ಕೊಡಗಿನ ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಕಡಿಮೆ ಇಲ್ಲ; ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ
ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾ ಭವನ ಹಾಗೂ ಸರ್ಕಾರದ ಅನುಧಾನದಿಂದ ಬಂದಂತಹ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ
ಕೊಡಗಿನ ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಕಡಿಮೆ ಇಲ್ಲ. ರೈತರಿಗೆ ಬೇಕಾದಾಗ ಸಾಲವನ್ನು ನೀಡಿ ಸಮರ್ಪಕವಾಗಿ ಪಡೆದುಕೊಳ್ಳುವ ಮೂಲಕ ಅಭಿವೃದ್ಧಯಾತ್ತ ಸಾಗುತ್ತಿದೆ ಎಂದು ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘ ನಿಯಾಮಿತ ಇದರ ನೂತನ ಸಭಾಭವನ ಮತ್ತು ಸರಕಾರದ ಅನುದಾನದಿಂದ ಬರುವಂತಹ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ 87 ಲಕ್ಷ ವೆಚ್ಚದ ತಡೆಗೋಡೆ ಮತ್ತು ಕಾಂಕ್ರೀಟ್ ರಸ್ತೆಯ ಕಾಮಗಾರಿ, ಇಂಟರ್ ಲಾಕ್ ಹಾಸು ಉದ್ಘಾಟಿಸಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು. ಕೊಡಗು ಜಿಲ್ಲೆಯ ಇಲ್ಲಾ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯವನ್ನು ನಿರ್ವಾಹಿಸುತ್ತಾ ಬಂದಿದ್ದು ಹೊರಗಿನ ಸಹಕಾರ ಸಂಘಗಳು ನುಂಗಣ್ಣ ಗಳಾಗಿದ್ದಾರೆ ಎಂದು ಆರೋಪಿಸಿದರು.
ಮಾನ್ಯ ಮಾಜಿ ಮುಖ್ಯ ಮಂತ್ರಿ ಯಡಿಯುರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ರೈತರಿಗೆ 3 ಲಕ್ಷದ ವರೆಗೂ ಬಡ್ಡಿ ರಹಿತ ಸಾಲವನ್ನು ನೀಡಿ ಬಡವರಿಗೆ ನೆರವಾಗಿದ್ದರು.
ಕೊಡಗಿನ ಡಿ.ಸಿ.ಸಿ. ಬ್ಯಾಂಕ್ ರಾಜ್ಯದಲ್ಲಿಯೇ ಒಂದನೇ ಸ್ಥಾನದಲ್ಲಿದೆ ಎಂದ ಅವರು ಇದರ ಅಧ್ಯಕ್ಷರಾದ ಬಾಂಡ್ ಗಣಪತಿಯವರಿಗೆ ಸಹಕಾರ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ, ಮುಂದೆಯು ಹಲವಾರು ಪ್ರಶಸ್ತಿ ಬರಲಿ ಎಂದರು.
ವ್ಯೇಧ್ಯಾನಾಥನ್ ವರದಿ ಬಗ್ಗೆ ಮಾತನಾಡಿದ ಅವರ ವರದಿಯನ್ನು ನಾವು ಒಪ್ಪಿಕೊಂಡಿದ್ದು, ಇದನ್ನು ಕೆಲವು ಅಧಿಕಾರಿಗಳ ಸ್ವಾರ್ಥದಿಂದ ಇದು ಇಂದು ಅನುಷ್ಠಾನ ಗೊಳ್ಳಲು ತಡವಾಗಿದೆ ಎಂದರು. ಜಮ್ಮ ಮಲೆ ಬಗ್ಗೆ ನಾನು ಅವಿರತವಾಗಿ ಪ್ರಾಮಣಿವಾಗಿ ಪ್ರಯತ್ನ ಪಟ್ಟೆರುವುದಾಗಿ ಹೇಳಿದರು.
ಇಂಟರ್ ಲಾಕ್ ಹಾಸು ಅವರಣವನ್ನು ಉದ್ಘಾಟಿಸಿದ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಶಾತೆಯಂಡ ರವಿ ಕುಶಾಲಪ್ಪ ಮಾತನಾಡಿ ನಮ್ಮ ಸರಕಾರ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಹೊತ್ತನ್ನು ನೀಡಿದೆ ಎಂದ ಅವರು ಇನ್ನ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚನ ಅಭಿವೃದ್ಧಿಗೆ ನಾವೇಲ್ಲರೂ ಶ್ರಮಿಸಬೇಕೆಂದು ಹೇಳಿದರು.
ಸಭಾಭವನವನ್ನು ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ಹೋರಾಟ ಮಾಡಿರುವುದರಿಂದ ಇಂದು ಜಿಲ್ಲೆಯ ರಸ್ತೆಗಳು ಅಭಿವೃದ್ಧಿಯತ್ತ ಸಾಗಿದೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸೌಲಭ್ಯ, ವಿದ್ಯೂತ್ ಎಲ್ಲಾ ಮೂಲಭೂತ ಸಮಸ್ಯೆಗೆ ಸ್ಪಂಧನೆ ನೀಡಿರುವುದಾಗಿ ತಿಳಿಸಿದರು.
ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ ನಿಮ್ಮೇಲ್ಲರ ಸಹಕಾರದಿಂದ ನಾನು ಸಹಕಾರ ರತ್ನ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ನಾವು ಸಂಘದಿಂದ ರ್ಯತರಿಗೆ ವಾರ್ಷಿ ಎರಡು ಸಾವಿರದಷ್ಟು ಕೋಟಿ ರೂಗಳನು ಸಾಲವಾಗಿ ನೀಡಿದ್ದೇವೆ ಎಂದರು. ಅತೀ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲವನ್ನು ನಮ್ಮ ಬ್ಯಾಂಕ್ ನೀಡುತ್ತಿದೆ ಎಂದರು,
ಡಿಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂಪನ್ನ ಅಯ್ಯಪ್ಪ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲಿಯಾಟಂಡ ರಘು ತಮ್ಮಯ್ಯ ವಹಿಸಿ ಸ್ವಾಗತಿಸಿದ ವೇಧಿಕೆಯಲ್ಲಿ ಬಡಕಡ ಸುರೇಶ್ ಬೆಳ್ಯಪ್ಪ ಉಪಾಧ್ಯಕ್ಷ, ನಿದೇರ್ಶಕರಾದ ಅಲ್ಲರಂಡ ಎಸ್, ಅಯ್ಯಪ್ಪ ಸನ್ನು, ಕಲಿಯಾಟಂಡ ಬೋಪಣ್ಣ, ನಿಡುಮಂಡ ಸಿ ಪೂವಯ್ಯ, ಕೋಡಿಮಣಿಯಂಡ ಎಂ, ನಾಣಯ್ಯ, ಪರದಂಡ ಪ್ರಮೀಳ, ನಂಬುಡುಮಂಡ ಸಿ.ಸುನೀತ, ಎ.ಎನ್. ಲಕ್ಷಣ, ಕೊಲೇಯಂಡ ಅಶೋಕ, ಕುಡಿಯರ ಕೆ,ಗಿರೀಶ್, ಮತ್ತು ಎಂ.ಡಿ.ಅಯ್ಯಪ್ಪ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು ಅಂಜಪರುವಂಡ ಕುಶಾಲಪ್ಪ ನಿರೂಷಿಸಿ ವಂದಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network