Header Ads Widget

ಸರ್ಚ್ ಕೂರ್ಗ್ ಮೀಡಿಯ

ಎಂ.ಎ.ಕೊಡವ ಸ್ನಾತಕೋತ್ತರ ತರಗತಿ ಆರಂಭ ಮತ್ತು ಪುಸ್ತಕ ಬಿಡುಗಡೆ ಸಮಾರಂಭ.

ಎಂ.ಎ.ಕೊಡವ ಸ್ನಾತಕೋತ್ತರ ತರಗತಿ ಆರಂಭ ಮತ್ತು ಪುಸ್ತಕ ಬಿಡುಗಡೆ ಸಮಾರಂಭ.


ಮಡಿಕೇರಿ ಏ.04: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್, ಮಡಿಕೇರಿ ಇವರ ಸಹಯೋಗದಲ್ಲಿ “ಎಂ.ಎ.ಕೊಡವ ಸ್ನಾತಕೋತ್ತರ ಕಾರ್ಯಕ್ರಮ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ” ನಡೆಯಿತು.  

ಕಾರ್ಯಕ್ರಮವನ್ನು ಹಿರಿಯ ಜಾನಪದ ಕಲಾವಿದರಾದ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಉದ್ಘಾಟಿಸಿದರು. ಎಂ.ಎ.ಕೊಡವ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಮೇಚಿರ ರವಿಶಂಕರ್ ಅವರು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. 

ಯಾವುದೇ ದೇಶದ ನಾಗರಿಕತೆಯಾಗಲಿ, ಸಂಸ್ಕøತಿಯಾಗಲಿ ಬೆಳೆಯಲು ಭಾಷೆ ಬಹಳ ಮುಖ್ಯ. ನಮ್ಮ ಭಾಷೆ ಬೆಳೆಯಬೇಕಾದರೆ ಮೊದಲು ಆ ಭಾಷೆಯ ಬಗ್ಗೆ ವ್ಯಾಮೋಹ ಇರಬೇಕು. ಕಲಿಯಲು ಹಾಗೂ ಬೇರೆಯವರಿಗೆ ಕಲಿಸುವ ಉತ್ಸಾಹ ಇರಬೇಕು. ಹೀಗಿದ್ದರೆ ಮಾತ್ರ ಕೊಡವ ಭಾಷೆ ಸಂಸ್ಕøತಿ ಉಳಿಯಲು ಸಾಧ್ಯ ಎಂದು ಹೇಳಿದರು. 

ಈಗಾಗಲೇ ಈ ಕೊಡವ ಎಂ.ಎ.ಸ್ನಾತಕೋತ್ತರ ಕಲಿಯಲು 9 ಜನ ವಿದ್ಯಾರ್ಥಿಗಳು ಆಸಕ್ತಿಯಿಂದ ಬಂದಿರುವ ಸಂತೋಷದ ವಿಷಯ ಎಂದರು.  

ಹಿರಿಯ ಜಾನಪದ ಕಲಾವಿದರಾದ ಬಾಚರಣಿಯಂಡ.ಪಿ.ಅಪ್ಪಣ್ಣ ಅವರು ಮಾತನಾಡಿ ಈಗಾಗಲೇ ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಕೊಡವ ಭಾಷೆಯೂ ಒಂದು ಎಂಬುದು ನಮಗೆಲ್ಲಾ ದುಃಖ ಉಂಟುಮಾಡುವ ವಿಷಯವಾಗಿದೆ. ಈಗ ಸೇರಿರುವ ಆ 9 ಜನ ವಿದ್ಯಾರ್ಥಿಗಳಿಂದ ಇನ್ನು ಆಸಕ್ತಿ ಉಂಟಾಗಿ 900 ವಿದ್ಯಾರ್ಥಿಗಳಾಗಲಿ ಎಂದು ಆಶಿಸಿದರು. 

