Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ 26 ನೇ ವಾರ್ಷಿಕ ಮಹೋತ್ಸವ


ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ 26 ನೇ ವಾರ್ಷಿಕ ಮಹೋತ್ಸವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ದಿನಾಂಕ 01.05 2022 ರಂದು ಭಾನುವಾರ  ಸಂಘದ ನಿವೇಶನದಲ್ಲಿ ನಡೆಯಿತು. ಸಂಘದ ಅಧ್ಯಕ್ಷತೆಯನ್ನು ಎಂ.ಎಂ.ಪರಮೇಶ್ವರ ಅಧ್ಯಕ್ಷರು ಕೊಡಗು ಜಿಲ್ಲಾ ಮಾರಾಠ ಮರಾಟಿ ಸಮಾಜ ಸೇವಾ ಸಂಘ, ತಾಳತ್ತಮನೆ ಮಡಿಕೇರಿ, ಇವರು ವಹಿಸಿದ್ದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ  ಶ್ರೀಧರ್ ನಾಯ್ಕ್ ಮುಂಡೂವು ಮೂಲೆ, ಸಂಚಾಲಕರು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಹಿತ ಸಂರಕ್ಷಣಾ ಸಮಿತಿ(ರಿ) ಮಂಗಳೂರು ಇವರು ನಡೆಸಿಕೊಟ್ಟರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೋಪಿಕೃಷ್ಣ ಎಂ.ಟಿ ಬದಿಯಡ್ಕ, ಶ್ರೀಮತಿ ಪಾರ್ವತಿ ಗಣೇಶ ಉದ್ಯಮಿ, ರಾಘವೇಂದ್ರ ಎಲೆಕ್ಟ್ರಿಕಲ್ಸ್ ಕುಶಾಲನಗರ, ಶ್ರೀಮತಿ ರತ್ನಮಂಜರಿ ನರಸಿಂಹ, ಮಹಿಳಾ ವೇದಿಕೆ ಅಧ್ಯಕ್ಷರು, ಶ್ರೀ ಗುರುವಪ್ಪ. ಎಂ. ಟಿ ಕಟ್ಟಡ ಸಮಿತಿ ಅಧ್ಯಕ್ಷರು, ಶ್ರೀ ಮೋಹನ್ ಎಂ. ಆರ್ ಯುವ ವೇದಿಕೆ ಅಧ್ಯಕ್ಷರು, ಶ್ರೀ ಅಶೋಕ್ ನಾಯ್ಕ್ ಕೆದಿಲಯ, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಹಿತ ಸಂರಕ್ಷಣಾ ಸಮಿತಿ,ಮಂಗಳೂರು,  ಇವರುಗಳು ಭಾಗವಹಿಸಿದ್ದರು. 

ಸಭಾ ಉದ್ಘಾಟನೆ ಬಳಿಕ, ಶ್ರೀಮತಿ ರೇಖಾ ಸಂಪತ್ ರವರು ಸಭೆಯನ್ನು  ಸ್ವಾಗತಿಸಿದರು. 2021-22ರ  ಸಾಲಿನಲ್ಲಿ ಮೃತಪಟ್ಟ ಮರಾಟಿ ಸಮಾಜ ಬಾಂಧವರಿಗೆ ಸಂತಾಪ ಸೂಚಿಸಲಾಯಿತು, ಬಳಿಕ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಸಭೆಯಿಂದ ಅನುಮೋದನೆ ಗೊಂಡ ಬಳಿಕ, ಮಹಿಳಾ ವೇದಿಕೆ ಅಧ್ಯಕ್ಷರು  ವರದಿಯನ್ನು ಮಂಡಿಸಿದರು, ಬಳಿಕ 2022-23ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಮುಖ್ಯ ಅತಿಥಿಗಳ ಭಾಷಣ ಹಾಗೂ ಅಧ್ಯಕ್ಷರು ಭಾಷಣ ದ ನಂತರ ವಂದನಾರ್ಪಣೆಯ ಬಳಿಕ  ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಸಭೆಯಲ್ಲಿ, ಶ್ರೀ ಬಾಲಕೃಷ್ಣ ನಾಯ್ಕ್ ತಿತಿಮತಿ ಗ್ರಾಮ, ಶ್ರೀಮತಿ ಹರಿಣಾಕ್ಷಿ, ಮಕ್ಕಂದೂರು ಗ್ರಾಮ, ಕುಮಾರಿ ಹೇಮಾವತಿ ಮಕ್ಕಂದೂರು ಗ್ರಾಮ, ಶ್ರೀ ರಮೇಶ್ ಎಂ.ವಿ. ಅವರೆ ಗುಂದ ಗ್ರಾಮ, ಇವರುಗಳು ರೂ 1000/-ವನ್ನು ನೀಡಿ ಅಜೀವ ಸದಸ್ಯತ್ವವನ್ನು ಪಡೆದುಕೊಂಡರು. ಹಾಗೆ ಶ್ರೀಮತಿ ಹೂವಮ್ಮ  2ನೇ ಮೊಣ್ಣಂಗೇರಿ, ಶ್ರೀ ವೆಂಕಪ್ಪ ಎಂ. ಎಸ್. 2ನೇ ಮೊಣ್ಣಂಗೇರಿ ತಲಾ ರೂ 500/- ನ್ನು ಮತ್ತು ಶ್ರೀ ಎಂ ಶ್ರೀಧರ್ ನಾಯ್ಕ್, ಪುತ್ತೂರು, ರೂ 1000/- ವನ್ನು ಮಹಾಸಭೆ ಖರ್ಚಿಗೆ ದೇಣಿಗೆ ನೀಡಿದರು. ಇವರುಗಳಿಗೆ ಸಂಘದ ಆಡಳಿತ ಮಂಡಳಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.