Header Ads Widget

ಸರ್ಚ್ ಕೂರ್ಗ್ ಮೀಡಿಯ

2021-22 ನೇ ಸಾಲಿನಲ್ಲಿ ರೈತರಿಗೆ ಸಹಾಯಧನದಡಿ ಟಾರ್ಪಲ್ ವಿತರಣೆ


ಮಡಿಕೇರಿ ಏ.27: ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ 2021-22 ನೇ ಸಾಲಿನಲ್ಲಿ ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗುವ ಕಪ್ಪು ಬಣ್ಣದ (250 ಜಿಎಸ್‍ಎಂ ಎಚ್‍ಡಿಪಿಇ ಟಾರ್ಪಲಿನ್ಸ್ ಕನ್‍ಪರ್ಮಿಂಗ್ ಟು ಐಎಸ್7903/2017 (ಟೈಪ್11) 8*6 ಮೀ. ಟಾರ್ಪಾಲಿನ್‍ಗಳನ್ನು ಮೂರು ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಜಿಲ್ಲೆಯ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಅಗತ್ಯ ದಾಖಲಾತಿಗಳ (ಜಮೀನಿನ ಪಹಣಿ (ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ) ಪ್ರತಿಯನ್ನು ಅರ್ಜಿಯೊಂದಿಗೆ ನೀಡಿ ಸಹಾಯಧನದಲ್ಲಿ ಟಾರ್ಪಲ್ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ.ಷೇಕ್ ಅವರು ತಿಳಿಸಿದ್ದಾರೆ. 

ಟಾರ್ಪಾಲಿನ್‍ಗಳ ಒಟ್ಟು ಮೊತ್ತ ರೂ.2142 ಆಗಿದ್ದು, ಶೇ.50 ರ ಸಹಾಯಧನದಲ್ಲಿ ಸಾಮಾನ್ಯ ವರ್ಗದ ರೈತರ ವಂತಿಕೆ ರೂ. 1071 ಹಾಗೂ ಶೇ.90 ರ ಸಹಾಯಧನದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ರೈತರ ವಂತಿಕೆ ರೂ.214 ಹಾಗೂ ಒಬ್ಬ ರೈತ ಫಲಾನುಭವಿಯು ಮೂರು ವರ್ಷಗಳಿಗೆ ಒಮ್ಮೆ ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. 

ಹೆಚ್ಚಿನ ಮಾಹಿತಿಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು/ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ತಿಳಿಸಿದ್ದಾರೆ. 

ಲಭ್ಯವಿರುವ ಟಾರ್ಪಲಿನ್‍ಗಳ ವಿವರ: ಮಡಿಕೇರಿ ತಾಲ್ಲೂಕು ಕಸಬಾ 186(ಸಾಮಾನ್ಯ), 14(ಪರಿಶಿಷ್ಟ ಜಾತಿ), ನಾಪೋಕ್ಲು 400(ಸಾಮಾನ್ಯ), ಭಾಗಮಂಡಲ 150(ಸಾಮಾನ್ಯ), ಸಂಪಾಜೆ 214(ಸಾಮಾನ್ಯ). ಸೋಮವಾರಪೇಟೆ ತಾಲ್ಲೂಕು ಕಸಬಾ 202(ಸಾಮಾನ್ಯ), ಕುಶಾಲನಗರ 500(ಸಾಮಾನ್ಯ), 50(ಪ.ಜಾತಿ), 50(ಪ.ಪಂ.), ಸುಂಟಿಕೊಪ್ಪ 300(ಸಾಮಾನ್ಯ), ಶನಿವಾರಸಂತೆ 150(ಸಾಮಾನ್ಯ), ಶಾಂತಳ್ಳಿ 250(ಸಾಮಾನ್ಯ), ಕೊಡ್ಲಿಪೇಟೆ 150(ಸಾಮಾನ್ಯ), ವಿರಾಜಪೇಟೆ ತಾಲ್ಲೂಕು ಕಸಬಾ 50(ಸಾಮಾನ್ಯ), 06(ಪ.ಪಂ), ಪೊನ್ನಂಪೇಟೆ 60(ಸಾಮಾನ್ಯ), 05(ಪ.ಜಾತಿ), 07(ಪ.ಪಂ), ಅಮ್ಮತ್ತಿ 20(ಸಾಮಾನ್ಯ), 09(ಪ.ಜಾತಿ), 07(ಪ.ಪಂ.), ಬಾಳೆಲೆ 30(ಸಾಮಾನ್ಯ), 09(ಪ.ಜಾತಿ), ಹುದಿಕೇರಿ 20(ಸಾಮಾನ್ಯ), 02(ಪ.ಜಾತಿ) ಹಾಗೂ ಶ್ರೀಮಂಗಲ 20(ಸಾಮಾನ್ಯ).