Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗಿನಲ್ಲಿ ಮೊದಲ ಬಾರಿಗೆ ಮೊಗೇರರ ದುಡಿಕುಣಿತದ ತರಬೇತಿ ಶಿಬಿರ ಆಯೋಜನೆ

ಕೊಡಗಿನಲ್ಲಿ ಮೊದಲ ಬಾರಿಗೆ ಮೊಗೇರರ ದುಡಿಕುಣಿತದ ತರಬೇತಿ ಶಿಬಿರ ಆಯೋಜನೆ


ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸಹಕಾರದೊಂದಿಗೆ ಮೊಗೇರ ಜನಾಂಗದ ಪ್ರಾಚೀನ ಜನಪದ ಕಲೆಯಾಗಿರುವ ಮೊಗೇರರ ದುಡಿಕುಣಿತದ ತರಬೇತಿ ಶಿಬಿರವನ್ನು  ಈ ತಿಂಗಳ 24-2-2022 ರಿಂದ 25-02-2022 ಎರಡು ದಿವಸ ಮಡಿಕೇರಿಯಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕೊಡಗಿನ ಪಿ.ಎಂ.ರವಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಿ.ಎಂ. ರವಿಯವರು, “ದುಡಿ“ ಮೊಗೇರ ಜನಾಂಗದ ಕುಲ ಲಾಂಛನವಾಗಿದ್ದು, ಮೊಗೇರ ಜನಾಂಗದ ಅವಿಭಾಜ್ಯ ಅಂಗವಾಗಿದೆ. ಮೊಗೇರರ ದುಡಿಕುಣಿತ ಮದುವೆ, ದೈವರಾಧನೆ ಸೇರಿದಂತೆ ಶುಭ ಕಾರ್ಯಗಳಿಗೆ ಬಳಸುವ ಜನಾಂಗದ ಮಾಧ್ಯಮವಾಗಿದೆ. ತುಳುವಿಗೆ ಶ್ರೀಮಂತ ಜನಪದ ಸಾಹಿತ್ಯ ನೀಡಿರುವ ದುಡಿಕುಣಿತವು ಶಿವರಾಮ ಕಾರಂತರ “ಚೋಮನ ದುಡಿ", ಮತ್ತು ಕೊಯಿರ ಬಾಳೆಪುಣಿಯವರ “ದುಡಿಕುಣಿತ“ ಹಾಗೆಯೇ, "ಡಾ" ಅಭಯ್ ಕುಮಾರ್ ಕೌಕ್ರಡಿಯವರ ಮೊಗೇರರ ಸಾಂಸ್ಕೃತಿಕ ಅಧ್ಯಯನ ಗ್ರಂಥಗಳಿಂದ ದುಡಿಕುಣಿತಕ್ಕೆ ಸಾಕಷ್ಟು ಮಹತ್ವ ಮತ್ತು ಪ್ರಚಾರ ದೊರೆಕಿದೆ.

ಕೊಡಗು ಜಿಲ್ಲೆಯಲ್ಲಿ ದುಡಿಕುಣಿತದ ಮಹತ್ವ ಹಾಗೂ ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದುಡಿಕುಣಿತ ಮತ್ತು ಪಾಡ್ದನ ಪರಿಣಿತರಿಂದ ತರಬೇತಿ ನೀಡಲಾಗುವುದು. ಮುಂದಿನ ದಿನದಲ್ಲಿ ಮೊಗೇರ ಜನಾಂಗದ ಮದುವೆ ಸೇರಿದಂತೆ ಶುಭಾಕಾರ್ಯಗಳಿಗೆ ಕಡ್ಡಾಯವಾಗಿ ದುಡಿಯನ್ನು ಬಳಸುವುದು. ಮದುವೆ ಚಪ್ಪರದ ಕನ್ಯಕಂಬದಲ್ಲಿ ದುಡಿಯನ್ನು ಕಟ್ಟುವಂತೆ ಎಲ್ಲ ಮೊಗೇರ ಭಾಂಧವರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

( ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೊಡಗಿನ ಪಿ.ಎಂ.ರವಿ )
ದುಡಿಕುಣಿತ ಮತ್ತು ಪಾಡ್ದನ ತರಬೇತಿ ಶಿಬಿರದಲ್ಲಿ ಮೊಗೇರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತರಬೇತಿಯನ್ನು ಪಡೆದು ಮೊಗೇರ ಜನಾಂಗದ ಸಂಸ್ಕೃತಿ, ಪದ್ದತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಸಂಪೂರ್ಣ ಸಹಕಾರ ನೀಡಬೇಕೆಂದು ಪತ್ರಿಕಾ ಹೇಳಿಕೆಯ ಮೂಲಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕೊಡಗಿನ ಪಿ.ಎಂ.ರವಿ  ಮನವಿ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ: 9972073295 ಈ ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ಡಮ್ಮ ಡಮ್ಮ ಢಕ್ಕ ಢಕ್ಕ…. ಡಮ್ಮ ಡಮ್ಮ ಢಕ್ಕ ಢಕ್ಕ …….ಇಲ್ಲ. ಚೋಮನ ದುಡಿ ಇನ್ನೂ ನಿಂತಿಲ್ಲ; ಕೇಳಿಸುತ್ತಲೇ ಇದೆ. ಡಮ್ಮ ಡಮ್ಮ ಢಕ್ಕ ಢಕ್ಕ

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,