Header Ads Widget

ಸರ್ಚ್ ಕೂರ್ಗ್ ಮೀಡಿಯ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡವ ಪುಸ್ತಕ ತಜ್ಞರ ಸಮಿತಿ ರಚನೆ


ಮಡಿಕೇರಿ ಏ.18: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಈಗಾಗಲೇ 1 ನೇ ತರಗತಿಯ ಮಕ್ಕಳಿಗೆ ಕೊಡವ ಪಾಟ ಪಡಿಪು-1 ಪುಸ್ತಕ ತಯಾರಾಗಿ ಹಲವಾರು ಶಾಲೆಗಳಲ್ಲಿ ಭೋದನೆಯಾಗುತ್ತಿದೆ. ಹಾಗೆಯೇ ಇದೀಗ 2 ನೇ ತರಗತಿಯ ಮಕ್ಕಳಿಗೆ ಕೊಡವ ಪಾಠ ಪಡಿಪು-2 ಪುಸ್ತಕವು ತಯಾರಾಗುತ್ತಿದೆ. ಎಪ್ರಿಲ್, 1 ಮತ್ತು ಏಪ್ರಿಲ್, 12 ರಂದು ಸಭೆ ನಡೆಸಿ, ಈ ಪಾಠ ಪಡಿಪು-2 ಪುಸ್ತಕ ತಯಾರಿಸಲಾಗಿದೆ. 

ಈ ಪುಸ್ತಕ ತಯಾರಿಸಲು ನುರಿತ ತಜ್ಞರುಗಳ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ (ಅಧ್ಯಕ್ಷರು), ಬಾಚರಣಿಯಂಡ ರಾಣು ಅಪ್ಪಣ್ಣ(ಸಂಚಾಲಕಿ), ಬಾಚರಣಿಯಂಡ ಪಿ.ಅಪ್ಪಣ್ಣ, ಮುಲ್ಲೇಂಗಡ ಮಧೋಶ್ ಪೂವಯ್ಯ, ಕಾಳಿಮಾಡ ಮೋಟಯ್ಯ, ನಾಗೇಶ್ ಕಾಲೂರು, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ಧರ್ಮಶೀಲ.ಎ.ಎಂ, ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ, ತೇಲಪಂಡ ಕವನ್ ಕಾರ್ಯಪ್ಪ ಹಾಗೂ ಮಾಚಿಮಾಡ ಜಾನಕಿ ಮಾಚಯ್ಯ ಇತರರು ಇದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.