Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನ ಪ್ರಚಾರಾಂದೋಲನಕ್ಕೆ ಚಾಲನೆ

ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನ ಪ್ರಚಾರಾಂದೋಲನಕ್ಕೆ ಚಾಲನೆ 


ಮಡಿಕೇರಿ ಮಾ.06: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಇವರ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ವಿಡಿಯೋ ಆನ್ ವೀಲ್ಸ್ ವಾಹನದ ಮುಖಾಂತರ ಬಾಲ್ಯ ವಿವಾಹ ನಿμÉೀಧ ಅಭಿಯಾನಕ್ಕೆ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಗಣ್ಯರು ಚಾಲನೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧಿಶರಾದ ಸುಬ್ರಮಣ್ಯ ಅವರು ಮಾತನಾಡಿ ವಿಡಿಯೋ ಆನ್ ವೀಲ್ಸ್ ವಾಹನದ ಮುಖಾಂತರ ಬಾಲ್ಯ ವಿವಾಹ ನಿμÉೀಧ ಅಭಿಯಾನ ಕಾರ್ಯಕ್ರಮ ಸರ್ಕಾರ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಬಾಲ್ಯ ವಿವಾಹ ಪದ್ದತಿಯು ಸಮಾಜಕ್ಕೆ ಅಂಟಿದ ಪಿಡುಗು. ಇಂತಹ ಪಿಡುಗು ಬೇರು ಸಮೇತ ನಿರ್ಮೂಲನೆ ಮಾಡಬೇಕಾದರೆ ಸಾರ್ವಜನಿಕರಲ್ಲಿ ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದರು.

ಯಾವುದೇ ಒಂದು ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮುಂಚಿತವಾಗಿ ಆ ಕಾಯ್ದೆಯ ಉದ್ದೇಶವನ್ನು ಜನಸಾಮನ್ಯರಿಗೆ ಅರಿವು ಮೂಡಿಸಿದ್ದಲ್ಲಿ ಕಾಯ್ದೆಯು ಸಫಲದಾಯಕವಾಗುತ್ತದೆ. ಇಂತಹ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಮುಖ್ಯ ಕಾರಣವೆಂದರೆ ಭಾರತ ದೇಶವು ಅಂತರಾಷ್ಟ್ರೀಯ ಒಡಂಬಡಿಕೆಗೆ ಸಹಿ ಮಾಡಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯು ಪ್ರತಿಯೊಬ್ಬರ ಜವಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಸರ್ಕಾರದಿಂದ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲು ಈ ಅಭಿಯಾನವು ಅತ್ಯುತ್ತಮವಾಗಿದೆ. ಬಾಲ್ಯ ವಿವಾಹ ಪದ್ದತಿಯು ಇನ್ನು ಕೆಲವು ಕಡೆ ಜಾರಿಯಲ್ಲಿದೆ. ತಂದೆ- ತಾಯಿಗೆ ಹೆಣ್ಣು ಮಕ್ಕಳು ಹೊರೆ ಎಂದು ಬಾವಿಸಿ ಅವರಿಗೆ  14 ರಿಂದ 15 ವರ್ಷ ತುಂಬಿದ ತಕ್ಷಣ ಮದುವೆ ಮಾಡುತ್ತಿದ್ದರು ಆದರೆ ಕಾಲ ಈಗ ಬದಲಾಗಿದ್ದು, ‘ಬೇಟಿ ಬಚ್ಚಾವೋ ಬೇಟಿ ಪಡಾವೋ’ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯಕಾಗಿಯೇ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.  

ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಕುಂಠಿತಗೊಳ್ಳುತ್ತಿದೆ. ಇಂತಹ ಅನಿಷ್ಟ ಪದ್ಧತಿ ಸಮಾಜದಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವುದನ್ನು ತಾವೆಲ್ಲಾ ಒಗ್ಗೂಡಿ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು. ಹೆಣ್ಣು ಮಕ್ಕಳ ಕನಸನ್ನು ನನಸಾಗಿಸಲು ಹಾಗೂ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎಂ. ಮುದ್ದಣ್ಣ ಅವರು ಮಾತನಾಡಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿನಲ್ಲಿಯೂ ಬಾಲ್ಯ ವಿವಾಹ ನಿμÉೀಧ ಕುರಿತು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಹೆಜ್ಜೆಯಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಹಾಗೂ ಬಾಲ್ಯ ವಿವಾಹ ನಡೆಯುವ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಬಹುದು. ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಅಥವಾ ಜಿಲ್ಲಾ  ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೇರವಾಗಿ ಬಂದು ಮಾಹಿತಿ ನೀಡಿದಲ್ಲಿ ತಕ್ಷಣ ಕಾನೂನು ರಿತ್ಯ ಕ್ರಮ ತೆಗದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು 

ಪ್ರತಿಜ್ಞಾವಿಧಿ ಸ್ವೀಕಾರ: ಭಾರತದ ಪ್ರಜೆಯಾದ ನಾನು ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತವಾಗಿ ಅವರ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ತಿಳಿದಿರುವುದರಿಂದ ಬಾಲ್ಯವಿವಾಹ ಮುಕ್ತ ಸಮಾಜವನ್ನು ನಿರ್ಮಿಸುವುದಕ್ಕೆ ಬದ್ದನಾಗಿದ್ದೇನೆ/ಳಾಗಿದ್ದೇನೆ. 

ನನ್ನ ವೈಯಕ್ತಿಕ ನೆಲೆಯಿಂದ ಮತ್ತು ಸಮಾಜದಲ್ಲಿನ ನನ್ನ ಸ್ಥಾನ ಮಾನದ ನೆಲೆಯಿಂದ ನನ್ನ ಕುಟುಂಬದಲ್ಲಿ ಬಂಧು ಬಳಗದಲ್ಲಿ ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ನಾನು ಬಾಲ್ಯ ವಿವಾಹಗಳನ್ನು ವಿರೋಧಿಸುತ್ತೇನೆ. 

18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ನಡೆಸುವ ಸಾಧ್ಯತೆ ಕಂಡು ಬಂದಲ್ಲಿ ಅದನ್ನು ತಡೆಯುತ್ತೇನೆ. ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಪೊಲೀಸರಿಗೆ, ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ಚೈಲ್ಡ್ ಲೈನ್ 1098 ಗೆ ಮಾಹಿತಿ ನೀಡುತ್ತೇನೆ. 

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಪ್ರಕಾರ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ವಾಗಿರುವುದರಿಂದ ನಮ್ಮ ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸುವ ದಿಸೆಯಲ್ಲಿ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡು ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆಂದು ಶ್ರದ್ಧಾಪೂರ್ವಕವಾಗಿ ಪ್ರಮಾಣ ಮಾಡುತ್ತೇನೆ ಎಂದು  ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಂಧತಿ ಅವರು ಪ್ರಮಾಣ ವಚನವನ್ನು ಬೋಧಿಸಿದರು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್, ಕಾರ್ಯಕ್ರಮ ಅಧಿಕಾರಿ ಪೂಣಚ್ಚ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರಾದ ರೆಹನಾ ಸುಲ್ತಾನ್, ಅಧಿಕಾರಿಗಳು ಇತರರು ಇದ್ದರು.

