Header Ads Widget

ಸರ್ಚ್ ಕೂರ್ಗ್ ಮೀಡಿಯ

ಶ್ರುಶ್ರೂಷಕ ಅಧಿಕಾರಿಗಳಿಗೆ ನಡೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

ಶ್ರುಶ್ರೂಷಕ ಅಧಿಕಾರಿಗಳಿಗೆ ನಡೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ


ಮಡಿಕೇರಿ ಮಾ.05: ಶ್ರುಶ್ರೂಷಕರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಶ್ರುಶ್ರ್ರೂಷಕ ವೃತ್ತಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಆಳ್ವಾಸ್ ಕಾಲೇಜಿನ ವೈದ್ಯಕೀಯ ಶಿಕ್ಷಣದ ಪ್ರಾಂಶುಪಾಲರಾದ ಡಾ.ಬಿ.ಎ.ಯತಿಕುಮಾರ ಸ್ವಾಮಿಗೌಡ ಅವರು ನುಡಿದರು.

ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ(ಜಿಲ್ಲಾಸ್ಪತ್ರೆ) ಸಭಾಂಗಣದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವತಿಯಿಂದ ಶ್ರುಶ್ರೂಷಕ ಅಧಿಕಾರಿಗಳಿಗೆ ಶನಿವಾರ ನಡೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಶ್ರುಶ್ರೂಷಕರಿಗೆ ವೈದ್ಯಕೀಯ ಶಿಕ್ಷಣದ ಅರಿವು ಕಾರ್ಯಗಾರವು ಕೇವಲ ಸರ್ಟಿಫಿಕೇಟ್ ಕೋರ್ಸ್ ಮಾತ್ರವಲ್ಲ. ಈ ಕಾರ್ಯಕ್ರಮವು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. 

ಪ್ರಚಲಿತ ಕಾಲಘಟ್ಟದಲ್ಲಿ ವಿಜ್ಞಾನದಲ್ಲಿ ಯಾವ ರೀತಿಯಲ್ಲಿ ಬದಲಾವಣೆಗಳಾಗಿವೆ ಎಂದು ಈ ಕಾರ್ಯಕ್ರಮದ ಮೂಲಕ ತಿಳಿಯಬಹುದು. ಮುಂದುವರೆದ ಶಿಕ್ಷಣದಲ್ಲಿ ಕೆಲವೊಂದು ಸಮಸ್ಯೆಗಳನ್ನು ಕಾಣಬಹುದಾಗಿದೆ ಎಂದು ಸ್ವಾಮಿಗೌಡ ಅವರು ಹೇಳಿದರು. 

ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆ ನಿದೇಶಕರಾದ ಡಾ.ಕೆ.ಬಿ ಕಾರ್ಯಪ್ಪ ಅವರು ಮಾತನಾಡಿ ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಆ ದಿಸೆಯಲ್ಲಿ ಈ ಕಾರ್ಯಕ್ರಮವು ಶ್ರೂಶ್ರುಷಕರಿಗೆ ಒಂದು ಸ್ಪೂರ್ತಿ ನೀಡುತ್ತದೆ ಎಂದರು.  

ಜಿಲ್ಲಾ ಶ್ರುಶ್ರೂಷಕ ಅಧೀಕ್ಷಕರಾದ ವೀಣಾ ಅವರು ಮಾತನಾಡಿ ವಿಜ್ಞಾನವು ಮುಂದುವರಿದಿದೆ. ವಿಜ್ಞಾನವು ಕಾಲಕಾಲಕ್ಕೆ ಬದಲಾಗುವುದರಿಂದ ಶ್ರುಶ್ರೂಷಕರು ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಅಗತ್ಯ ಎಂದರು. 

ಕೊಡಗು ಜಿಲ್ಲಾ ವೈದ್ಯಕೀಯ ಆಸ್ಪತ್ರೆಯ ಆಡಳಿತಾಧಿಕಾರಿ ಲಿಲ್ಲಿ ಅವರು ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ವೈದ್ಯಕೀಯ ಶಿಕ್ಷಣ ಅರಿವು ಕಾರ್ಯಾಗಾರ ಆಯೋಜಿಸಿರುವುದು, ಶ್ಲಾಘನೀಯ ಎಂದರು. 

ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ್ ಅವರು ಮಾತನಾಡಿ ವೈದ್ಯಕೀಯ ಶಿಕ್ಷಣ ಅರಿವು ಕಾರ್ಯಾಗಾರದಲ್ಲಿ ಪ್ರತಿ ವರ್ಷವೂ ನರ್ಸಿಂಗ್ ವಿಷಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಸ್ಥಾನಿಕ ವೈದ್ಯಾಧಿಕಾರಿ ಡಾ.ರೂಪೇಶ್ ಗೋಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾಕ್ಟರ್ ಸ್ಪೂರ್ತಿ, ರೇಡಿಯೋಲಜಿಸ್ಟ್ ಆನಂದ್, ದಿಲೀಪ್ ಇತರರು ಇದ್ದರು. ನಸಿರ್ಂಗ್ ಆಫೀಸರ್ ಲೋವಿಸ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,