Header Ads Widget

ಸರ್ಚ್ ಕೂರ್ಗ್ ಮೀಡಿಯ

ನ್ಯಾಯಾದೀಶ ಗಿರಿ ಗೌಡ ರವರಿಗೆ ಪೋನ್ನಂಪೇಟೆ ವಕೀಲರ ಸಂಘದಿಂದ ಬೀಳ್ಕೊಡುಗೆ ಸಮಾರಂಭ


ನ್ಯಾಯಾದೀಶ ಗಿರಿ ಗೌಡ ರವರಿಗೆ ಪೋನ್ನಂಪೇಟೆ  ವಕೀಲರ  ಸಂಘದಿಂದ  ಬೀಳ್ಕೊಡುಗೆ ಸಮಾರಂಭ

ಪೋನ್ನಂಪೇಟೆ ನ್ಯಾಯಾಲದಿಂದ  ವರ್ಗಾವಣೆಯಾದ  ನ್ಯಾಯಾದೀಶರಾದ  ಗಿರಿ ಗೌಡ  ರವರಿಗೆ ಪೋನ್ನಂಪೇಟೆ  ವಕೀಲರ  ಸಂಘದಿಂದ  ಬೀಳ್ಕೊಡುಗೆ ಸಮಾರಂಭ  ನಡೆಯಿತು.  

ವಕೀಲರಾದ  ಎಸ್ ಡಿ ಕಾವೇರಪ್ಪ, ಎಂ ಟಿ ಕಾರ್ಯಪ್ಪ, ಜಿ ಎಸ್ ಜೇವನ್, ಎ ಪಿ ಪಿ  ಅಮೃತ  ಸೋಮಯ್ಯರವರು  ನ್ಯಾಯಾದೀಶರ  ಸೇವೆ ಬಗ್ಗೆ ಮಾತನಾಡಿದರು. ಕೊಡಗಿನ   ನ್ಯಾಯಾದೀಶರಾಗಿ  ಕೆಲಸ  ಮಾಡುವ  ಭಾಗ್ಯ ಸಿಕ್ಕಿರುವ ಬಗ್ಗೆ ಮತ್ತು ಇಲ್ಲಿನ ವಕೀಲರ  ಸಹಕಾರದ  ಬಗ್ಗೆ ನ್ಯಾಯಾದೀಶರು  ಪ್ರಶಂಷೆ  ವ್ಯಕ್ತ ಪಡಿಸಿದರು. 

ಸಮಾರಂಭದಲ್ಲಿ ಸಂಘದ  ಅಧ್ಯಕ್ಷರಾದ  ಕೆ ಡಿ ಮುತ್ತಪ್ಪ  ಕಾರ್ಯದರ್ಶಿ  ಮೋನಿ ಪೊನ್ನಪ್ಪ, ಪದಾಧಿಕಾರಿಗಳು  ಸಂಘದ  ಸದಸ್ಯರು  ಇದ್ದರು. ಕಾರ್ಯಕ್ರಮ ವನ್ನು ಎಂ ಸಿ ಪೊವಣ್ಣ  ನಿರೂಪಿಸಿದರು.