ರೈತರಿಗೆ ತಮ್ಮ ಕೃಷಿ ಚಟುವಟಿಕೆಯನ್ನು ಸಮಯೋಚಿತವಾಗಿ ರೂಪಿಸಲು ಮತ್ತು ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ನಷ್ಟವನ್ನುತಗ್ಗಿಸುವುದಕ್ಕಾಗಿ ಈ ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದೆ. ರೈತರು 92433 45433 ಗೆ ಕರೆ ಮಾಡಬೇಕು. ರಾಜ್ಯದ ಯಾವುದೇ ಗ್ರಾಮದ ರೈತರು ತಾವಿದ್ದ ಸ್ಥಳದಿಂದಲೇ ಊ ಉಚಿತ ಸಹಾಯವಾಣಿಗೆ ಕರೆ ಮಾಡಿ ಮಳೆ ಯಾವಾಗ ಬರುತ್ತದೆ, ಗಾಳಿಯ ವೇಗ ಎಷ್ಟಿದೆ? ಮಳೆ ಎಷ್ಟು ಪ್ರಮಾಣದ ಮಳೆ ಬರುತ್ತದೆ? ಉಷ್ಣಾಂಶ ಎಷ್ಟಿದೆ ಎಂಬ ಮಾಹಿತಿ ಪಡೆಯಬಹುದು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಮಳೆ ಮಾಪನ ಯಂತ್ರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಹವಾಮಾನ ಮಾಪನ ಯಂತ್ರ ಅಳವಡಿಸಲಾದಗಿದೆ. ಈ ಯಂತ್ರಗಳ ಸಹಾಯದಿಂದ ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿಯು ಕೇಂದ್ರ ಕಚೇರಿಯಲ್ಲಿರುವ ಸರ್ವರ್ ಗೆ ಸಿಗುತ್ತದೆ. ಇದನ್ನು ಆಧರಿಸಿ ಕೇಂದ್ರದ ಸಿಬ್ಬಂದಿಗಳು ರೈತರಿಗೆ ಮಾಹಿತಿ ನೀಡುತ್ತಾರೆ.
ರೈತರು ಈ ಮಾಹಿತಿ ಪಡೆಯಲು ಯಾವುದೇ ಶುಲ್ಕ ಪಾವತಿಸುವ ಆಗತ್ಯವಿಲ್ಲ. ರೈತರು ತಮ್ಮ ಹೆಸರು ನೋಂದಣಿ ಮಾಡಿಸುವ ಅಗತ್ಯವೂ ಇಲ್ಲ, ಹೀಗೆ ರೈತರು ಯಾವುದೇ ಸಮಯದಲ್ಲಿ ಬೇಕಾದರೂ ತಾವಿದ್ದ ಸ್ಥಳದಿಂದ ವರುಣಮಿತ್ರ ಸಹಾಯವಾಣಿಗೆ ಒಂದು ಕರೆ ಮಾಡಿದರೆ ಸಾಕು ಕ್ಷಣಮಾತ್ರದಲ್ಲಿ ರೈತರು ಹವಾಮಾನದ ಮಾಹಿತಿ ಪಡೆಯಬಹುದು.
ಬೇಸಿಗೆ ಕಾಲದಲ್ಲಿ ಯಾವಾಗ ಮಳೆ ಬರುತ್ತೋ ಗೊತ್ತಾಗುವುದಿಲ್ಲ, ಬಿಸಿಲಿನ ಝಳದಲ್ಲಿ ಏಕಾಏಕಿ ಕಪ್ಪಾದ ಮೋಡ ಕವಿದು ಮಳೆ ಸುರಿಯಲಾರಂಭಿಸುತ್ತದೆ. ಈ ಅಕಾಲಿಕ ಮಳೆಯಿಂದಾಗಿ ವಿಶೇಷವಾಗಿ ರೈತರಿಗೆ ಅಪಾರ ಹಾನಿಯಾಗುತ್ತಿರುತ್ತದೆ.
ರೈತರಿಗೆ ಆಗುವ ಹಾನಿಯನ್ನು ತಗ್ಗಿಸುವುದಕ್ಕಾಗಿ ಆರಂಭಿಸಲಾದ ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಿ ರೈತರು ಮಾಹಿತಿ ಪಡೆಯಬಹುದು.
ವರುಣಮಿತ್ರ ಉಚಿತ ಸಹಾಯವಾಣಿಯು ದಿನದ 24*7 ಕೆಲಸ ಮಾಡುತ್ತದೆ. ದಿನದ 24 ಗಂಟೆಗಳ ಕಾಲ ಈ ಉಚಿತ ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ. ಮಳೆ, ಹವಾಮಾನ, ಗಾಳಿಯ ವೇಗ, ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಸೇರಿದಂತೆ ಇತರ ಮಾಹಿತಿ ಪಡೆಯಬಹುದು.
ಹವಾಮಾನ ಮುನ್ಸೂಚನೆ ನೀಡವ ಈಗ ಬಹಳಷ್ಟು ಆ್ಯಪ್ ಗಳು ಬಂದಿವೆ. ಆದರೆ ರೈತರು ಹವಾಮಾನ ಮುನ್ಸೂಚನೆ ನೀಡುವ ಆ್ಯಪ್ಗಳನ್ನು ತಮ್ಮ ಮೊಬೈಲ್ ಗಳಲ್ಲಿ ಇನ್ಸ್ಸ್ಟಾಲ್ ಮಾಡಿಕೊಂಡಿರುವುದಿಲ್ಲ. ಇನ್ನೂ ಕೆಲವು ರೈತರಿಗೆ ಆ್ಯಪ್ ಸಹಾಯದಿಂದ ಮಾಹಿತಿ ಪಡೆಯಲು ತೊಂದರೆಯಾಗುತ್ತಿರುತ್ತದೆ. ಹಾಗಾಗಿ ಸಾಮಾನ್ಯ ರೈತರಿಗೆ ಸುಲಭವಾಗಿ ಮಳೆಯ ಮಾಹಿತಿ ನೀಡಲು ಉಚಿತ ವರುಣಮಿತ್ರ ಎಂಬ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ರಾಜ್ಯದ ರೈತರು ಈ ಉಚಿತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ವರುಣಮಿತ್ರ ಸಹಾಯವಾಣಿಗೆ ಬಂದ ಕರೆಗಳನ್ನು ಸ್ವೀಕರಿಸಿ ಸಿಬ್ಬಂದಿಗಳು ರೈತರಿಗೆ ಬೇಕಾಗುವ ಮಾಹಿತಿಗಳನ್ನು ನೀಡುತ್ತಾರೆ.
ಹವಾಮಾನ ಆಧರಿಸಿ ಕೃಷಿ ಚಟುವಟಿಕೆ ಕುರಿತು ರೈತರು ಪ್ರತಿನಿತ್ಯ ಹವಾಮಾನದ ಮಾಹಿತಿ ಪಡೆಯಬಹುದು. ರೈತರು ತಮ್ಮ ಹೆಸರು ನೋಂದಾಯಿಸಿಕೊಂಡ ನಂತರ ಅವರಿಗೆಪ್ರತಿ ನಿತ್ಯ ಎಸ್ಎಂಎಸ್ ಕಳಿಸಲಾಗುವುದು. ಪ್ರತಿನಿತ್ಯ ಎರಡು ಸಲ ಅಂದರೆ ಬೆಳಗ್ಗೆಮತ್ತು ಸಾಯಂಕಾಲ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network