ರೂ.3000 ಮೈದಾನ ಶುಲ್ಕವನ್ನು ನಿಗದಿ ಮಾಡಲಾಗಿದ್ದು,ಮುಂಗಡವಾಗಿ 1000 ರೂಗಳನ್ನು ಪಾವತಿಸಿ ನೋಂದಾಯಿಸಿಕೊಳ್ಳುವ 32 ತಂಡಗಳಿಗೆ ಮಾತ್ರ ಪಂದ್ಯಾವಳಿ ಭಾಗವಹಿಸಲು ಅವಕಾಶವಿದ್ದು, ಆಸಕ್ತ ತಂಡಗಳು ಏ.18 ರೊಳಗೆ ನೋಂದಾಯಿಸಲು ಆಯೋಜಕರು ಮನವಿ ಮಾಡಿದ್ದಾರೆ.
ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಜರ್ಸಿಯನ್ನು ಧರಿಸಿರಬೇಕು. ಮೈದಾನದಲ್ಲಿ ಯಾವುದೇ ಗೊಂದಲ ಉಂಟಾದಾಗ ತಂಡದ ನಾಯಕರಿಗೆ ಮಾತ್ರ ಚರ್ಚಿಸಲು ಅವಕಾಶವಿದ್ದು, ಅಂತಿಮ ನಿರ್ಧಾರವನ್ನು ತೀರ್ಮಾನಿಸುವ ಅಧಿಕಾರ ಅಂಪೈರ್ ಹಾಗೂ ಆಯೋಜಕರಿಗೆ ಇರುತ್ತದೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ.50,000 ನಗದು, ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 25,000 ಆಕರ್ಷಕ ಟ್ರೋಫಿ ಮತ್ತು ವೈಯಕ್ತಿಕ ಬಹುಮಾನಗಳನ್ನು ಹಾಗೂ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬೆಸ್ಟ್ ಪ್ಲೇಯರ್ ಆಫ್ ದೀ ಟೂರ್ನಮೆಂಟ್, ಬೆಸ್ಟ್ ಡಿಫೆಂಡರ್, ಹೈಯೆಸ್ಟ್ ಸ್ಕೋರರ್ ಪ್ರಸ್ತಿಗಳನ್ನು ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿತಿನ್ : 9840511394, ಪಾಂಡಿಯನ್ : 8151073710, ಸಂಶು: 9900687527, ಷರೀಫ್ : 9482108826 ( ಗೂಗಲ್ ಪೇ : 8151073710, 9482108826 )
ಮೊಬೈಲ್ ಸಂಖ್ಯೆಯನ್ನ ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network