ಪ್ರಚಾರಾಂದೋಲನದ ರೂಟ್ ಮ್ಯಾಪ್ ಇಂತಿದೆ: ಮಾರ್ಚ್, 07 ರಂದು ಬೆಳಗ್ಗೆ 10.30 ಗಂಟೆಗೆ ಬೆಟ್ಟಗೇರಿ ಶ್ರೀ ಉದಯ ಪ್ರೌಢಶಾಲೆ, ಬೆ: 11.30 ಗಂಟೆಗೆ ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ 12.30 ಗಂಟೆಗೆ ಭಾಗಮಂಡಲ ತಾವೂರು ಶ್ರೀ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ 2 ಗಂಟೆಗೆ ನಾಪೋಕ್ಲು ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ 3.30 ಗಂಟೆಗೆ ನೆಲಜಿ ಸರ್ಕಾರಿ ಪ್ರೌಢ ಶಾಲೆ, 

ಮಾರ್ಚ್, 08 ರಂದು ಬೆಳಗ್ಗೆ 10.30 ಗಂಟೆಗೆ ಚೆಟ್ಟಳ್ಳಿ ಗ್ರಾ.ಪಂ., ಬೆ.11.30 ಗಂಟೆಗೆ ಸುಂಟಿಕೊಪ್ಪ ಅಂಬೇಡ್ಕರ್ ಭವನ, ಮಧ್ಯಾಹ್ನ 12.30 ಗಂಟೆಗೆ ಮಾದಾಪುರ ಗ್ರಾ.ಪಂ., ಮಧ್ಯಾಹ್ನ 2 ಗಂಟೆಗೆ ಬೇಳೂರು ಗಣಪತಿ ದೇವಸ್ಥಾನ, ಮಧ್ಯಾಹ್ನ 3.30 ಗಂಟೆಗೆ ಹಾನಗಲ್ಲು ಗ್ರಾ.ಪಂ.,

ಮಾರ್ಚ್, 09 ರಂದು ಬೆಳಗ್ಗೆ 10.30 ಗಂಟೆಗೆ ಶಾಂತಳ್ಳಿ ಸಮುದಾಯ ಭವನ, ಬೆಳಗ್ಗೆ 11.30 ಗಂಟೆಗೆ ಸೋಮವಾರಪೇಟೆಯ ಸೆಂಟ್ ಜೋಸೆಫ್ ಕಾಲೇಜು, ಮಧ್ಯಾಹ್ನ 12.30 ಗಂಟೆಗೆ ಸೋಮವಾರಪೇಟೆ ಜೆ.ಸಿ.ವೇದಿಕೆ (ತಾಲ್ಲೂಕು ಕಚೇರಿ ಹತ್ತಿರ), ಮಧ್ಯಾಹ್ನ 2 ಗಂಟೆಗೆ ಗೌಡಳ್ಳಿ ಹಳೇ ಪೋಸ್ಟ್ ಆಫೀಸ್, ಮಧ್ಯಾಹ್ನ 3.30 ಗಂಟೆಗೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ.

ಮಾರ್ಚ್, 10 ರಂದು ಬೆ.10.30 ಗಂಟೆಗೆ ಕೊಡ್ಲಿಪೇಟೆ ಗ್ರಾ.ಪಂ., ಬೆ:11.30 ಗಂಟೆಗೆ ಆಲೂರು ಸಿದ್ದಾಪುರ ಗ್ರಾ.ಪಂ., ಮಧ್ಯಾಹ್ನ 12.30 ಗಂಟೆಗೆ ನೇರುಗಳಲೆ ಗ್ರಾ.ಪಂ.(ಅಬ್ಬೂರು ಕಟ್ಟೆ), ಮಧ್ಯಾಹ್ನ 2 ಗಂಟೆಗೆ ಕುಶಾಲನಗರ ತಾಲ್ಲೂಕಿನ ಶಿರಂಗಾಲ ನಂದಿನಿ ಸಭಾಂಗಣ, ಮಧ್ಯಾಹ್ನ 3.30 ಗಂಟೆಗೆ ಹೆಬ್ಬಾಲೆ ಗ್ರಾ.ಪಂ., 

