ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ರಮೇಶ್ ಬಾಬು ಅವರು ಮಾತನಾಡಿ ನಬಾರ್ಡ್ 1982 ರಲ್ಲಿ ಪ್ರಾರಂಭವಾಗಿದೆ. ಮುಖ್ಯವಾಗಿ ಗ್ರಾಮೀಣ ಮಟ್ಟದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೃಷಿಕರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕರಾದ ರಮೇಶ್ ಬಾಬು ಅವರು ಹೇಳಿದರು.
ಮಹಿಳೆಯರಿಗೆ ಸ್ವ-ಸಹಾಯ ಸಂಘಗಳ ಮೂಲಕ ಅನೇಕ ರೀತಿಯ ಕೌಶಲ್ಯ ತರಬೇತಿ ಹಮ್ಮಿಕೊಂಡು ಸ್ವ-ಉದ್ಯೋಗ ಪ್ರಾರಂಭಿಸಲು ಬ್ಯಾಂಕ್‍ಗಳ ಮೂಲಕ ಸಾಲದ ಸೌಲಭ್ಯ ಒದಗಿಸಲು ಮುಂದಾಗಿದೆ. ಇದರ ಮೂಲಕ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸದಿಂದ ಜೀವನದಲ್ಲಿ ಬದಲಾವಣೆ ಹೊಂದಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ದಾರಿ ದೀಪವಾಗಿದೆ ಎಂದು ಅವರು ನುಡಿದರು.
ರೈತರ ಅಭಿವೃದ್ಧಿಗೆ ಜಲ ನಮನ ಕಾರ್ಯಕ್ರಮ, ಎಫ್‍ಪಿಒ ಗಳ ರಚನೆಗೆ ಎನ್‍ಜಿಒ ಗಳ ಮೂಲಕ ಸಹಾಯ ಮಾಡುತ್ತಾ ಬರುತ್ತಿದೆ. ನಬಾರ್ಡ್ ಅನೇಕ ಜನಪರ ಅಭಿವೃದ್ಧಿ ಕಾರ್ಯಕ್ರಮವನ್ನು ದೇಶದಲ್ಲಿ ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರು.
ಕೂಡಿಗೆ ಆರ್‍ಎಸ್‍ಇಟಿಐನ ಯೂನಿಯನ್ ನಿರ್ದೇಶಕರಾದ ಕೆ.ಪ್ರಕಾಶ್ ಕುಮಾರ್, ಗೋಣಿಕೊಪ್ಪ ಕಾಫಿ ಬೋರ್ಡ್ ಉಪ ನಿರ್ದೇಶಕರಾದ ಡಾ.ಶ್ರೀದೇವಿ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಸಾಜು ಜಾರ್ಜ್, ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಆರ್.ಎಂ.ಚಿಕ್ಕರಂಗಯ್ಯ, ಒಡಿಪಿ ಸಂಸ್ಥೆ, ಕಾಫಿ ಬೋರ್ಡ್, ಡಿಎಇಎಸ್‍ಐ, ರೈತರು, ಇಲಾಖೆಯ ಅಧಿಕಾರಿಗಳು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network