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಡಾ.ಮೇಜರ್ ರಾಘವ  ಅವರು ಮಾತನಾಡಿ ಕಾಲೇಜಿನಲ್ಲಿ ಮೊದಲ ಬಾರಿಗೆ ಎಂ.ಎ.ಕೊಡವ ಸ್ನಾತಕೋತ್ತರವು ಉದ್ಘಾಟನೆಯಾಗುತ್ತಿರುವುದು ನನಗೆ ತುಂಬಾ ಸಂತೋಷವಾಗಿತ್ತಿದೆ. ಇದಕ್ಕೆ ಸಹಕಾರ ಮಾಡಿದ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ನವರಿಗೆ ಅವರು ವಂದನೆಯನ್ನು ತಿಳಿಸಿದರು. ಭಾಷೆಯಿದ್ದರೆ ಸಂಸ್ಕøತಿ, ಸಂಸ್ಕøತಿ ಇದ್ದರೆ ನಾವು ಎಂದು ಹೇಳಿದರು. 

 ಅಜ್ಜಿನಿಕಂಡ ಮಹೇಶ್ ನಾಚಯ್ಯನವರು “ಕೊಡಗ್‍ರ ರಾಜಕೀಯ ಇತಿಹಾಸತ್‍ರ ಅವಲೋಕನ” ಎಂಬ ವಿಷಯದ ಬ್ಗಗೆ ವಿಚಾರ ಮಂಡಿಸಿದರು. 

ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಎಂ.ಎ.ಕೊಡವ ಸ್ನಾತಕೋತ್ತರ ಮಾತ್ರವಲ್ಲದೆ 1 ನೇ ತರಗತಿ ಮಕ್ಕಳಿಗೆ ಕೊಡವ ಪಾಠ ಪುಸ್ತಕ ಹಾಗೂ ಪಿ.ಜಿ.ಡಿಪ್ಲೊಮಾ, ಪದವಿ ಮಕ್ಕಳಿಗೆ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮವನ್ನು ತಯಾರಿಸಲಾಗಿದೆ. ಕೊಡವ ಭಾಷೆಯನ್ನು 3 ನೇ ಭಾಷೆಯನ್ನಾಗಿಸಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು. 

ಈಗ ಈ ಎಂ.ಎ.ಕೊಡವ ಸ್ನಾತಕೋತ್ತರಕ್ಕೆ ಆಸಕ್ತಿಯಿಂದ ವಿದ್ಯಾರ್ಥಿಗಳು ಸೇರಿರುವುದು ಬಹಳ ಸಂತೋಷದ ವಿಷಯವಾಗಿದೆ. ಇದು ಇಲ್ಲಿಗೆ ನಿಲ್ಲದೆ ಎಲ್ಲರು ಕಲಿಯುವಂತಾಗಬೇಕು ಎಂದು ಹೇಳಿದರು. 

ಕೊಡವ ಭಾಷೆಯಲ್ಲಿ ಎಂ.ಎ.ಕೊಡವ ಸ್ನಾತಕೋತ್ತರವು ಒಂದು ದೊಡ್ಡ ಮೈಲುಗಲ್ಲಾಗಿದೆ. ಈ ಕಾರ್ಯಕ್ರಮದ ಜೊತೆಗೆ ಬೊಳ್ಳೆರ ಸುಮನ್ ಸೀತಮ್ಮನವರು ಬರೆದಿರುವ ‘ನಡೆಕೋರ್ ತೂಡ್” ಹಾಗೂ ಬಚಮ್ಮಂಡ ಗೌರಮ್ಮ ಮಾದಮ್ಮಯ್ಯ ನವರು ಬರೆದಿರುವ ಕೊಡಗ್‍ಲ್ ಮಳೆರ ಅವಾಂತರ” ಎಂಬ ಈ 2 ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 

ಇವರಿಬ್ಬರು ಈ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾಗಿರುವುದು ಸಂತಸದ ವಿಷಯವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ ಅವರು ಪ್ರಾರ್ಥಿಸಿದರು. ಅಕಾಡೆಮಿಯ ಸದಸ್ಯರಾದ ಮಾಣಿಗೆರ ಶಂಬಯ್ಯ ಅವರು ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ತೇಲಪಂಡ ಕವನ್ ಕಾರ್ಯಪ್ಪ ಅವರು ವಂದಿಸಿದರು. ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಅವರು ನಿರೂಪಿಸಿದರು.