ಮಡಿಕೇರಿ ನಗರಸಭೆಯಲ್ಲಿ ಕಸ ವಿಲೇವಾರಿ ವಾಹನ ಇಲ್ಲವೇನೋ ಅನಿಸುತ್ತದೆ? ಇಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯ ಗಳಿದ್ದು, ಅವುಗಳ ಸ್ಥಿತಿ ಹೇಳತೀರದಾಗಿದೆ ಮಹಿಳೆಯರ ಶೌಚಾಲಯದ ಬಾಗಿಲುಗಳು ಮುರಿದು ಹೋಗಿದ್ದು, ಕೆಲವು ಬಾಗಿಲುಗಳಿಗೆ ತಾಳವೇ ಇಲ್ಲದೆ ಶೌಚಾಲಯಕ್ಕೆ ಬರುವ ಮಹಿಳೆಯ ಸಂಕಷ್ಟ ಪಡುವ ಪರಿಸ್ಥಿತಿ ಬಂದೊದಗಿದೆ ಇಲ್ಲಿನ ಪುರುಷ ಹಾಗೂ ಮಹಿಳಾ ಶೌಚಾಲಯಗಳಲ್ಲಿ ಬಾಗಿಲುಗಳು ಹಾಗೂ ತಾಳ(ಚಿಲಕ)ಗಳು ಕಿತ್ತುಹೋಗಿದ್ದು, ಸಾರ್ವಜನಿಕರಿಗೆ ಶೌಚಾಲಯಕ್ಕೆ ಹೋಗಲು ತೊಂದರೆಯಾಗುತ್ತಿದೆ. ಇದೆಲ್ಲಾ ನಗರ ಸಭೆ ಗಮನಕ್ಕೆ ಬಂದಿಲ್ಲವೇ ಎಂಬಂತಿದೆ.
ನೂತನವಾಗಿ ಬಸ್ ನಿಲ್ದಾಣದ ಆವರಣದಲ್ಲಿ ನಗರ ಸಭೆ ವತಿಯಿಂದ ನಿರ್ಮಿಸಿದಂತಹ ಉದ್ಯಾನವದ ನಿರ್ವಹಣೆ ಇಲ್ಲದೆ ಹುಲ್ಲುಗಳು ಬೆಳೆದು ನಿಂತಿದ್ದು, ಇದನ್ನು ಯಾರು ನಿರ್ವಹಣೆ ಮಾಡಬೇಕು ಕೇವಲ ಹಣ ಬಿಡುಗಡೆಗೆ ಮಾಡಿದ್ದ ಉದ್ಯಾನವನವೇ ನಗರಸಭೆ ಇದಕ್ಕೆ ಉತ್ತರ ನೀಡಬೇಕು.
ಬಸ್ ನಿಲ್ದಾಣದ ಆವರಣದಲ್ಲಿರುವ ಬೃಹತ್ ಹೈಮಾಸ್ಕ್ ದೀಪವು ಕೇಟು ನಿತ್ತು ಹತ್ತು ದಿನಗಳು ಕಳೆದರು ಇದನ್ನು ಕೆಳಗೆ ಇಳಿಸಿ ಇಟ್ಟಿದ್ದಾರೆ ಹೊರತು ಇದುವರೆಗೂ ದುರಸ್ತಿ ಕಾರ್ಯ ಮಾಡಲು ನಗರಸಭೆಯ ಇಂಜಿನಿಯರ್ ಅವರ ಗಮನಕ್ಕೆ ಬಂದಿಲ್ಲವೇನೋ ಅನಿಸುತ್ತೆ?
ಮೊದಲು ನಗರ ಸಭೆಯ ಅಧಿಕಾರಿಗಳು ಹಾಗೂ ನಗರ ಸಭೆಯ ಆಡಳಿತ ಮಂಡಳಿ ನಿದ್ದೆ ಇಂದ ಹೊರಬಂದು ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸದಿದ್ದಲ್ಲಿ ನಗರ ಸಭೆ ವಿರುದ್ಧ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರ ಒಳಗೂಡಿ ಪ್ರತಿಭಟನೆ ನಡೆಸಲಾಗುವುದು ಇದಕ್ಕೆ ಸಂಬಂಧಪಟ್ಟ ನಗರಸಭೆ ನೂತನ ಖಾಸಗಿ ಬಸ್ ನಿಲ್ದಾಣದ ಅವಸ್ಥೆಯನ್ನು ಆದಷ್ಟು ಬೇಗ ಸರಿಪಡಿಸಿ ಕೊಡಬೇಕಾಗಿ ಕೊಡಗು ಹಿತರಕ್ಷಣಾ ವೇದಿಕೆ ಈ ಮೂಲಕ ಆಗ್ರಹಿಸುತ್ತಿಸದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network