Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೇ 7 ರಿಂದ ಮರಗೋಡಿನಲ್ಲಿ ಗೌಡ ಫುಟ್ಬಾಲ್ ಪಂದ್ಯಾವಳಿ ಆರಂಭ

ಮೇ 7 ರಿಂದ ಮರಗೋಡಿನಲ್ಲಿ ಗೌಡ ಫುಟ್ಬಾಲ್ ಪಂದ್ಯಾವಳಿ ಆರಂಭ


ಮಡಿಕೇರಿ ಏ.6 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮೇ 7 ರಿಂದ 15ರ ವರೆಗೆ ಫುಟ್ಬಾಲ್ ಕಾಲ್ಚೆಂಡು ಪಂದ್ಯಾವಳಿಯು ಮರಗೋಡಿನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ನಿರ್ದೇಶಕ ಚೆರಿಯಮನೆ ಜೆ.ರಕ್ಷವ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಗೋಡು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ವಿಜೇತ ತಂಡಕ್ಕೆ ರೂ.50 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.30 ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ.15 ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ರೂ.10 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದೆಂದರು.

ಅಲ್ಲದೆ ಅತ್ಯುತ್ತಮ ಆಟಗಾರ, ಅತ್ಯುತ್ತಮ ಗೋಲ್ ಕೀಪರ್, ಮಹಿಳಾ ಆಟಗಾರ್ತಿ, ಕಿರಿಯ ಆಟಗಾರ, ಪ್ಲೆಯರ್ ಹಾಗೂ ಅತ್ಯುತ್ತಮ ಗೋಲ್ ಆಪ್ ದಿ ಟೂರ್ನಮೆಂಟ್ ಸೇರಿದಂತೆ ವಿವಿಧ ವೈಯಕ್ತಿಕ ಪ್ರಶಸ್ತಿಯನ್ನು ನೀಡಲಾಗುವುದು.

ಪಂದ್ಯಾವಳಿಯು 7+2 ಆಟಗಾರರನ್ನು ಹೊಂದಿದ್ದು, ಸಮವಸ್ತ್ರ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ 8762549217, 9483253769, 9611502270 ಸಂಪರ್ಕಿಸಬಹುದಾಗಿದೆ.

ಅಕಾಡೆಮಿ ಕಾರ್ಯದರ್ಶಿ ಇಟ್ಟಣಿಕೆ ನವನಿತ್ ಮಾತನಾಡಿ, ಕಳೆದ ಎರಡು ವರ್ಷಗಳ ನಂತರ ಗೌಡ ಜನಾಂಗವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಫುಟ್ಬಾಲ್ ಕಾಲ್ಚೆಂಡು ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಸುಮಾರು ನೂರು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಿ.ಆರ್.ದುಷ್ಯಂತ್, ಖಜಾಂಚಿ ಬಿ.ಟಿ.ಸುಜಯ್, ನಿರ್ದೇಶಕ ಪಿ.ಎಲ್.ಹೃಷಿಕೇಶ್ ಉಪಸ್ಥಿತರಿದ್ದರು.