Header Ads Widget

ಸರ್ಚ್ ಕೂರ್ಗ್ ಮೀಡಿಯ

ಜೆ. ಸಿ. ಐ. ರಾಷ್ಟ್ರೀಯ ಸಂಯೋಜಕರಾಗಿ ಕೊಡಗಿನ ಪತ್ರಕರ್ತ ರಫೀಕ್ ತೂಚಮಕೇರಿ ನೇಮಕ

ಜೆ. ಸಿ. ಐ. ರಾಷ್ಟ್ರೀಯ ಸಂಯೋಜಕರಾಗಿ ಕೊಡಗಿನ ಪತ್ರಕರ್ತ ರಫೀಕ್ ತೂಚಮಕೇರಿ ನೇಮಕ

( ರಫೀಕ್ ತೂಚಮಕೇರಿ )

ಪೊನ್ನಂಪೇಟೆ: ಯುವ ನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆ.ಸಿ.ಐ. ಭಾರತದ 2022ನೇ ಸಾಲಿನ ರಾಷ್ಟ್ರೀಯ ಸಂಯೋಜಕರಾಗಿ ಗೋಣಿಕೊಪ್ಪಲಿನ ಪತ್ರಕರ್ತ ರಫೀಕ್ ತೂಚಮಕೇರಿ ನೇಮಕಗೊಂಡಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಜೆಸಿಐ ಭಾರತದ ರಾಷ್ಟ್ರಾಧ್ಯಕ್ಷರಾಗಿರುವ ಸೆನೆಟರ್ ಅನ್ಸು ಸರಫ್ ಅವರು, ರಫೀಕ್ ಅವರನ್ನು ಕೂಡಲೇ ಜಾರಿಗೆ ಬರುವಂತೆ ನೇಮಕಗೊಳಿಸಿರುವುದಾಗಿ ತಿಳಿಸಿದ್ದಾರೆ.

2003ರಲ್ಲಿ ಜೆಸಿಐ ಆಂದೋಲನಕ್ಕೆ ಸೇರ್ಪಡೆಗೊಂಡ ರಫೀಕ್ ಅವರು, 2010ರಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕವನ್ನು ಹುಟ್ಟುಹಾಕುವುದರ ಮೂಲಕ ಅದರ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಕಳೆದ 19 ವರ್ಷಗಳಿಂದ ಜೆಸಿಐ ಆಂದೋಲನದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು 2021ರ ವಲಯಾಡಳಿತ ಮಂಡಳಿಯಲ್ಲಿ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 6 ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿರುವ ಇವರು 2021ನೇ ಸಾಲಿನಲ್ಲಿ ತಮ್ಮ ಮಾತೃ ಘಟಕ ಶೇ. 100%ರ ಕಾರ್ಯಕ್ಷಮತೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಂದಿನ ಮಾರ್ಚ್ ತಿಂಗಳ  5 ಮತ್ತು 6ರಂದು ಹೈದರಾಬಾದಿನಲ್ಲಿ ನಡೆಯಲಿರುವ ಜೆ. ಸಿ. ಐ. ರಾಷ್ಟ್ರೀಯ ಸಂಯೋಜಕರ ವಿಶೇಷ ಕಾರ್ಯಾಗಾರದಲ್ಲಿ ರಫೀಕ್ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,