Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಲಿಕಾ ಚೇತರಿಕೆ ಹೆಸರಿನಲ್ಲಿ ಶಾಲಾ ಆರಂಭ


ಶಾಲೆ ಆರಂಭ; ನಗು ನಗುತಾ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು

ಮಡಿಕೇರಿ: ಪ್ರಸಕ್ತ ಸಾಲಿನ ಶಾಲೆ ತರಗತಿಯು ಸೋಮವಾರದಿಂದ ಆರಂಭವಾಗಿದೆ. ಕಲಿಕಾ ಚೇತರಿಕೆ ಹೆಸರಿನಲ್ಲಿ ಶಾಲಾ ಆರಂಭಕ್ಕೆ ಚಾಲನೆ ದೊರೆತಿದೆ. ನಗರದ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಸಿಹಿ, ಬಾಳೆಹಣ್ಣು ಹಂಚುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಯಿತು.    

     ಪ್ರಥಮ ದಿನವಾದ ಸೋಮವಾರ ಸರ್ಕಾರಿ ಪ್ರಾಥಮಿಕ ಶಾಲೆಗೆ 100 ವಿದ್ಯಾರ್ಥಿಗಳು ಹಾಜರಾಗಿದ್ದರು. ಜೊತೆಗೆ 25 ವಿದ್ಯಾರ್ಥಿಗಳು ಹೊಸದಾಗಿ ಸರ್ಕಾರಿ ಶಾಲೆಗೆ ಪ್ರವೇಶ ಪಡೆದರು. 

     ಮೊದಲ ದಿನವಾದ ಮೇ, 16 ರಂದು ಮಕ್ಕಳಿಗೆ ಪಾಯಸದೊಂದಿಗೆ ಬಿಸಿ ಊಟಕ್ಕೂ ಚಾಲನೆ ದೊರೆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ ಅವರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಿಹಿ ಹಾಗೂ ಬಾಳೆ ಹಣ್ಣು ವಿತರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. 

     ಪ್ರತೀ ದಿನ ಆಟ-ಪಾಠ ಜೊತೆಗೆ ಕಲಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮಳೆಬಿಲ್ಲು ಕಾರ್ಯಕ್ರಮವೂ ಚಾಲನೆಗೊಂಡಿತು. ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಕೆ.ಸುಶೀಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಜಗದೀಶ್, ರವಿ, ಸಹ ಶಿಕ್ಷಕರಾದ ಜಯಮ್ಮ, ಸಂದೇಶ್, ತೇಜಸ್ವಿನಿ, ಮಂಜುಳ, ಮೋಹನ್ ಕುಮಾರಿ, ಕವಿತಾ, ಅತಿಥಿ ಶಿಕ್ಷಕರು, ಪೋಷಕರು ಇತರರು ಇದ್ದರು.