ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಎನ್.ಐ.ಎಂ.ಎ ಸಂಸ್ಥೆ ಭಾರತದಲ್ಲಿ 1948ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಆರೋಗ್ಯ ಸಂಯೋಜಿತ ರೀತಿಯ ಉಪಶಮನಕ್ಕೆ ಹಾಗೂ ವೈದ್ಯರ, ರೋಗಿಗಳ ಕಾಳಜಿಯೊಂದಿಗೆ ಸಹಸ್ರಾರು ಜನಪರ ಕಾರ್ಯಕ್ರಮಗಳನ್ನು ಸುಮಾರು 75 ವರ್ಷಗಳಿಂದ ನೀಡುತ್ತಾ ಬಂದಿದೆ ಎಂದರು.
ಇದೀಗ ಎನ್‍ಐಎಂಎ ಸಂಸ್ಥೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, 2022 ರಿಂದ 23ರ ವರೆಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಪ್ರಥಮ ಹೆಜ್ಜೆಯಾಗಿ ನಿಮಾ ದಿನ ಹಾಗೂ ಜಾಗೃತಿ ತಿಂಗಳು ಎಂಬ ಮುಖ್ಯ ಆಚರಣೆಗಳ ನಿಮಿತ್ತ ಏ.17 ರಂದು ಬೆಳಗ್ಗೆ 7.30ಕ್ಕೆ “ನಿಮಾ ನಡಿಗೆ ಆರೋಗ್ಯದ ಕಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಕೊಡಗಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಜನರಿಗೆ ಆಯುರ್ವೇದ ಹಾಗೂ ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಹಾಗೂ ಜನರಿಗೆ ಅನುಕೂಲಕರವಾದ ಹಲವು ನಿತ್ಯೋಪಯೋಗಿ ಉಪಯುಕ್ತ ಮಾಹಿತಿಗಳನ್ನು ಕೊಡುವುದರ ಮೂಲಕ ಆಧುನಿಕ ವೈದ್ಯಪದ್ಧತಿಗೆ ಸಹಕಾರಿಯಾಗಿ ನಡೆದುಕೊಂಡು ಹೋಗಲಿದೆ ಎಂದು ತಿಳಿಸಿದರು.
ಪ್ರತಿ ಎರಡು ತಿಂಗಳು ಸಾಮಾಜಿಕ ಕಾಳಜಿಯೊಂದಿಗಿನ ಕಾರ್ಯಕ್ರಮಗಳನ್ನು ಸರ್ಕಾರ, ಸಂಘ ಸಂಸ್ಥೆ, ಆಧುನಿಕ ವೈದ್ಯರ ಸಹಕಾರದೊಂದಿಗೆ ಯುವ ಮಾಸ, ಮಾತೃ ಮಾಸ, ವಿಶೇಷ ಚೇತನ ಮಾಸ, ಸಂಧ್ಯಾ ಮಾಸ, ವೈದ್ಯ ಮಾಸ, ಬಾಲ್ಯ ಮಾಸ ಎಂಬ ವಿಭಿನ್ನ ರೀತಿಯ ವಿವಿಧ ಕಾರ್ಯಚಟುವಟಿಕೆಗಳನ್ನು ನಡೆಸಲಾಗುವುದು. ರಾಷ್ಟ್ರೀಯ ಮಟ್ಟದಲ್ಲಿಯೂ ನಡೆಯಲಿದ್ದು, ಸಾಮಾನ್ಯ ನಾಗರೀಕರನ್ನು ತೊಡಗಿಸಿಕೊಳ್ಳಲಾಗುವುದು. ಇದು ರೋಗದಿಂದ ಮುಕ್ತರಾಗಲು ಸಹಕಾರಿಯಾಗಲಿದೆ ಎಂದರು.
ನಿಮಾ ಕೊಡಗು ಸಂಸ್ಥೆ ವತಿಯಿಂದ ಚರಕ ಜಯಂತಿ, ಧನ್ವಂತರಿ ಜಯಂತಿ, ವನಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಬರುವ ಕಾರ್ಯಕ್ರಮಗಳೊಂದಿಗೆ ಮಾಡಲಿದ್ದು, ವೈದ್ಯರಿಗೋಸ್ಕರ ಪ್ರತಿ ತಿಂಗಳು ವೆಬಿನಾರ್ ಹಾಗೂ ಮೂರು ತಿಂಗಳಿಗೊಮ್ಮೆ ನಿರಂತರ ವೈದ್ಯ ಶಿಕ್ಷಣದ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಗಳ ಬಗ್ಗೆ ತಿಳಿಸಲು ಪ್ರಯತ್ನಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ರಾಜಾರಾಮ್, ಪ್ರಮುಖರಾದ ಸಂತೋಷ್ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಕೊಡಗು ಸಭಾಪತಿ ಡಾ.ರವೀಂದ್ರ ರೈ ಉಪಸ್ಥಿತರಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network