Header Ads Widget

ಸರ್ಚ್ ಕೂರ್ಗ್ ಮೀಡಿಯ

ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಸುತ್ತಾಮುತ್ತಲಿನ ಊರುಗಳಿಗೆ ಮಾತ್ರ ಸೀಮಿತವೇ ಅ.ಕೊ.ಸ.ಯೂ.ವಿ ಕಿಡಿ

ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಸುತ್ತಾಮುತ್ತಲಿನ ಊರುಗಳಿಗೆ ಮಾತ್ರ ಸೀಮಿತವೇ ಅ.ಕೊ.ಸ.ಯೂ.ವಿ ಕಿಡಿ


ಸುದೀರ್ಘ ಅವಧಿಯಿಂದ ತೆರವಾಗಿದ್ದ ತಲಕಾವೇರಿ ಹಾಗೂ ಭಾಗಮಂಡಲ ವ್ಯವಸ್ಥಾಪನಾ ಸಮೀತಿಗೆ ಇದೀಗ 9 ಜನ ಸದಸ್ಯರನ್ನು ನೇಮಕ ಮಾಡುವ ಮೂಲಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದ್ದರೆ, ಕೊಡವ ಹಾಗೂ ಅಮ್ಮ ಕೊಡವ ಜನಾಂಗವನ್ನು ಕತ್ತಲೆಯಲ್ಲಿಟ್ಟು ಜನಪ್ರತಿನಿಧಿಗಳು ಇವರಿಗೆ ಬೇಕಾದವರನ್ನು ಇವರ ಮೂಗಿನ ನೇರಕ್ಕೆ ನೇಮಿಸಿಕೊಂಡಿದ್ದಾರೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆರೋಪಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಒಂದು ಜನಾಂಗ ಹಾಗೂ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಈ ವ್ಯವಸ್ಥಾಪನಾ ಸಮೀತಿಯನ್ನು ರಚಿಸಲಾಗಿದೆ ಕೂಡಲೆ ಇದನ್ನು ಪುನರ್ ಪರಿಶೀಲನೆ ಮಾಡಿ ಸರಿಪಡಿಸದಿದ್ದರೆ ಕಾನೂನಿನ ಮೂಲಕ ಉತ್ತರ ಕೊಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕಳಂಕ ರಹಿತ ವ್ಯಕ್ತಿಗಳನ್ನು ಹಾಗೂ ಕಾವೇರಿ ಮಾತೆಯ ಮೇಲೆ ಭಯ ಭಕ್ತಿ ಇರುವವರನ್ನು ನೇಮಕ ಮಾಡುವುದರ ಮೂಲಕ, ಜನಾಂಗ ಜನಾಂಗಗಳ ನಡುವಿನ ಸಾಮರಸ್ಯಕ್ಕೆ ನಾಂದಿ ಹಾಡಬೇಕಿದ್ದ ಜನಪ್ರತಿನಿಧಿಗಳು ಇದೀಗ ಕೆಲವು ಕಳಂಕಿತರನ್ನು ಸೇರಿದಂತೆ ಜನಾಂಗ ಜನಾಂಗ ಮದ್ಯ ದ್ವೇಷ ಕಾರುವವರನ್ನು ಹಾಗೂ ದೇವಸ್ಥಾನದ ಜಾಗ ಕಬಳಿಸಿದ ಒಂದಿಬ್ಬರನ್ನು ಸಮೀತಿಗೆ ಸೇರಿಸಿಕೊಂಡಿರುವುದು ದುರಾದೃಷ್ಟವಲ್ಲದೆ ಮತ್ತೇನು.?

