Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗಿನ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರದಲ್ಲಿ *ಐತಿಹಾಸಿಕ ತುಳು ಸಿನಿಮಾ "ಕಾರ್ನಿಕೊದ ಕಲ್ಲುರ್ಟಿ"

ಕೊಡಗಿನ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರದಲ್ಲಿ ಐತಿಹಾಸಿಕ ತುಳು ಸಿನಿಮಾ "ಕಾರ್ನಿಕೊದ ಕಲ್ಲುರ್ಟಿ" 


ತುಳುನಾಡ ಕಾರ್ಣಿಕದ ದೈವ ಕಲ್ಲುರ್ಟಿಯ ಜೀವನ ಚರಿತ್ರೆಯನ್ನೊಳಗೊಂಡ " ಕಾರ್ನಿಕೊದ ಕಲ್ಲುರ್ಟಿ" ತುಳು ಸಿನಿಮಾ ಇದೇ ಬರುವ 28/04/2022 ನೇ ಗುರುವಾರ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಎಂದು ಚಿತ್ರದ ನಿರ್ದೇಶಕ, ನಿರ್ಮಾಪಕ ಮಹೇಂದ್ರ ಕುಮಾರ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾದ ಮಡಿಕೇರಿಯ ಪಿ.ಎಂ. ರವಿ ತಿಳಿಸಿದ್ದಾರೆ.

ಕಲ್ಲುರ್ಟಿ ಕಲ್ಕುಡರ ಹುಟ್ಟು, ಬಾಲ್ಯ ಹಾಗೂ ಬಳಿಕ ಅವರು ಅನ್ಯಾಯಕ್ಕೊಳಗಾಗಿ ನೊಂದು ಮನುಷ್ಯ ರೂಪ ತ್ಯಜಿಸಿ, ಮಾಯೆಗೆ ಹೋಗಿ ಅರಸನ ವಿರುದ್ಧ ಸೇಡು ತೀರಿಸಿಕೊಂಡು ದೈವಗಳಾಗಿ ಈ ಮಣ್ಣಲ್ಲಿ ರೂಪ ಪಡೆಯುವರೆಗಿನ ಜೀವನದ ಕಥೆಯನ್ನು ಸಿನಿಮಾದಲ್ಲಿ ಹೆಣೆಯಲಾಗಿದೆ. 

ಕಾರ್ಕಳದ ಬಜಗೋಳಿಯಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿರುವ " ಕಾರ್ನಿಕೊದ ಕಲ್ಲುರ್ಟಿ" ತುಳು ಸಿನಿಮಾದ ನಿರ್ಮಾಪಕ, ನಿರ್ದೇಶಕ ಮಹೇಂದ್ರ ಕುಮಾರ್‌. ಕನ್ನಡದ ಖ್ಯಾತ ನಟ ರಮೇಶ್‌ ಭಟ್‌ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಛಾಯಾಗ್ರಾಹಕ ಉಮಾಪತಿ ಅವರು ಛಾಯಾಗ್ರಹಣ ಮಾಡಿದ್ದು, ಗಂಗಾಧರ ಕಿರೋಡಿಯನ್‌ ಚಿತ್ರಕಥೆ ಬರೆದಿದ್ದಾರೆ. 

ಇದೇ ಬರುವ 28/04/2022 ನೇ ಗುರುವಾರ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರದಲ್ಲಿ ಮದ್ಯಾಹ್ನ 2:00 ಗಂಟೆಗೆ  ಮತ್ತು ಸಂಜೆ  6:00 ಗಂಟೆಗೆ 2 ಪ್ರದರ್ಶನ

ವಿಶೇಷ ಸೂಚನೆ:  ಸಿನಿಮಾದ ಟಿಕೆಟ್ ಚಿತ್ರಮಂದಿರದಲ್ಲಿ ದೊರೆಯುವುದಿಲ್ಲ.

ಮುಂಗಡ ಟಿಕೆಟ್ ಕಾಯಿದ್ದಿರಿಸಲು:  ಪಿ.ಎಂ. ರವಿ, ಮೊ: 9972073295 ಸಂಪರ್ಕ ಮಾಡಿ.