Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಲಿಯಾಟ ಅಜ್ಜಪ್ಪ ದೈವದ ಕೈಮಡ ರಸ್ತೆ ಉದ್ಘಾಟನೆ

ಕಲಿಯಾಟ ಅಜ್ಜಪ್ಪ ದೈವದ ಕೈಮಡ ರಸ್ತೆ ಉದ್ಘಾಟನೆ


ನಾಪೋಕ್ಲು : ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಿಯಾಟಂಡ ಐನ್ ಮನೆಯ ಪಕ್ಕದಲ್ಲಿರುವ ಕಲಿಯಾಟ ಅಜ್ಜಪ್ಪ ದೈವದ ಕೈಮಡಕ್ಕೆ ಹೋಗುವ ರಸ್ತೆಯನ್ನು ಶಾಸಕರ ನಿಧಿಯಿಂದ 2 ಲಕ್ಷ ರೂಗಳ ವೆಚ್ಚದಲ್ಲಿ ಡಾಮರಿಕರಣ ಮಡಲಾಗಿದ್ದು ಮತ್ತು ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ಮೋರಿಯನ್ನು ಕ್ಷೇತ್ರ ಶಾಸಕರಾದ ಕೆ ಜಿ. ಬೋಪಯ್ಯನವರು ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ದೇವ ಮಾನವರಾದ ಕಲಿಯಾಟಂಡ ಅಜ್ಜಪ್ಪನವರು ಜನಿಸಿದಂತಹ ಇಂತಹ ಐತಿಹಾಸಿ ಸ್ಥಳ ಇದಾಗಿದ್ದು ಮುಂದೆಯು ಅಭಿವ್ರದ್ಧಿ ಕರ‍್ಯವನ್ನು ಹಮ್ಮಿಕೊಳ್ಳಲಗುವುದು ಎಂದರು. ಕುಟುಂಬದ ಪರವಾಗಿ ಮಾತನಾಡಿದ ಹಿರಿಯರಾದ ಅಯ್ಯಪ್ಪನವರು ನಮ್ಮ ಕುಟುಂಬದ ಐನ್ ಮನೆಯ ರಸ್ತೆಗೆ ಡಾಂಬರೀಕರನ- ಗೊಳಿಸಿದ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸಿದರು. 

ಈ ಸಂದರ್ಭ ಪಶ್ಚಿಮ ಘಟ್ಟದ ರ‍್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಡಿಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕಲಿಯಾಟಂಡ ರಘು ತಮ್ಮಯ್ಯ,  ಗ್ರಾಮ ಪಂಚಾಯತ್ ಅಧ್ಯಕ್ಷ ಕಲಿಯಂಡ ಸಂಪನ್, ಕಲಿಯಾಟಂಡ ಮುತ್ತಪ್ಪ, ಪಳಂಗಪ್ಪ, ನಂಜಪ್ಪ, ಕಾವೇರಪ್ಪ, ಸುಬ್ಬಯ್ಯ, ಅಪ್ಪಣ್ಣ, ಅರುಣ, ರತೀಶ್ ಬೋಪಣ್ಣ, ಗಣಪತಿ, ಬಿ.ಎಂ.ಶಾರದ, ಚಂಡೀರ ಜಗದೀಶ್. ಬಾಚವಂಡ ಪೂವಣ್ಣ, ಬೊಳಿಯಾಡೀರ ಸಂತು ಸುಬ್ರಮಣಿ, ಕಲಿಯಂಡ ಸುನಂದ, ಮತ್ತಿತರರು ಇದ್ದರು.