Header Ads Widget

ಸರ್ಚ್ ಕೂರ್ಗ್ ಮೀಡಿಯ

ನಿಧಿ ಹಾಗೂ ದೀಪ ಸ್ವಸಹಾಯ ಸಂಘಗಳ ವಾರ್ಷಿಕ ಮಹಾಸಭೆ


ನಿಧಿ ಹಾಗೂ ದೀಪ ಸ್ವಸಹಾಯ ಸಂಘಗಳ  ವಾರ್ಷಿಕ   ಮಹಾಸಭೆ

ಮಡಿಕೇರಿ ನಗರದ ರಾಘವೇಂದ್ರ ದೇವಾಲಯದ ಸಮೀಪವಿರುವ ನಿಧಿ ಹಾಗೂ ದೀಪ ಸ್ವಸಹಾಯ ಸಂಘಗಳ ವಾರ್ಷಿಕ ಮಹಾಸಭೆಯನ್ನು ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಸುಬ್ಬಮ್ಮ ಟೀಚರ್‌ ಸ್ಥಾಪಿಸಿದ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ಸಭಾಂಗಣದಲ್ಲಿ ಜಂಟಿಯಾಗಿ ನಡೆಸಲಾಯಿತು. ಸಾಮೂಹಿಕ ಪ್ರಾಥರ್ನೆಯೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಆಶಾ ನಟರಾಜ್‌ರವರು ಸ್ವಸಹಾಯ ಸಂಘಗಳು ಕುಟುಂಬದ ಆರ್ಥಿಕ ಭದ್ರತೆಗೆ ಸಹಕಾರಿಯಾಗಿದೆ ಎಂದರು. ನಂತರ ಮಾತನಾಡಿದ ಇವರು ಕುಟುಂಬವನ್ನು ಪಾಲಿಸಿ ಸಮಾಜವನ್ನು ಕಟ್ಟುತ್ತಾ ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯವು ನಮ್ಮ ಭಾರತತೀಯ ಕುಟುಂಬದ ಮಹಿಳೆಯ ಪಾತ್ರ ಮಹತ್ವದಾಗಿದೆ ಎಂದರು.

ಹಿರಿಯ ಸದಸ್ಯರಾದ ಲಿಸಿಅಮ್ಮಣಿ ಅವರು ಸದಸ್ಯರಿಗೆ ಮಾರ್ಗದರ್ಶನ ಮಾಡುವ ಮೂಲಕ ಸಮಾರಂಭದಲ್ಲಿ ಪ್ರತಿನಿಧಿಗಳಾದ ತಾಹೀರ, ಜಯಾಪಾಲಾಕ್ಷ, ಸಂಘಗಳ ಸದಸ್ಯರುಗಳು ಹಾಜರಿದ್ದು,   ವಂದನಾರ್ಪಣೆಯೊಂದಿಗೆ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು.