Header Ads Widget

Responsive Advertisement

ಮೇಕೇರಿ ಬಿ.ಜೆ.ಪಿ. ಶಕ್ತಿಕೇಂದ್ರದಲ್ಲಿ ಕಾರ್ಯಕರ್ತರ ವಿಜಯೋತ್ಸವ

ಮೇಕೇರಿ ಬಿ.ಜೆ.ಪಿ. ಶಕ್ತಿಕೇಂದ್ರದಲ್ಲಿ  ಕಾರ್ಯಕರ್ತರ ವಿಜಯೋತ್ಸವ 


ಪಂಚರಾಜ್ಯಗಳ ಚುನಾವಣೆಯಲ್ಲಿ ಸತತ ಎರಡನೇ ಅವಧಿಗೆ ಬಿ.ಜೆ.ಪಿ. ಗೆ ಅಭೂತಪೂರ್ವ ಜನಾಶೀರ್ವಾದ ದೊರೆತ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ  ಮಡಿಕೇರಿ ತಾಲ್ಲೂಕಿನ ಮೇಕೇರಿ ಬಿ.ಜೆ.ಪಿ. ಶಕ್ತಿಕೇಂದ್ರದ ನೇತೃತ್ವದಲ್ಲಿ ಕಾರ್ಯಕರ್ತರು ಮೇಕೇರಿಯ ದೇವಾಲಯ ಜಂಕ್ಷನ್ ನಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಹಾಕತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಪರ್ಲಕೋಟಿ ಕಾಂತ ಕಾವೇರಪ್ಪ ಅಂದು ಮಹತ್ಮಾಗಾಂಧಿಯವರು  ದೇಶದ ಬಗ್ಗೆ ಕಾಳಜಿಯಿಲ್ಲದ ಕಾಂಗ್ರೇಸ್ಸನ್ನು ವಿಸರ್ಜಿಸುವಂತೆ ಸಲಹೆ ನೀಡಿದ್ದರು. ಆದರೆ ಇಂದು ಆ ಕೆಲಸವನ್ನು ಪಂಜಾಬಿನ ಸಿದ್ಧು ಮತ್ತು ಕರ್ನಾಟಕದ ಸಿದ್ಧ ರಂತರವರು ಯಶಸ್ವಿಯಾಗಿ ಮಾಡುತ್ತಿದ್ದಾರೆಂದರು. ದೇಶದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬಿ.ಜೆ.ಪಿ. ವಿರುದ್ಧ  ಕೆಲಸ ಮಾಡಿದರೂ ಜನಾಭಿಪ್ರಾಯ ಬಿ.ಜೆ.ಪಿ. ಪರವಾಗಿ ಮೂಡಲು ಭ್ರಷ್ಟಾಚಾರ ಮುಕ್ತ ಮೋದಿ ಆಡಳಿತವೇ ಕಾರಣವೆಂದರು.

ಇಡೀ ಉತ್ತರ ಪ್ರದೇಶವೇ ಗೂಂಡಾ ರಾಜ್ಯವಾಗಿದ್ದಾಗ ಅದಕ್ಕೆ ಮುಕ್ತಿ ನೀಡಿ ಭಯಮುಕ್ತ ಸಮಾಜ ನಿರ್ಮಾಣ ಮಾಡಿದ ಕೀರ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಿಗೆ ಸಲ್ಲುತ್ತದೆ. ಅಲ್ಲಿನ ಜನಸಾಮಾನ್ಯರು ನೆಮ್ಮದಿಯ ಬದುಕಿಗಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿ.ಜೆ.ಪಿ.ಯನ್ನು ಎರಡನೇ ಅವಧಿಗೆ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ದಾರೆ. ಉಳಿದಂತೆ ಉತ್ತರಖಂಡ್..ಗೋವಾ...ಮಣಿಪುರಗಳಲ್ಲೂ ಜನರು ಬಿ.ಜೆ.ಪಿ.ಯ ಆಡಳಿತವನ್ನು ಮೆಚ್ಚಿ ಎರಡನೇ ಅವಧಿಗೆ ಜನಾಭಿಪ್ರಾಯ ನೀಡಿದ್ದಾರೆ. ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದ ಕೇಂದ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಭಾ.ಜ.ಪಾ. ಆಡಳಿತವಿರುವ ರಾಜ್ಯಗಳು ದೇಶಕ್ಕೆ ಮಾದರಿಯಾಗಿವೆಯೆಂದರು. ವಿಜಯೋತ್ಸವದಲ್ಲಿ ಪ್ರಮುಖರಾದ ಕಾಯರ ಬೆಳ್ಯಪ್ಪ, ವೇಲಾಯುಧನ್, ದಾಮೋದರ್, ಶಕ್ತಿಕೇಂದ್ರದ ಪ್ರಮುಖ ಕಿರಣ್, ಅಪ್ಪಣ್ಣ, ವಿಜು, ಹರೀಶ್, ದರ್ಶನ್, ತೋರೆರ ಜನಾರ್ಧನ, ವಸಂತ, ರಾಜನ್, ಗಣಪತಿ, ರಾಜೇಶ್, ಭೀಮಯ್ಯ, ಹೀಮೇಶ್, ಶೇಖರ ಮುಂತಾದವರು ಪಾಲ್ಗೊಂಡಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,