Header Ads Widget

Responsive Advertisement

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 28 ನೇ ಸಂಸ್ಥಾಪನಾ ದಿನ


ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಮಡಿಕೇರಿ ಏ.27: ರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳವಾರ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಅಕಾಡೆಮಿಯ “28 ನೇ ಸಂಸ್ಥಾಪನಾ ದಿನ” ಕಾರ್ಯಕ್ರಮ ನಡೆಯಿತು. 

       ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಕಾಡಮಿಯು ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ, ಕಲೆಗಳಿಗೆ ಉತ್ತೇಜನ ನೀಡುತ್ತಿದೆ. ಕೊಡವ ಭಾಷೆಯು ಈಗ ಸಾಂಸ್ಕøತಿಕ ಭಾಷೆಯಲ್ಲದೆ, ಓದುವ ಭಾಷೆಯಾಗಿದೆ. ಈಗಾಗಲೇ ಕೊಡವ ಪಾಠ ಪಡಿಪು 1 ಪಠ್ಯ ಪುಸ್ತಕ ತಯಾರಾಗಿ 1 ನೇ ತರಗತಿಯ ಮಕ್ಕಳು ಕಲಿತು ಪರೀಕ್ಷೆ ಬರೆದು ಇಂದು ಅಕಾಡೆಮಿಯ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗಿದೆ.      ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ, ಕಲೆ, ಬೆಳೆಸಬೇಕಾದರೆ ಇದಕ್ಕೆ ಎಲ್ಲರ ಸಹಕಾರ ಬಹಳ ಮುಖ್ಯ ಎಂದು ಹೇಳಿದರು. 

      ಕೊಡವ ಭಾಷೆ ಬೆಳೆಯಲು ಸತತ ಪ್ರಯತ್ನ ನಡೆಯುತ್ತಿದೆ. ಕೊಡವ ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವುದು, ಕೊಡವ ಭಾಷೆಯನ್ನು ರಾಜ್ಯದಲ್ಲಿ 3ನೇ ಭಾಷೆಯಾಗಿ ಸೇರಿಸುವ ಪ್ರಯತ್ನ ಅಕಾಡೆಮಿಯಿಂದ ಸತತವಾಗಿ ಇಂದಿನವರೆಗೂ ನಡೆಯುತ್ತಾ ಬಂದಿದೆ ಎಂದರು. 

      ಸಂಸ್ಥಾಪನಾ ದಿನವನ್ನು ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿದೆ. ಡಾ.ಪಾರ್ವತಿ ಅಪ್ಪಯ್ಯ ಅವರು ಅಕಾಡೆಮಿಯ ಉದಯ, ಬೆಳೆದು ಬಂದ ದಾರಿ, ಅಕಾಡೆಮಿಯಲ್ಲಿ ನಡೆದ ಕೆಲಸಗಳು ಹಾಗೂ ಈಗ ಮಾಡುತ್ತಿರುವ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. 

      ಶತಮಾನೋತ್ಸವ ಪ್ರಯುಕ್ತ ಬಿ.ಡಿ.ಗಣಪತಿ ಸ್ಮರಣ ಸಂಚಿಕೆಯನ್ನು ಅವರ ಮಗಳಾದ ತೀತರಮಾಡ ಲಾಜ್ ಗಣಪತಿ ಹಾಗೂ ಐ.ಮಾ.ಮುತ್ತಣ್ಣ ಸ್ಮರಣ ಸಂಚಿಕೆಯನ್ನು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಐಮುಡಿಯಂಡ ರಾಣಿ ಮಾಚಯ್ಯ ಅವರು ಬಿಡುಗಡೆ ಮಾಡಿದರು. 

      ಅತಿಥಿಗಳಾಗಿ ಭಾಗವಹಿಸಿದ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ ಅಕಾಡೆಮಿಯು ಕೊಡವ ಭಾಷೆಯನ್ನು ಬೆಳೆಸಲು ಹಿಂದಿನಿಂದಲೇ ಶ್ರಮಪಡುತ್ತಾ ಬಂದಿದೆ. ಸಂಸ್ಕøತಿ ಉಳಿಸುವ ಕೆಲಸವನ್ನು ಎಲ್ಲರು ಮಾಡೋಣ ಆಗ ಮಾತ್ರ ಕೊಡವ ಭಾಷೆ, ಕೊಡವ ಜನಾಂಗ ಬೆಳೆಯಲು ಸಾಧ್ಯ ಎಂದು ಹೇಳಿದರು.

      ಕೊರಕುಟ್ಟಿರ ಸರಚಂಗಪ್ಪ ಅವರು ಮಾತನಾಡಿ ಅಕಾಡೆಮಿಯು ಕಲೆಗೆ, ಸಾಹಿತ್ಯಕ್ಕೆ, ಹಾಗೂ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ. ಅಕಾಡೆಮಿಯು ಇನ್ನೂ ಎತ್ತರದ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು. 

      ಕಾರ್ಯಕ್ರಮದಲ್ಲಿ ಚಿರಿಯಪಂಡ ರಾಜಾನಂಜಪ್ಪ, ಮಂಡೆಚಂಡ ದಿನೇಶ್ ಚಿಟ್ಟಿಯಪ್ಪ ಅವರು ಉಪಸ್ಥಿತರಿದ್ದು, ಅಕಾಡೆಮಿಯ ಕಾರ್ಯಕ್ಕೆ ಶುಭ ಹಾರೈಸಿದರು. ಅಕಾಡೆಮಿ ಮಾಜಿ ಅಧ್ಯಕ್ಷರಾದ ಚಿರಿಯಪಂಡ ರಾಜಾ ನಂಜಪ್ಪ, ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ಪೆಮ್ಮಂಡ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. 

      ಕೊಡವ ಪಾಠ ಪಡಿಪು-1 ಕಲಿತು ಪರೀಕ್ಷೆ ಬರೆದು ಉತ್ತೀರ್ಣರಾದ 81 ಮಕ್ಕಳಿಗೆ ಪ್ರಮಾಣ ಪತ್ರವನ್ನು ಅಕಾಡೆಮಿ  ವತಿಯಿಂದ ಉಪಾಧ್ಯಾಯರ ಮೂಲಕ ವಿತರಿಸಲಾಯಿತು.

     ಅಕಾಡೆಮಿಯ ಸದಸ್ಯರಾದ ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ, ಮಾಚಿಮಾಡ ಜಾನಕಿ ಮಾಚಯ್ಯ, ಪಡಿಞÁರಂಡ ಪ್ರಭುಕುಮಾರ್ ಹಾಗೂ ತೇಲಪಂಡ ಕವನ್ ಕಾರ್ಯಪ್ಪ ಅವರು ಇದ್ದರು. 

      ಅಪ್ಪಚ್ಚಕವಿ ಶಾಲೆಯ ಚರಿತ ಮತ್ತು ತಂಡದವರು ಪ್ರಾರ್ಥಿಸಿದರು. ಅಕಾಡೆಮಿಯ ಸದಸ್ಯರಾದ ಪಡಿಞÁರಂಡ ಪ್ರಭುಕುಮಾರ್ ಅವರು ಸ್ವಾಗತಿಸಿದರು. ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು.