Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿಶ್ವ ಶ್ರವಣ ದಿನ ಆಚರಣೆ

ವಿಶ್ವ ಶ್ರವಣ ದಿನ ಆಚರಣೆ


ಮಡಿಕೇರಿ ಮಾ.05: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಿವಿ, ಮೂಗು ಮತ್ತು ಗಂಟಲು ವಿಭಾಗದಿಂದ ಇತ್ತೀಚೆಗೆ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಕಿವಿ, ಮೂಗು ಮತ್ತು ಗಂಟಲು  ವಿಭಾಗದಿಂದ “ಕೊಡಗು ಸುರಕ್ಷಿತವಾಗಿ ಆಲಿಸಿರಿ” ಎಂಬ ಅಭಿಯಾನಕ್ಕೆ ಚಾಲನೆ ದೊರೆಯಿತು.    

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ಮಡಿಕೇರಿಯ ಉಪನ್ಯಾಸ ಸಭಾಂಗಣದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡೀನ್ ಹಾಗೂ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ ಅವರು ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯ 2022ರ ಧ್ಯೇಯವಾಕ್ಯದ ಬಗ್ಗೆ ಒತ್ತು ನೀಡುತ್ತಾ ಹೆಚ್ಚು ಕಾಲ ಹೆಡ್‍ಪೆÇೀನ್‍ಗಳನ್ನು ಉಪಯೋಗಿಸಬಾರದು ಎಂದು ತಿಳಿಸಿದರು. 

“ಕೊಡಗು ಸುರಕ್ಷಿತವಾಗಿ ಆಲಿಸಿರಿ” ಆಭಿಯಾನವು ತಮ್ಮ ಕಿವಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಹಾಗೂ ಆಲಿಸುವುದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿದೆ ಎಂದರು. 

 ಕೋವಿಡ್ ಸಾಂಕ್ರಾಮಿಕ ರೋಗವು ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಬದಲಾವಣೆ ತಂದಿದೆ. ಅಂತಹ ಒಂದು ಬದಲಾವಣೆಯೆಂದರೆ ವೈಯಕ್ತಿಕವಾಗಿ ಆಲಿಸುವ ಸಾಧನಗಳಾದ ಇಯರ್ ಪೆÇೀನ್‍ಗಳು, ಹೆಡ್‍ಪೆÇೀನ್‍ಗಳನ್ನು ಬಳಸುವುದು. ಇದರ ನಿರಂತರ ಬಳಕೆ ಮಾಡುವುದರಿಂದ ಶೇ.60 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಲಿಸಿದರೆ ಶ್ರವಣ ನಷ್ಟವಾಗುತ್ತದೆ ಎಂದು ಡಾ.ಕಾರ್ಯಪ್ಪ ಅವರು ತಿಳಿಸಿದರು.  

ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಯುವ ವಯಸ್ಕರು ಇಯರ್ ಫೆÇೀನ್‍ಗಳು, ಹೆಡ್‍ಫೆÇೀನ್‍ಗಳನ್ನು ಹೆಚ್ಚಾಗಿ ಬಳಸಿ, ಜೋರಾದ ಧ್ವನಿಯಲ್ಲಿ ಕೇಳುವುದರಿಂದ ಕಿವಿಗೆ ಹಾನಿ ಉಂಟಾಗುತ್ತದೆ. ಇದರ ಅರಿವು ಮೂಡಿಸುವ ಸಲುವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ “ಕೊಡಗು ಸುರಕ್ಷಿತವಾಗಿ ಆಲಿಸಿರಿ” ಎಂಬ ಅಭಿಯಾನ ಪ್ರಾರಂಭಿಸಲಾಯಿತು. ಇದರಲ್ಲಿ ಕೈ ಜೋಡಿಸಿ ಕೊಡಗಿನ ಸಾರ್ವಜನಿಕರು ಈ ಅಭಿಯಾನದ ಉಪಯೋಗ ಅರಿತು ಇದನ್ನು ಯಶಸ್ವಿಗೊಳಿಸುವಂತೆ ಕೋರಿದರು. 

ಪ್ರಾಂಶುಪಾಲರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ವಿಶಾಲ್ ಕುಮಾರ್ ಅವರು ವಿದ್ಯಾರ್ಥಿಗಳು ಹೆಚ್ಚಾಗಿ ಹೆಡ್‍ಪೆÇೀನ್ ಉಪಯೋಗಿಸುವುದನ್ನು ಕಂಡಿದ್ದು, ಈ ರೀತಿ ಉಪಯೋಗಿಸುವುದರಿಂದ ಕೇಳುವಿಕೆಯಲ್ಲಿ ತೊಂದರೆ ಉಂಟಾಗಬಹುದೆಂದು ತಿಳಿಸಿರುತ್ತಾರೆ.

ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ ಅವರು  ಮಾತನಾಡಿ  ಕಿವಿ ಕೇಳುವಿಕೆಯಲ್ಲಿ ತೊಂದರೆಗೆ ಹಲವಾರು ಕಾರಣಗಳನ್ನು ವಿವರಿಸಿ, ಅದರಲ್ಲಿ ಅತಿಯಾದ ಶಬ್ದದಿಂದ ಉಂಟಾಗುವ ಕಿವುಡುತನವು ಒಂದಾಗಿದೆ ಎಂದರು. 

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಬಾಹ್ಯ ಸೇವಾ ಕೇಂದ್ರದ ಅಡಿಯೋಲಾಜಿಸ್ಟ್ ಆದ ಜಿಜಿನು ಅವರು ಮಾತನಾಡಿ ಕಿವಿಯ ರಕ್ಷಣೆಯ ಕುರಿತು ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. 

ಸಂಗೀತ ಆಲಿಸುವ ಪ್ರಮಾಣದಲ್ಲಿ ಶೇ.60 ಕ್ಕಿಂತ ಹೆಚ್ಚಾಗಿ ಯಾವುದೇ ಕಾರಣಕ್ಕೂ ನಮ್ಮ ಪೆÇೀನ್‍ಗಳಲ್ಲಿ ಆಲಿಸಬಾರದು ಹಾಗೂ 60 ನಿಮಿಷಕ್ಕಿಂತ ಹೆಚ್ಚಾಗಿ ಸತತವಾಗಿ ಕೇಳಬಾರದು ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಪಂಚಮ್ ಪೆÇನ್ನಣ್ಣರವರು ನಡೆಸಿಕೊಟ್ಟರು, ಡಾ|| ಪ್ರೇರಣರವರು ಪ್ರಾರ್ಥನೆ ಸಲ್ಲಿಸಿದರು,   ಡಾ.ಲಾವಣ್ಯ ಸ್ವಾಗತಿಸಿದರು. ಡಾ.ನಳಿನಿ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,