ಮಾರ್ಚ್, 11 ರಂದು ಬೆಳಗ್ಗೆ 10.30 ಗಂಟೆಗೆ ಕುಶಾಲನಗರ ಜೂನಿಯರ್ ಕಾಲೇಜು, ಬೆ: 11.30 ಗಂಟೆಗೆ ಕೂಡು ಮಂಗಳೂರು ಗ್ರಾ.ಪಂ., ಮಧ್ಯಾಹ್ನ 12.30 ಗಂಟೆಗೆ ಕುಶಾಲನಗರ ಬಸ್ ನಿಲ್ದಾಣ, ಮಧ್ಯಾಹ್ನ 2 ಗಂಟೆಗೆ ಗುಡ್ಡೆ ಹೊಸೂರು ಗ್ರಾ.ಪಂ., ಮಧ್ಯಾಹ್ನ 3.30 ಗಂಟೆಗೆ ನೆಲ್ಲಿ ಹುದಿಕೇರಿ ಗ್ರಾ.ಪಂ., 

ಮಾರ್ಚ್, 12 ರಂದು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರ, ಬೆ: 11.30 ಗಂಟೆಗೆ ಮಾಲ್ದಾರೆ, ಮಧ್ಯಾಹ್ನ 12.30 ಗಂಟೆಗೆ ಚೆನ್ನಯ್ಯನಕೋಟೆ, ಮಧ್ಯಾಹ್ನ 2 ಗಂಟೆಗೆ ಪಾಲಿಬೆಟ್ಟ, ಮಧ್ಯಾಹ್ನ 3.30 ಗಂಟೆಗೆ ಅಮ್ಮತ್ತಿ,   

ಮಾರ್ಚ್, 13 ರಂದು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆ ಪಟ್ಟಣ, ಬೆ: 11.30 ಗಂಟೆಗೆ ವಿರಾಜಪೇಟೆ ಪಟ್ಟಣ, ಮಧ್ಯಾಹ್ನ 12.30 ಗಂಟೆಗೆ ಗೋಣಿಕೊಪ್ಪ, ಮಧ್ಯಾಹ್ನ 2 ಗಂಟೆಗೆ ಗೋಣಿಕೊಪ್ಪ, ಮಧ್ಯಾಹ್ನ 3.30 ಗಂಟೆಗೆ ತಿತಿಮತಿ,

 ಮಾರ್ಚ್, 14 ರಂದು ಬೆಳಗ್ಗೆ 10.30 ಗಂಟೆಗೆ ಬಾಳೆಲೆ, ಬೆಳಗ್ಗೆ 11.30 ಗಂಟೆಗೆ ಕಾನೂರು, ಮಧ್ಯಾಹ್ನ 12.30 ಗಂಟೆಗೆ ನಾಲ್ಕೇರಿ, ಮಧ್ಯಾಹ್ನ 2 ಗಂಟೆಗೆ ನಾಣಚ್ಚಿ, ಮಧ್ಯಾಹ್ನ 3.30 ಗಂಟೆಗೆ ಕುಟ್ಟ, 

ಮಾರ್ಚ್, 15 ರಂದು ಬೆಳಗ್ಗೆ 10.30 ಗಂಟೆಗೆ ಶ್ರೀಮಂಗಲ, ಬೆ. 11.30 ಗಂಟೆಗೆ ಟಿ.ಶೆಟ್ಟಿಗೇರಿ, ಮಧ್ಯಾಹ್ನ 12.30 ಗಂಟೆಗೆ ಬಿರುನಾಣಿ, ಮಧ್ಯಾಹ್ನ 2 ಗಂಟೆಗೆ ಹುದಿಕೇರಿ, ಮಧ್ಯಾಹ್ನ 3.30 ಗಂಟೆಗೆ ಪೊನ್ನಂಪೇಟೆ. ಇಲ್ಲಿ ಎಲ್‍ಇಡಿ ವಾಹನದ ಮೂಲಕ ಪ್ರಚಾರಾಂದೋಲನ ನಡೆಯಲಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,