Header Ads Widget

ಸರ್ಚ್ ಕೂರ್ಗ್ ಮೀಡಿಯ

ಏಪ್ರಿಲ್‌ 9 ರಿಂದ 17 ರವರಗೆ ಸುಳ್ಯಎಂ.ಜಿ.ಎಂ.ಮೈದಾನದಲ್ಲಿ ಕುಡೆಕಲ್ಲು ಗೌಡ ಕಪ್ -2022

ಏಪ್ರಿಲ್‌ 9 ರಿಂದ 17 ರವರಗೆ ಸುಳ್ಯಎಂ.ಜಿ.ಎಂ.ಮೈದಾನದಲ್ಲಿ ಕುಡೆಕಲ್ಲು ಗೌಡ ಕಪ್ -2022

ನಾಕೌಟ್ ಮಾದರಿಯ ‌ಕ್ರಿಕೆಟ್ ಪಂದ್ಯಾಟ

ಕುಡೆಕಲ್ಲು ಗೌಡ ಕಮಿಟಿಯ ಆಶ್ರಯದಲ್ಲಿ ಗೌಡ ಸಮಾಜದ 100 ತಂಡಗಳು ಸೆಣಸಾಡಲಿವೆ


ಏಪ್ರಿಲ್‌ 9 ರಿಂದ 17 ರವರಗೆ  "ಕುಡೇಕಲ್ಲು  ಗೌಡ ಕಪ್ 2022" ಸುಳ್ಯ ಕೊಡಿಯಾಲಬೈಲು  ಮಹಾತ್ಮ ಗಾಂಧಿ ಮಲ್ನಾಡು ಪ್ರೌಢಶಾಲೆಯ ಮೈದಾನದಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡ ,ಕೊಡಗು ಮತ್ತು ಕಾಸರಗೋಡು ಭಾಗದ  ಗೌಡ ‌ಮನೆತನದ ಸುಮಾರು 100 ತಂಡಗಳು ಪಂದ್ಯಾಟದಲ್ಲಿ ಸೆಣಸಾಡಲಿದೆ.

ಪ್ರಥಮ ಬಹುಮಾನ ರೂ/- 30001 ಹಾಗೂ ಟ್ರೊಫಿ, ದ್ವಿತೀಯ ಬಹುಮಾನ ರೂ/-20001 ಹಾಗೂಟ್ರೊಫಿ, ಸೆಮಿಫೈನಲ್‌ ‌ಪ್ರವೇಶಿಸಿದ ತಲಾ ಎರಡು ತಂಡಗಳಿಗೆ ವಿಶೇಷವಾಗಿ ‌ರೂ.5000/- ಮತ್ತು ‌ಟ್ರೋಫಿ‌ ನೀಡಲಾಗುವುದು.

ಮೊದಲು ಹೆಸರು ನೊಂದಾಯಿಸಿದ 100 ತಂಡಗಳಿಗೆ ಮಾತ್ರ ಅವಕಾಶ. ಪಂದ್ಯಾಟವು 6 ಓವರ್ ಗಳ ಟೆನಿಸ್ ಬಾಲ್ ಓವರ್ ಆರ್ಮ್ ನಾಕೌಟ್ ಮಾದರಿಯ ಪಂದ್ಯಾಕೂಟ ಆಗಿರುತ್ತದೆ. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ ರೂ. 2500/- ಪಾವತಿ ಮಾಡಬೇಕು.


ಭಾಗವಹಿಸುವ ತಂಡಗಳು ಮಾರ್ಚ್. 31 ರ ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಬೇಕು. ನಂತರ ಬಂದ ಯಾವುದೇ ತಂಡಗಳಿಗೆ ಅವಕಾಶವಿಲ್ಲ.

ಏಪ್ರಿಲ್. 5 ರಂದು ತಂಡಗಳ ಟೈಸ್  ಲಿಸ್ಟ್ ಬಿಡುಗಡೆ ಮಾಡಲಾಗುವುದು. ಭಾಗವಹಿಸುವ ತಂಡಗಳಿಗೆ ಸಮವಸ್ತ್ರ ಖಡ್ಡಾಯ ಇರುವುದಿಲ್ಲ. ಆದರೆ ಜಿನ್ಸ್ ಪ್ಶಾಂಟ್. ಟೈಟ್ ಫಿಟ್ಟ್ ಧರಿಸುತಂತಿಲ್ಲ. 

ಪ್ರವೇಶ ಶುಲ್ಕವನ್ನು ಮಾ. 31ರ ಮುಂಚಿತವಾಗಿ  9880920431 ಸಂಖ್ಯೆಗೆ Google pay ಮಾಡಿ ತಂಡದ ಪ್ರವೇಶವನ್ನು ಖಾತರಿ ಪಡಿಸಿ ಕೊಳ್ಳಬೇಕು. ತಂಡಗಳು ಹೆಸರು ನೊಂದಾಯಿಸಲು  9880920431  ಸಂಪರ್ಕಿಸುವಂತೆ ಕುಡೆಕಲ್ಲು ಗೌಡ ಕಮಿಟಿ ತೀರ್ಮಾನಿಸಿರುವುದಾಗಿ ಪಂದ್ಯಾಕೂಟದ ಸಂಚಾಲಕ ರಾಜೇಶ್ ಕುಡೆಕಲ್ಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,