "ಪರಾಕ್ರಮ ದಿನ"ವಾಗಿ ಮಡಿಕೇರಿ ನಗರದ ರಾಘವೇಂದ್ರ ದೇವಾಲಯದ ಹತ್ತಿರದಲ್ಲಿ ಆಚರಿಸಲಾಯಿತು.

ಸ್ಥಳೀಯ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜ(ಜೆ)‌ ಹಾಗೂ ರವಿಸೂರ್ಯ ಮಕ್ಕಳ ಬಳಗದ ವತಿಯಿಂದ ನಡೆದ ಈ ಸರಳ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀಮತಿ ನಿಶಿತನಂದೀಶ್ ರವರು ಮಾತನಾಡಿ ಇಂತಹ ರಾಷ್ಟ್ರನಾಯಕರ ಕಾರ್ಯಕ್ರಮ ಹೆಚ್ಚು ಹೆಚ್ಚಾಗಿ ಇಲ್ಲಿ ನಡೆಯುವಂತಾಗಲಿ ಇಲ್ಲಿನ ಮಕ್ಕಳಿಗೆ ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಅಮರರಾಗಿರುವ ರಾಷ್ಟ್ರನಾಯಕರ ಬಗ್ಗೆ ಮಾಹಿತಿ ದೊರೆತಲ್ಲಿ ಮಕ್ಕಳ ಭವಿಷ್ಯದ ಮುಂದಿನ ದಿನಗಳು ರಾಷ್ಟ್ರೀಯತೆಯಿಂದ ಮೈಗೂಡಿ ರಾಷ್ಟ್ರಕ್ಕಾಗಿ ತಾವುಗಳು ಸಮರ್ಪಿಸಿಕೊಂಡು ರಾಷ್ಟ್ರದ ಏಳಿಗೆಗೆ ತಮ್ಮದೆ ಆದ ರೀತಿಯಲ್ಲಿ ಸೇವೆ ಸಲ್ಲಿಸಲು ಪ್ರರಣೆ ದೊರಕುವಂತಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮತ್ತೋರ್ವ ಅಥಿತಿ ಸಾಮಾಜಿಕ ಕಾರ್ಯಕರ್ತರಾದ ಸಂದೇಶ್‌ರವರು ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರು ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಜೀವನ ಸಾಹಸ ಗಾಥೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ರಾಣಿಅರುಣ್, ಅಧ್ಯಕ್ಷರಾದ ಶ್ರೀಮತಿ ಸೌಮ್ಯಜಗ್ಗೇಶ್, ಕಾರ್ಯದರ್ಶಿಗಳಾದ ಜಯಪಾಲಾಕ್ಷ, ಖಜಾಂಚಿಗಳಾದ ತಾಹೀರ, ರವಿಸೂರ್ಯ ಮಕ್ಕಳ ಬಳಗದ ರವಿಸೂರ್ಯ ವಶಿಷ್ಠ ಮತ್ತು ಬಳಗದ ಮಕ್ಕಳು ಹಾಗೂ ಸ್ಥಳಿಯ ನಿವಾಸಿಗಳು, ಮಹಿಳೆಯರು, ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕುಮಾರಿ ಗ್ರೀಷ್ಮಜ್ಯೋತಿರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,