Header Ads Widget

Responsive Advertisement

ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮೀತಿಗೆ ಅಮ್ಮ ಕೊಡವ ಜನಾಂಗವನ್ನು ಸೇರಿಸಲು ಬಾನಂಡ ಪ್ರಥ್ಯು ಒತ್ತಾಯ

ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮೀತಿಗೆ ಅಮ್ಮ ಕೊಡವ ಜನಾಂಗವನ್ನು ಸೇರಿಸಲು ಬಾನಂಡ ಪ್ರಥ್ಯು ಒತ್ತಾಯ

( ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ) 

ಇತಿಹಾಸವಿರುವ ಮೂಲ ಜನಾಂಗವನ್ನು ಕತ್ತಲೆಯಲ್ಲಿಡುವ ಹುನ್ನಾರ  ಕಳೆದ ಹತ್ತು ವರ್ಷಗಳಿಂದ ಪದೇಪದೇ ನಡೆಯುತ್ತಿದ್ದು, ತಲಕಾವೇರಿ ಭಾಗಮಂಡಲದ ವ್ಯವಸ್ಥಾಪನಾ ಸಮಿತಿಗೆ ಅಮ್ಮ ಕೊಡವ ಜನಾಂಗವನ್ನು ಕೈ ಬಿಟ್ಟಿರುವ ಬಗ್ಗೆ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಕೂಡಲೇ ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮೀತಿಯ ಪುನರ್ ಪರಿಶೀಲನೆ ಮಾಡಬೇಕು ಕೊಡವ ಹಾಗೂ ಅಮ್ಮ ಕೊಡವ ಜನಾಂಗಕ್ಕೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಪದೇಪದೇ ಗೊಂದಲ ಸೃಷ್ಟಿಯಾಗುತ್ತಿದ್ದು, ಇದರ ಹಿಂದಿನ ಕೈವಾಡ ಯಾರು ಎಂದು   ಎಲ್ಲಾರಿಗೂ ಗೊತ್ತಿದೆ. ಕೂಡಲೇ ಸಮೀತಿಯನ್ನು ಪುನರ್ ಪರಿಶೀಲಿಸಿ ಮೂಲ ಜನಾಂಗಕ್ಕೆ ಹೆಚ್ಚಿನ ಅವಕಾಶ ನೀಡಬೇಕಿದೆ ಎಂದರು. 

ಕೊಡವ ಹಾಗೂ ಅಮ್ಮ ಕೊಡವ ಜನಾಂಗಕ್ಕೆ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದ್ದು, ಕೇವಲ ಎರಡು ಸ್ಥಾನಗಳನ್ನು ನೀಡಿ ಕೊಡವ ಜನಾಂಗವನ್ನು ಕತ್ತಲೆಯಲ್ಲಿಟ್ಟರೆ, ಈ ಹಿಂದೆ ಇಲ್ಲಿನ ಮುಖ್ಯ ಪೂಜಾರಿಗಳು ಎಂದು ಹೇಳಲಾಗುವ ಅಮ್ಮ ಕೊಡವ ಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕಳಂಕಿತರಿಂದ ಹಿಡಿದು ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರಿಗೂ ಕೂಡ ಇದೀಗ ಸಮೀತಿಯಲ್ಲಿ ಸ್ಥಾನ ನೀಡಲಾಗಿದೆ, ಆದರೆ ಇತಿಹಾಸವಿರುವ ಜನಾಂಗದ ಕಡೆಗಣನೆ ಸರಿಯಲ್ಲ. ಕೂಡಲೇ ಅಮ್ಮ ಕೊಡವ ಜನಾಂಗಕ್ಕೆ ಇಲ್ಲಿ ಪ್ರಾಶಸ್ತ್ಯ ನೀಡಬೇಕಿದೆ. ಸಮೀತಿಯಲ್ಲಿ ಸ್ಥಾನ ನೀಡದಿದ್ದರೆ ಕಾನೂನು ಹೋರಾಟಕ್ಕೂ ನಾವು ತಯಾರು ಎಂದು ಅವರು ತಿಳಿಸಿದ್ದಾರೆ. 

ಹಾಗೇ ತಲಕಾವೇರಿ ಭಾಗಮಂಡಲವನ್ನು ಕೇವಲ ಮಡಿಕೇರಿ ತಾಲೂಕಿನವರಿಗೆ ಮಾತ್ರ ಬರೆದುಕೊಟ್ಟಿಲ್ಲ, ಉಳಿದ ಭಾಗವು ಕೊಡಗಿನೊಳಗೆ ಇದೆ ಹಾಗೂ ಕಾವೇರಿ ಮಾತೆಯ ಕ್ಷೇತ್ರಕ್ಕೆ ಒಳಪಡುತ್ತದೆ ಎಂದು ಅವರು ಕಿಡಿಕಾರಿದ್ದಾರೆ. ಇಲ್ಲಿ ಯಾರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಮೂಲ ಜನಾಂಗವನ್ನು ಸಂಪೂರ್ಣ ಕಡೆಗಣಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲಾ, ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಜಾಣ ಮೌನಕ್ಕೆ ಶರಣಾಗಿದ್ದಾರೆ. ಹಾಗೆ ಇದರ ಹಿಂದಿನ ಶಿಫಾರಸು ಯಾರು ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಪ್ರಶ್ನೆ ಮಾಡಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,