Header Ads Widget

ಸರ್ಚ್ ಕೂರ್ಗ್ ಮೀಡಿಯ

ಬೆಳ್ಳಿ ತೆರೆಗೆ ಸಿದ್ದಗೊಂಡಿದೆ "ತೇಂಬಾಡ್" ಕೊಡವ ಭಾಷೆಯ ಸಿನೆಮಾ

ಬೆಳ್ಳಿ ತೆರೆಗೆ ಸಿದ್ದಗೊಂಡಿದೆ "ತೇಂಬಾಡ್" ಕೊಡವ ಭಾಷೆಯ  ಸಿನೆಮಾ


ಚಿತ್ರದ ಶಿರ್ಷಿಕೆಯೇ ಕಥೆ ಹೇಳುವಂತ್ತೆ ಒಗ್ಗಟ್ಟನ್ನು ತಿರುಳಾಗಿಸಿಕೊಂಡು ಎಣೆಯಲಾದ ಕೊಡವ ಸಂಸಾರಿಕ ಚಿತ್ರವೊಂದು ಬೆಳ್ಳಿ ತೆರೆಯ ಮೇಲೆ ಪ್ರದರ್ಶನಗೊಳ್ಳಲು ಸಿದ್ದಗೊಂಡಿದೆ. ಸಂಸಾರಿಕ ಕಥಾ ಹಂದರವನ್ನು ಹೊಂದಿರುವ ಭಕ್ತಿ ಪ್ರೊಡಕ್ಷನ್ ನಿರ್ಮಾಣದ "ತೇಂಬಾಡ್" ಕೊಡವ ಭಾಷೆಯ ಸಿನೆಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದೇ ಫೆಬ್ರವರಿ 20ರಂದು ಸಿನೆಮಾದ ಟ್ರೈಲರ್ ಹಾಗೂ ಹಾಡು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕರಾದ ತಡಿಯಂಗಡ ಗಾನ ಸೋಮಣ್ಣ ತಿಳಿಸಿದ್ದಾರೆ.


ಕೊಡಗಿನ ಸುಂದರ ಪರಿಸರದಲ್ಲಿ "ಅಪ್ ಟೌನ್" ಛಾಯಾಗ್ರಹಣ ತಂಡ ಈ ಚಿತ್ರವನ್ನು ಚಿತ್ರೀಕರಿಸಿದ್ದು, ನಾಗಿಣಿ ಕನ್ನಡ ಧಾರವಾಹಿ ಖ್ಯಾತಿಯ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಮುಖ್ಯ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಕಲಾವಿದರಾದ ವಾಂಚೀರ ನಾಣಯ್ಯ, ಪುಗ್ಗೆರ ವಿಶು, ಆಂಡಮಾಡ ಪವನ್, ಪುಳ್ಳಂಗಡ ಶರಣು ಬೆಳ್ಳಿಯಪ್ಪ, ಮಾದೆಯಂಡ ಸಂಪಿ, ನಂದಿನೆರವಂಡ ಅನೂಪ್ ಬೋಪಣ್ಣ, ನಂದಿನೆರವಂಡ ಆಕಾಶ್ ಪೆಮ್ಮಯ್ಯ, ನಂದಿನೆರವಂಡ ಶರತ್ ಮೇದಪ್ಪ, ಬೊಪ್ಪಂಡ ತಾರ, ನಾಳಿಯಂಡ ಶಾಂತಿ, ಚೆನ್ನಪ್ಪಂಡ ಕಲ್ಪನ, ನೆಲ್ಲಚಂಡ ರಿಷಿ, ಮುಕ್ಕಾಟಿರ ಮಂಜು, ಕಟ್ಟೇರ ವಿದ್ಯಾ ಅಯ್ಯಪ್ಪ, ಮುಕ್ಕಾಟಿರ ಮೌನ ಬೋಪಣ್ಣ, ಮುಂಡಚಾಡಿರ ರಿನ್ನಿ ಭರತ್, ನೂರೇರ ಪ್ರಜ್ಞಾ ಪೂವಯ್ಯ, ನೂರೆರ ನಿರನ್ ಉತ್ತಯ್ಯ, ತಡಿಯಂಗಡ ಆನ್ಯ ಸೋಮಣ್ಣ, ಬಿದ್ದಂಡ ಇಹಾನಿ ದೇವಯ್ಯ, ಚೋಳಂಡ ದೇಶ್ನಾ ದೇಚಮ್ಮ ಮೊದಲಾದ ಕಲಾವಿದರು ನಟಿಸಿದ್ದಾರೆ.


ತಡಿಯಂಗಡ ಗಾನ ಸೋಮಣ್ಣ ಕಥೆಗೆ ಮುಕ್ಕಾಟೀರ ಮೌನಿ ನಾಣಯ್ಯ ಹಾಗೂ ನೂರೇರ ಸರಿತಾ ಉತ್ತಯ್ಯ ಚಿತ್ರಕಥೆಯನ್ನು ಬರೆದಿದ್ದಾರೆ. ಸಿನೆಮಾದಲ್ಲಿ ಮೂರು ಹಾಡುಗಳಿದ್ದು, ಮುಕ್ಕಾಟೀರ ಮೌನಿ ನಾಣಯ್ಯ ಸಾಹಿತ್ಯಕ್ಕೆ  ಸಂಗೀತ ನಿರ್ದೇಶಕ ವಿನಯ್ ರಂಗದೂಳ್ ಹಾಗೂ ಮನು ರಾವ್ ಸಂಗೀತವನ್ನು ನೀಡಿದ್ದಾರೆ. ಗಾಯಕರಾದ ಸಣ್ಣುವಂಡ ನಿಶ್ಮಾ ರಕ್ಷಕ್ ಹಾಗೂ ರಕ್ಷಿತ್ ಪಾಣತಲೆ ಮಧುರ ಕಂಠದಲ್ಲಿ ಹಾಡು ಮೂಡಿ ಬಂದಿದೆ. ಚಿತ್ರದ ಸಂಕಲಕಾರರಾಗಿ ಜಫ್ಸನ್ ಪಿಂಟೋ ಸಿನೆಮಾಕ್ಕೆ ಜೀವ ತುಂಬಿದ್ದು, ಚಿತ್ರದ ಪ್ರೊಡಕ್ಷನ್ ವಿಭಾಗದಲ್ಲಿ ಸೋಮಣ್ಣ, ಚೇಂದಿರ ಸೂರಜ್, ನೆರವಂಡ ಉಮೇಶ್ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ನಿರ್ಮಾಪಕರಾಗಿ ರಚನಾ ಮೈಸೂರ್ ಬಂಡವಾಳ ಹೂಡಿದ್ದು, ಸಹ ನಿರ್ಮಾಪಕರಾಗಿ ತಡಿಯಂಗಡ ಸೋಮಣ್ಣ ಹಾಗೂ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಕಾರ್ಯನಿರ್ವಹಿಸಿದ್ದಾರೆ, ಚಿತ್ರದ ನಿರ್ದೇಶನ ಜವಬ್ದಾರಿಯನ್ನು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ತಡಿಯಂಗಡ ಗಾನ ಸೋಮಣ್ಣ ಹೊತ್ತುಕೊಂಡಿದ್ದು, ಇವರಿಗೆ ಸಹಾಯಕರಾಗಿ ಮಾತಂಡ ದೇಚಮ್ಮ ಅಚ್ಚಯ್ಯ ಹಾಗೂ ಚಮ್ಮಟೀರ ಹೃಷಿ ಪಾರ್ವತಿ ಕರ್ತವ್ಯ ನಿರ್ವಹಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,