ಇದರ ಹಿಂದಿನ ಕೈವಾಡ ಯಾರು ಎಂದು ಕ್ಷೇತ್ರದ ಜನಪ್ರತಿನಿಧಿಗಳೇ ಹೇಳಬೇಕಿದೆ. ಕೊಡವರ ಕುಲದೇವಿಯಾಗಿರುವ ಕಾವೇರಿ ಮಾತೆಯ ಸ್ಥಾನದಲ್ಲಿ ಕೇವಲ ಇಬ್ಬರು ಕೊಡವರನ್ನು ಮಾತ್ರ ನೇಮಕ ಮಾಡುವ ಮೂಲಕ ಕೊಡವ ಜನಾಂಗವನ್ನು ಕ್ಷೇತ್ರದಿಂದ ಹೊರಗಿಡಲು ಪ್ರಯತ್ನ ನಡೆಯುತ್ತಿದೆ. ಹಾಗೆ ಇಲ್ಲಿನ ಮೂಲ ಆರ್ಚಕ ಕುಟುಂಬವೆಂದು ಹೇಳಲಾಗುವ ಅಮ್ಮ ಕೊಡವ ಜನಾಂಗಕ್ಕೆ ಯಾವುದೇ ಅವಕಾಶ ನೀಡಲಾಗಿಲ್ಲ. ಇನ್ನೂ ಸಮೀತಿಗೆ ಅರ್ಚಕ ಸಮುದಾಯವನ್ನು ಆಯ್ಕೆ ಮಾಡುವಾಗ ಕೂಡ ಮುಖ್ಯ ಅರ್ಚಕ ಕುಟುಂಬನ್ನು ಪರಿಗಣಿಸದೆ ಯಾರ್ಯಾರಿಗೋ ಸ್ಥಾನವನ್ನು ನೀಡಲಾಗಿದೆ. ಹಾಗೆ ಸಮೀತಿಗೆ ಆಯ್ಕೆ ಮಾಡಲಾದ ಎಲ್ಲಾರು ಕೂಡ ಭಾಗಮಂಡಲ ತಲಕಾವೇರಿ ಸುತ್ತಾಮುತ್ತಲ ಕ್ಷೇತ್ರದವರಾಗಿದ್ದು ಕಾವೇರಿ ಮಾತೆ ಹಾಗೂ ಈಕೆಯ ಸೇವೆ ಸುತ್ತಮುತ್ತಲಿನ ಜನಾಂಗಕ್ಕೆ ಮಾತ್ರ ಸೀಮಿತವೇ.? ದಕ್ಷಿಣ ಕೊಡಗಿನಲ್ಲಿ ಕಾವೇರಿ ಮಾತೆಯ ನೈಜ ಭಕ್ತರು ಅಧಿಕವಾಗಿದ್ದು ಪ್ರತಿ ಬಾರಿಯೂ ಈ ಭಾಗಕ್ಕೆ ಯಾವುದೇ ಸ್ಥಾನಮಾನವನ್ನು ನೀಡಲಾಗಿಲ್ಲ. ಕೊಡವರನ್ನು ಕತ್ತಲೆಯಲ್ಲಿಟ್ಟು ರಾಜ್ಯಭಾರ ಮಾಡಿದ್ದು ಸಾಕು, ಇನ್ನು ಕೈಕಟ್ಟಿಕೊಂಡು ಕುಳಿತು ಕೊಳ್ಳಲು ನಾವು ಕಣ್ಣು, ಕಿವಿ, ಮೂಗು ಮುಚ್ಚಿಕೊಂಡು ಸುಮ್ಮನಿರುವ ಮಂಗಗಳಲ್ಲ. ಕೂಡಲೇ ಇದನ್ನು ಸರಿಪಡಿಸದಿದ್ದರೆ ಕಾನೂನಿನ ಮೂಲಕ ಉತ್ತರ ನೀಡಬೇಕಾಗುತ್ತದೆ. ಸರಕಾರ ಕೂಡಲೇ ಇದನ್ನು ಪುನರ್ ಪರಿಶೀಲಿಸಿ ಕಳಂಕಿತರನ್ನು ಹಾಗೂ ಕೊಡಗಿಗೆ ಸಂಬಂಧಿಸದವರನ್ನು ಸಮೀತಿಯಿಂದ ಕೈಬಿಟ್ಟು ಇನ್ನೂ ಇಬ್ಬರು ಕೊಡವರು ಹಾಗೂ ಮತ್ತೊಬ್ಬರು ಅಮ್ಮ ಕೊಡವರಿಗೆ ಅವಕಾಶ ಕೊಡುವ ಮೂಲಕ ದಕ್ಷಿಣ ಕೊಡಗಿಗೆ ಅವಕಾಶ ಮಾಡಿ ಕೊಡಬೇಕಿದೆ. ಹಾಗೆ ತಕ್ಕಾಮೆ ಅರೆಭಾಷಿಕ ಗೌಡ ಜನಾಂಗದಲ್ಲಿ ಇರುವ ಕಾರಣ ಕೊಡವರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಾಮರಸ್ಯಕ್ಕೆ ನಾಂದಿ ಹಾಡಬೇಕಿದೆ. ಇಲ್ಲದಿದ್ದರೆ ನಮಗೂ ಏನು ಮಾಡಬೇಕು ಗೊತ್ತಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಎಚ್ಚರಿಸಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,