Header Ads Widget

Responsive Advertisement

ಮಾ.31ರಿಂದ ಏ.5 ರವರೆಗೆ ಕೊಡಗಿನ ಐಗೂರೂ ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ದೇವಾಲಯದ 46ನೇ ವರ್ಷದ ದೈವಕೋಲ, ನೇಮೋತ್ಸವ

ಮಾ.31ರಿಂದ ಏ.5 ರವರೆಗೆ ಕೊಡಗಿನ ಐಗೂರೂ ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ದೇವಾಲಯದ 46ನೇ ವರ್ಷದ ದೈವಕೋಲ, ನೇಮೋತ್ಸವ


ಐಗೂರಿನ ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ದೇವಾಲಯದ 46ನೇ ವರ್ಷದ ದೈವಕೋಲ, ನೇಮೋತ್ಸವವು ಮಾ.31ರಿಂದ ಏ.5 ರವರೆಗೆ ನಡೆಯಲಿದೆ.

ಮಾ.31 ರಂದು: ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ 10 ಗಂಟೆಗೆ ನಾಗಪೂಜೆ, 11 ಗಂಟೆಗೆ ಶುದ್ಧಿಪೂಜೆ, ರಾತ್ರಿ 8 ಗಂಟೆಗೆ ಅಣ್ಣಪ್ಪಸ್ವಾಮಿ ದರ್ಶನ,ರಾತ್ರಿ 9ಕ್ಕೆ ಅನ್ನಸಂತರ್ಪಣೆ, 

ಏ.1 ರಂದು: ಬೆಳಿಗ್ಗೆ 5 ಗಂಟೆಗೆ ಕಳಸದ ಮೆರವಣಿಗೆ, ಬೆಳಿಗ್ಗೆ 10ಕ್ಕೆ ಮಹಾಪೂಜೆ, 11ಕ್ಕೆ ಹಣ್ಣುಕಾಯಿ ನೈವೆದ್ಯ ಪೂಜೆ, 11.30ಕ್ಕೆ ಆದಿಶಕ್ತಿ ಮಹಾತಾಯಿ ದರ್ಶನ, ಮಧ್ಯಾಹ್ನ 1 ಗಂಟೆಗೆ ಅನ್ನದಾನ, ರಾತ್ರಿ 7 ಗಂಟೆಗೆ ಭಂಡಾರ ಆಗಮನ ರಾತ್ರಿ 8.30ಕ್ಕೆ ಅನ್ನದಾನ, ರಾತ್ರಿ 10 ಗಂಟೆಗೆ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ, ಮಧ್ಯರಾತ್ರಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ಏ.2 ರಂದು: ಬೆಳಿಗ್ಗೆ ಜಾವ 1 ಗಂಟೆಗೆ ಗುಳಿಗ ದೈವದ ಕೋಲ, 2.30 ಗಂಟೆಗೆ ಪಂಜುರ್ಲಿ ದೈವದ ಕೋಲ, ಬೆಳಿಗ್ಗೆ 4 ಗಂಟೆಗೆ ಮಂತ್ರದೇವತೆ ಕೋಲ, ಬೆಳಿಗ್ಗೆ 6 ಗಂಟೆಗೆ ಧರ್ಮ ದೈವದ ಕೋಲ, 8 ಗಂಟೆಗೆ ದೂಮಾವತಿ ದೈವದ ಕೋಲ, ಬೆಳಿಗ್ಗೆ 10.30 ಗಂಟೆಗೆ ಭಂಡಾರ ಆಗಮನ 10.45ಕ್ಕೆ ಮಹಾಮಂಗಳಾರತಿ ನಡೆಯಲಿದೆ.

ಏ.4 ರಂದು: ಸಂಜೆ 7.30ಕ್ಕೆ ಜಾಗದ ಗುಳಿಗ ದೈವದ ಕೋಲ, ರಾತ್ರಿ 8.30ಕ್ಕೆ ಅನ್ನದಾನ ರಾತ್ರಿ 8.30ಕ್ಕೆ ಅನ್ನದಾನ, ರಾತ್ರಿ 9.30 ಗಂಟೆಗೆ ಮುಗೇರ್ದು ನೇಮ, ಗರಡಿ ಇಳಿಸುವುದು ಮಧ್ಯರಾತ್ರಿ ತನ್ನಿಮಾನಿಗ ಗರಡಿ ಇಳಿಸುವುದು, ಬೆಳಿಗ್ಗೆ 4 ಗಂಟೆಗೆ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ನೇಮ, 

ಏ.5 ರಂದು: ದೈವಗಳಿಗೆ ಬೇಟೆಕೊಡುವ ಕಾರ್ಯಕ್ರಮ, ಬೆಳಿಗ್ಗೆ 10.30 ಗಂಟೆಗೆ ಭದ್ರಕಾಳಿ ದೇವಿಯ ಕೋಲ ಮಧ್ಯಾಹ್ನ 13.30ಕ್ಕೆ ಸರ್ವದೈವಗಳ ಎಡೆ ಪ್ರಸಾದ ವಿನಿಯೋಗ, ಅಪರಾಹ್ನ 3 ಗಂಟೆಗೆ ಮಹಾಮಂಗಳಾರತಿ, ಸಂಜೆ 6 ಗಂಟೆಗೆ ದೈವ ನಡೆ ಮುಚ್ಚಲಾಗುವುದೆಂದು ಪಾಷಾಣಮೂರ್ತಿ ಹಾಗೂ ಆದಿಶಕ್ತಿ, ಮಹಾತಾಯಿ ದೇವಾಲಯದ ಧರ್ಮದರ್ಶಿ ಎಸ್.ಪಿ.ಆನಂದ ತಿಳಿಸಿದ್ದಾರೆ.