Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೇ, 09 ರಂದು ಜಿಲ್ಲಾ ಸಹಕಾರ ಭಾರತಿ ಸದಸ್ಯತ್ವ ಆಂದೋಲನ


ಮಡಿಕೇರಿ ಮೇ.05: ಜಿಲ್ಲಾ ಸಹಕಾರ ಭಾರತಿ ಸದಸ್ಯತ್ವ ಆಂದೋಲನವು ಮೇ, 09 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯಲಿದೆ.

ಸಹಕಾರ ಭಾರತೀಯ ರಾಷ್ಟ್ರೀಯ  ಸಂರಕ್ಷಕ್‍ರಾದ ರಮೇಶ್ ವ್ಯೆದ್ಯ, ರಾಜ್ಯ ಅಧ್ಯಕ್ಷರಾದ ರಾಜಶೇಖರ್ ಶೀಲಾವಂತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ನಾಯಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಮನುಮುತ್ತಪ್ಪ,  ಜಿಲ್ಲಾ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಬಿ.ಡಿ.ಮಂಜುನಾಥ್, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷರಾದ ಬಸಪ್ಪ ಮತ್ತು ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಬೀನಾ ಬೊಳ್ಳಮ್ಮ, ಸಹಕಾರ ಭಾರತಿ ಕೊಡಗು ಜಿಲ್ಲಾ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ನಂಡ ಸಂಪತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಾಳನರವಿ ಸಹಕಾರ ಭಾರತಿ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಪದಾಧಿಕಾರಿಗಳು ಮಹಿಳಾ ಘಟಕ ಪದಾಧಿಕಾರಿಗಳು ಎಲ್ಲಾ ಸದಸ್ಯರು ಇತರರು ಪಾಲ್ಗೊಳ್ಳಲಿದ್ದಾರೆ.