ಕ್ಷಯರೋಗ ನಿರ್ಮೂಲನೆ ಮತ್ತಷ್ಟು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ಷಯರೋಗ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವಂತಾಗಬೇಕು ಎಂದು ಅವರು ಕರೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಅವರು ಮಾತನಾಡಿ 2025 ರ ವೇಳೆಗೆ ಕ್ಷಯಮುಕ್ತ ಮಾಡಲು ಎಲ್ಲಾ ಸಹಕಾರ ಮಾಡಬೇಕಾಗಿ ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಎನ್.ಆನಂದ್ ಅವರು ಮಾತನಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಐಎಂಎ ಅಧ್ಯಕ್ಷರಾದ ಡಾ.ಶ್ಯಾಮ್ ಅಪ್ಪಣ್ಣ, ಕಾರ್ಯಾಗಾರದ ವಿಶೇಷ ಉಪನ್ಯಾಸಕರಾದ ವಿಶ್ವ ಸಂಸ್ಥೆ ಸಲಹೆಗಾರರಾದ ಡಾ.ಶಾಹಾಜಿಯ ಅನುಜುಮ್, ಉಪನ್ಯಾಸಕರಾದ ಡಾ.ಪಿ.ಎಸ್.ಬಾಲು, ಡಾ.ರಾಮಚಂದ್ರ ಕಾಮತ್, ಸಿಬ್ಬಂದಿಗಳು ಇತರರು ಇದ್ದರು.
ಡಾ.ಪ್ರೇರಣಾ ಅವರು ಪ್ರಾರ್ಥಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿ ಡಾ.ರಾಮಚಂದ್ರ ಕಾಮತ್ ಅವರು ಸ್ವಾಗತಿಸಿದರು. ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಎಂ.ಮಹಾದೇವಪ್ಪ ವಂದಿಸಿದರು. ಡಾ.ಕೃತಿಕಾ ನಿರೂಪಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network