Header Ads Widget

ಸರ್ಚ್ ಕೂರ್ಗ್ ಮೀಡಿಯ

ಫ್ರೆಂಡ್ಸ್ ಟ್ರೋಪಿ 2022 ಕ್ರಿಕೇಟ್ ಪಂದ್ಯಾಕೂಟ, ಕಬಡ್ಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗೆ ಸನ್ಮಾನ

ಫ್ರೆಂಡ್ಸ್ ಟ್ರೋಪಿ 2022 ಕ್ರಿಕೇಟ್ ಪಂದ್ಯಾಕೂಟ, ಕಬಡ್ಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗೆ ಸನ್ಮಾನ


ಸಂಪಾಜೆ: ಫ್ರೆಂಡ್ಸ್ ಗೂನಡ್ಕ ನೇತೃತ್ವದಲ್ಲಿ ಫ್ರೆಂಡ್ಸ್ ಟ್ರೋಪಿ 2022 ಕ್ರಿಕೆಟ್ ಪಂದ್ಯಾಟ ಸಂಪಾಜೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವರ್ಷ ಉಳುವಾರು ಅವರಿಗೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೆದಪ್ಪ ಸನ್ಮಾನಿಸಿದರು.

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಮಾತನಾಡಿ ಶುಭ ಹಾರೈಸಿ ಬಹುಮಾನ ವಿತರಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಅಬೂಸಾಲಿ ಪಿ. ಕೆ., ಶೌವಾದ್ ಗೂನಡ್ಕ , ಹನೀಫ್ ಎಸ್. ಕೆ, ಸಜ್ಜನ ಪ್ರತಿಷ್ಠಾನದ ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಮಾಲಿನಿ, ಗುರು ಪ್ರಸಾದ್,ಮೋಹನ್ ಪೆರುಂಗೋಡಿ, ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ, ರಂಜನ್ ಕಲ್ಲುಗದ್ದೆ, ಜಿ. ಜಿ ನವೀನ್, ವಿನಯ ದರ್ಕಾಸ್, ಜಾಬೀರ್ ಎಮ್. ಬಿ, ಉನೈಸ್ ಪಿ.ಯು,ಉಬೈಸ್. ಪಿ. ಯು. ಹೇಮಾನಾಥ್, ಸಫ್ವಾನ್, ಶರತ್ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು ಪ್ರಥಮ ಬಹುಮಾನವನ್ನು ಯುನೈಟೆಡ್ ಆರಂಬೂರು ಹಾಗೂ ದ್ವಿತೀಯ ಬಹುಮಾನವನ್ನು ಯಶಸ್ವಿ ಕಲ್ಲುಗುಂಡಿ ಪಡೆದುಕೊಂಡಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,