Ad Code

Responsive Advertisement

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ; ಆಹಾರ ವ್ಯಾಪಾರಿಗಳು ಎಫ್‍ಎಸ್‍ಎಸ್‍ಎಐ ನೋಂದಣಿ/ ಪರವಾನಗಿ ಪಡೆಯಲು ಸೂಚನೆ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ; ಆಹಾರ ವ್ಯಾಪಾರಿಗಳು ಎಫ್‍ಎಸ್‍ಎಸ್‍ಎಐ ನೋಂದಣಿ/ ಪರವಾನಗಿ ಪಡೆಯಲು ಸೂಚನೆ


ಮಡಿಕೇರಿ ಫೆ.24: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ನಿಯಮ ಮತ್ತು ನಿಬಂಧನೆ 2011 ದೇಶದಾದ್ಯಂತ 5 ನೇ ಆಗಸ್ಟ್ 2011 ರಿಂದ ಜಾರಿಗೆ ಬಂದಿದೆ.  

ಆಹಾರ ಪದಾರ್ಥ ತಯಾರಕರು, ವಿತರಕರು, ಸಗಟುದಾರರು, ಪ್ಯಾಕರ್‍ಗಳು, ಸಂಗ್ರಹಕಾರರು, ಚಿಲ್ಲರೆ ಮಾರಾಟಗಾರರು, ಡಾಬಾ, ಸ್ವೀಟ್ ಸ್ಟಾಲ್, ಮೆಸ್, ಕ್ಯಾಂಟೀನ್, ಮಾಂಸ ಮಾರಾಟಗಾರರು, ಹಣ್ಣು/ ತರಕಾರಿ, ರಸ್ತೆಬದಿ ವ್ಯಾಪಾರಿಗಳು, ಹಾಲಿನ ವ್ಯಾಪಾರಿಗಳು, ಸಾಗಾಣಿಕೆದಾರರು, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕ, ಪೇಯಿಂಗ್‍ಗೆಸ್ಟ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮದ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಹಾಸ್ಟೇಲ್, ರಸ್ತೆಬದಿ ವ್ಯಾಪಾರಿಗಳು, ನ್ಯಾಯಬೆಲೆ ಅಂಗಡಿ ನಡೆಸುವವರು ಹಾಗೂ ಇತರ ಎಲ್ಲಾ ಆಹಾರ ಪದಾರ್ಥಗಳ ವ್ಯಾಪಾರಿಗಳು ಎಫ್‍ಎಸ್‍ಎಸ್‍ಎಐ ನೋಂದಣಿ/ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು. foscos.fssai.gov.in  ನಲ್ಲಿ ಲಾಗಿನ್ ಆಗಿ ಆನ್‍ಲೈನ್ ಎಫ್‍ಎಸ್‍ಎಸ್‍ಎಐ ನೋಂದಣಿ/ ಪರವಾನಗಿಯನ್ನು ತಾವೇ ಸ್ವತಃ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ.  

ಈಗಾಗಲೇ ಆಹಾರ ಎಫ್‍ಎಸ್‍ಎಸ್‍ಎಐ ನೋಂದಣಿ/ ಪರವಾನಗಿ ಪಡೆದವರು ಅವಧಿ ಮುಕ್ತಾಯಕ್ಕೆ ಕನಿಷ್ಠ 30 ದಿನಗಳ ಮುಂಚಿತವಾಗಿ ನವೀಕರಿಸಿಕೊಳ್ಳಬೇಕಿದೆ. ತಪ್ಪಿದ್ದಲ್ಲಿ 30 ದಿನಗಳ ಮುಂಚಿತವಾಗಿ ಪ್ರತಿದಿನಕ್ಕೆ ರೂ.100/- ರಂತೆ ದಂಡ ಪಾವತಿ ಮಾಡಬೇಕಿದೆ. ಎಫ್‍ಎಸ್‍ಎಸ್‍ಎಐ ನೋಂದಣಿ/ ಪರವಾನಗಿ ಪಡೆಯದೆ ಆಹಾರ ಉದ್ದಿಮೆ ನಡೆಸುವವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ನಿಯಮ ಮತ್ತು ನಿಬಂಧನೆ 2011 ರ ಪ್ರಕಾರ 6 ತಿಂಗಳ ಶಿಕ್ಷೆ ಮತ್ತು 5 ಲಕ್ಷ ವರೆಗೆ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಹೆಚ್ಚಿನ ಮಾಹಿತಿಗೆ ಅಂಕಿತ ಅಧಿಕಾರಿಗಳ ಕಚೇರಿ (ಎಫ್‍ಎಸ್‍ಎಸ್‍ಎ) ಜಿಲ್ಲಾ ಸರ್ವೇಕ್ಷಣಾ ಘಟಕದ ಕಟ್ಟಡ (ಓಂಕಾರೇಶ್ವರ ದೇವಸ್ಥಾನ ರಸ್ತೆ) ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,