Header Ads Widget

ಸರ್ಚ್ ಕೂರ್ಗ್ ಮೀಡಿಯ

ಫೆ.28 ರಂದು ಪೊನ್ನಂಪೇಟೆಯಲ್ಲಿ ‘ಕೃಷ್ಣೇಗೌಡನ ಆನೆ' ನಾಟಕ ಪ್ರದರ್ಶನ

ಫೆ.28 ರಂದು ಪೊನ್ನಂಪೇಟೆಯಲ್ಲಿ ‘ಕೃಷ್ಣೇಗೌಡನ ಆನೆ' ನಾಟಕ ಪ್ರದರ್ಶನ 


ಮಡಿಕೇರಿ ಫೆ.24: ಮೈಸೂರು ರಂಗಾಯಣ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗಡಿಯಲ್ಲಿ ಕನ್ನಡ ನಾಟಕ ಎಂಬ ಹೆಸರಿನಲ್ಲಿ ‘ಕೃಷ್ಣೇಗೌಡನ ಆನೆ' ನಾಟಕವು ಪ್ರದರ್ಶನವು ಫೆಬ್ರವರಿ 28 ರಂದು ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ಹಿರಿಯ ಪ್ರಾಥಮಿಕ ಪಬ್ಲಿಕ್ ಶಾಲೆಯ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಲಿದೆ. 

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ             ಡಾ.ಸಿ.ಸೋಮಶೇಖರ, ಪೊನ್ನಂಪೇಟೆ ಗ್ರಾ.ಪಂ.ಅಧ್ಯಕ್ಷರಾದ ಅಧ್ಯಕ್ಷರಾದ ಗಿರಿಜಾ ವೆಂಕಟೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಂ.ಎಸ್.ಕುಶಾಲಪ್ಪ ಮತ್ತು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಇತರರು ಭಾಗವಹಿಸಲಿದ್ದಾರೆ. 

ಸಭಾ ಕಾರ್ಯಕ್ರಮದ ನಂತರ ಸಂಜೆ 6.30 ಗಂಟೆಗೆ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಆರ್.ನಾಗೇಶ್ ನಿರ್ದೇಶನದ 'ಕೃಷ್ಣೇಗೌಡನ ಆನೆ' ನಾಟಕವನ್ನು ರಂಗಾಯಣದ ಕಿರಿಯ ರೆಪರ್ಟರಿ ಕಲಾವಿದರು ಅಭಿನಯಿಸಲಿದ್ದಾರೆ. ಇದರೊಂದಿಗೆ ರಂಗಾಯಣದ ಕಲಾವಿದರಿಂದ ರಂಗಸಂಗೀತ ಕಾರ್ಯಕ್ರಮ ನಡೆಯಲಿದೆ.

'ಕೃಷ್ಣೇಗೌಡನ ಆನೆ' ನಾಟಕದ ಸಾರಾಂಶ: `ಕೃಷ್ಣೇಗೌಡನ ಆನೆ' ತೇಜಸ್ವಿಯವರ ಅತ್ಯಂತ ಪ್ರಮುಖ ಕತೆಗಳಲ್ಲಿ ಒಂದು, ಭಾರತದ ಅನೇಕ ಭಾμÉಗಳಿಗೆ ಭಾμÁಂತರಗೊಂಡಿರುವ ಈ ಕಥೆ ಪ್ರಗತಿಯ ಹಾದಿಯಲ್ಲಿ ದಾಪುಗಾಲಿಡುವಲ್ಲಿ ಒಂದು ಊರಿನ ಜನ ಎದುರಿಸುವ ಸಮಸ್ಯೆಗಳು, ಗೊಂದಲಗಳು ಮುಂತಾದವುಗಳನ್ನು ಚಿತ್ರಿಸುತ್ತಾ ಹೋಗುತ್ತದೆ. ಕೃಷ್ಣೇಗೌಡನ ಎಂಬುವವನು ಆನೆಯೊಂದನ್ನು ಸಾಕಿ, ಆ ಆನೆಯು ಊರಿನ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣವಾಗಿ ಬಿಡುವಂತೆ ಕಥೆಯನ್ನು ಬರೆಯಲಾಗಿದೆ. ಆನೆಯೊಂದನ್ನು ಸಾಹಿತ್ಯಿಕ ಪ್ರತಿಮೆಯಾಗಿರಿಸಿಕೊಂಡು ಊರಿನ ಜನಗಳ ಮನಸ್ಥಿತಿ ಹಾಗೂ ಪ್ರಗತಿಯ ಹಾದಿಯಲ್ಲಿ ಅವರು ಪಡುವ ಪರಿಪಾಟಲುಗಳನ್ನು ಹಾಸ್ಯಮಯವಾಗಿ ಈ ಕಥೆ ಚಿತ್ರಿಸುತ್ತದೆ ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,