Header Ads Widget

ಸರ್ಚ್ ಕೂರ್ಗ್ ಮೀಡಿಯ

ಜೆ.ಸಿ.ಐ. ಭಾರತದ ಸೀನಿಯರ್ ಮೆಂಬರ್ ಅಸೋಸಿಯೇಷನ್ (ಎಸ್.ಎಂ.ಎ.) ವತಿಯಿಂದ ಹಿರಿಯ ಸಾಹಿತಿ ಡಾ. ಜೆ. ಸೋಮಣ್ಣನವರಿಗೆ ಸನ್ಮಾನ

ಜೆ.ಸಿ.ಐ. ಭಾರತದ ಸೀನಿಯರ್ ಮೆಂಬರ್ ಅಸೋಸಿಯೇಷನ್ (ಎಸ್.ಎಂ.ಎ.) ವತಿಯಿಂದ ಹಿರಿಯ ಸಾಹಿತಿ ಡಾ. ಜೆ. ಸೋಮಣ್ಣನವರಿಗೆ ಸನ್ಮಾನ


ಪೊನ್ನಂಪೇಟೆ: ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ವಯೋ ನಿವೃತ್ತರಾದ, ಹಿರಿಯ ಸಾಹಿತಿ ಡಾ. ಜೆ. ಸೋಮಣ್ಣ ಅವರನ್ನು ಜೆ.ಸಿ.ಐ. ಭಾರತದ ಸೀನಿಯರ್ ಮೆಂಬರ್ ಅಸೋಸಿಯೇಷನ್ (ಎಸ್.ಎಂ.ಎ.) ವತಿಯಿಂದ ಸನ್ಮಾನಿಸಲಾಯಿತು.

32 ವರ್ಷಗಳ ಸುದೀರ್ಘ ಅವಧಿಯ ಬಳಿಕ ಕಳೆದ ಜನವರಿ ಅಂತ್ಯಕ್ಕೆ ನಿವೃತ್ತಿಯಾದ ಡಾ. ಜೆ. ಸೋಮಣ್ಣ ಅವರನ್ನು ಗೋಣಿಕೊಪ್ಪಲಿನ ಅವರ ನಿವಾಸಕ್ಕೆ ತೆರಳಿದ ಎಸ್.ಎಂ.ಎ ವಲಯ ಮಂಡಳಿಯ ಮುಖ್ಯಸ್ಥರಾದ ಕೆ.ಎಸ್. ಕುಮಾರ್ ಅವರ ನೇತೃತ್ವದ ತಂಡ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಕುಮಾರ್, ಎಸ್.ಎಂ.ಎ. ಸದಸ್ಯರೂ ಆಗಿರುವ ಡಾ. ಜೆ. ಸೋಮಣ್ಣ ಅವರು ಕೊಡಗಿನ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಉಪನ್ಯಾಸಕರಾಗಿ ಮತ್ತು ಸಾಹಿತಿಯಾಗಿ ಜಿಲ್ಲೆಗೆ ಅವರ ಸೇವೆ ಅನುಪಮವಾದದ್ದು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಸ್.ಎಂ.ಎ. ರಾಷ್ಟ್ರೀಯ ಮಂಡಳಿ ನಿರ್ದೇಶಕರಾದ ಎ.ಎಸ್. ನರೇನ್ ಕಾರ್ಯಪ್ಪ ಅವರು ಮಾತನಾಡಿ, ಸಂಘಜೀವಿಯಾಗಿ ಎಲ್ಲರೊಂದಿಗೆ ಆತ್ಮೀಯ ಮನುಷ್ಯ ಸ್ನೇಹದಿಂದ ಒಡನಾಡುವ ಡಾ. ಜೆ. ಸೋಮಣ್ಣ ಅವರ ಸೇವೆ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ದಕ್ಕುವಂತಾಗಲಿ ಎಂದು ಶುಭ ಹಾರೈಸಿದರು.

ಯುವ ಮುಂದಾಳು ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಬದುಕಿನ ದಾರಿಗೆ ಬೆಳಕು ತೋರಿಸಿದ ಸೋಮಣ್ಣ ಅವರಿಗೆ  ಹಳೆ ವಿದ್ಯಾರ್ಥಿಗಳು ಮತ್ತು ಅವರ ಆತ್ಮೀಯ ಬಳಗ ಸೇರಿ ಗುರುವಂದನೆ ಕಾರ್ಯಕ್ರಮವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಂ.ಎ. ಸದಸ್ಯರು ಮತ್ತು  ಸೋಮಣ್ಣ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,