Header Ads Widget

ಸರ್ಚ್ ಕೂರ್ಗ್ ಮೀಡಿಯ

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ದ್ವಿತೀಯ ವರ್ಷದ ಮಹಾಶಿವರಾತ್ರಿ ಪೂಜೆ ಹಾಗೂ ಭಜನಾ ಕಾರ್ಯಕ್ರಮ

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ದ್ವಿತೀಯ ವರ್ಷದ ಮಹಾಶಿವರಾತ್ರಿ ಪೂಜೆ ಹಾಗೂ ಭಜನಾ ಕಾರ್ಯಕ್ರಮ

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜನಪರ ಹೋರಾಟ ಸಮಿತಿ ಚೆಟ್ಟಳ್ಳಿ, ವೀರಾಂಜನೇಯ ಯುವಕ ಸಂಘ ಚೆಟ್ಟಳ್ಳಿ ಹಾಗೂ ವಿನಾಯಕ ದೇವಾಲಯ ಸಮಿತಿ ಕೂಡ್ಲೂರು ಇವರ ಸಂಯುಕ್ತಾಶ್ರಯದಲ್ಲಿ ದ್ವಿತೀಯ ವರ್ಷದ ಮಹಾಶಿವರಾತ್ರಿ ಪೂಜೆ ಹಾಗೂ ಭಜನಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್  ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ,  ಕೋಟ್ಯಾಂತರ ಶಿವಭಕ್ತರು ಶಿವನ ಆರಾಧನೆಯಲ್ಲಿ ‌ತೊಡಿಕೊಂಡಿದ್ದಾರೆ. ಎಲ್ಲರೂ ದೈವ ಭಕ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಎಲ್ಲಾ ದೇವರುಗಳ ಆಶೀರ್ವಾದ , ರೈತರ ಸಹಕಾರ, ಸಿಬ್ಬಂದಿ ವರ್ಗದವರ ಕಠಿಣ ಪರಿಶ್ರಮ, ಹಾಗೂ ಕೃಷಿ‌ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಹಕಾರದಿಂದ ನಷ್ಟದಲ್ಲಿ ನಡೆಯುತ್ತಿದ್ದ ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘವು ಪ್ರಸ್ತುತ ದಿನಗಳಲ್ಲಿ 36 ಲಕ್ಷ ರೂ‌ ಲಾಭದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮೋದಿ ಭವನ‌ ಹಾಗೂ ಪುಣ್ಯಕೋಟಿ ಭವನದಲ್ಲಿ ಎಲ್ಲಾ ದೇವರುಗಳನ್ನು ನಾವು ಪ್ರತಿಷ್ಠಾಪನೆ ಮಾಡಿದ್ದೇವೆ. ಇದೀಗ ಯಶಸ್ವಿಯಾಗಿ ಎರಡನೇ ವರ್ಷದ ಶಿವರಾತ್ರಿ ಪೂಜಾ ಕಾರ್ಯಕ್ರಮ ಹಾಗೂ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.

ಚೆಟ್ಟಳ್ಳಿಯಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ನಾಯಕತ್ವದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಸುಜಾಕುಶಾಲಪ್ಪ ಹೇಳಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಖ್ಯಾತ ವಕೀಲ ಕೃಷ್ಣಮೂರ್ತಿ ‌ಮಾತನಾಡಿ, ಆಧುನಿಕ ಯುಗದಲ್ಲಿ ಯುವಜನರು ಹಲವಾರು ಶತಮಾನಗಳ‌ ಇತಿಹಾಸವಿರುವ ಹಿಂದೂ ಸಂಸ್ಕೃತಿಯನ್ನು ಮರೆತಿರುವುದು ಬೇಸರದ ಸಂಗತಿ.  ಪ್ರತಿನಿತ್ಯ ದೈವಾರಾಧನೆಯಲ್ಲಿ ತೊಡಗಿಕೊಂಡರೆ, ಎಲ್ಲಾ ಕಷ್ಟಗಳಿಗೆ ಪರಿಹಾರ ಸಿಗಲಿದೆ. ಯುವಜನರು ದೈವಾರಾಧನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ ವಹಿಸಿದ್ದರು. ವೇದಿಕೆಯಲ್ಲಿ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ನೂಜಿಬೈಲು ನಾಣಯ್ಯ, ವೀರಾಂಜನೆಯ‌ ಯುವಕ‌‌ ಸಂಘದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ,ಮಾಜಿ ಗ್ರಾಮ ಪಂಚಾಯತಿ ಸದಸ್ಯ ರವಿ‌ ಕೂಡ್ಲೂರು, ಯುವ ಗಾಯಕ ಅನ್ವಿತ್, ಚೆಟ್ಟಳ್ಳಿ ಕೃಷಿ ಪತ್ತಿನ ‌ಸಹಕಾರ ಸಂಘದ ವ್ಯವಸ್ಥಾಪಕಿ ನಂದಿನಿ, ಎಲ್ಲಾ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಶ್ರೀ ವಿನಾಯಕ, ಶ್ರೀ ಪಶುಪತಿನಾಥ, ಶ್ರೀ ಕಾವೇರಿ ಮಾತೆ, ಶ್ರೀ ಕೃಷ್ಣ , ಗೋಮಾತೆ, ಶ್ರೀ ಆಂಜನೇಯ, ಮತ್ತು ಶ್ರೀ ಮಹಾವಿಷ್ಣು ಮೂರ್ತಿಗೆ ಮಹಾ ಮಂಗಳಾರತಿ ನಡೆಯಿತು. ಗೋಣಿಕೊಪ್ಪಲಿನ ಯುವ ಗಾಯಕರಾದ ಅನ್ವಿತ್ ಕುಮಾರ್ ಸಿ.ವಿ ರವರಿಂದ ಭಜನಾ ಕಾರ್ಯಕ್ರಮವು ಎಲ್ಲಾ ಭಕ್ತಾದಿಗಳ‌ ಮನರಂಜಿಸಿತು.‌ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ವಿಧಾನ ಪರಿಷತ್ ಸದಸ್ಯ  ಮಂಡೇಪಂಡ ಸುಜಾಕುಶಾಲಪ್ಪ, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ‌ ಹಾಗೂ ಖ್ಯಾತ ವಕೀಲ, ಹಾಗೂ ಜಿಲ್ಲೆಯ ಯುವಕ ಗಾಯಕ ಗೋಣಿಕೊಪ್ಪಲಿನ‌ ಅನ್ವಿತ್ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,