ಯುವ ನಿರ್ದೇಶಕ ಆರ್ಯನ್ ಮುದ್ದಪ್ಪ ನಿರ್ದೇಶನದಲ್ಲಿ ಕೊಡಗಿನ ಸಂಸ್ಕೃತಿ,ಆಚಾರ-ವಿಚಾರ, ನೆಲ-ಜಲಗಳ ಅಭಿಮಾನದ ಬಗ್ಗೆ ಮತ್ತು ಕೊಡಗಿನ ಮೂಲ ನಿವಾಸಿಗಳಾದ ಕೊಡವರು ಈ ನೆಲದಲ್ಲಿ ಸಂಕಷ್ಟ ಬದುಕನ್ನ ಎದುರು ಹಾಕಿಕೊಂಡಿರುವ ಸನ್ನಿವೇಶಗಳನ್ನು ಬಹು ಅಚ್ಚುಕಟ್ಟಾಗಿ ಸಿನಿಮಾದ ಚಿತ್ರೀಕರಣದಲ್ಲಿ ಪೋಣಿಸಲಾಗಿದೆ.
ಕೊಡವ ಸಮುದಾಯ ಇಂದು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮೂಲ ಕಾರಣವನ ಹುಡುಕುವ ಪ್ರಯತ್ನದಲ್ಲಿ ಮತ್ತು ಸಂಸ್ಕೃತಿಯ ಉಳಿವಿಗೆ ಬೇಕಾದ ನಡೆಯನ್ನ ಅನುಸರಿಸುವ ಸೂಕ್ಷ್ಮತನವನ್ನು ತಿಳಿಸಿ ಜಾಗೃತಿ ಮೂಡಿಸುವಲ್ಲಿ ಸಿನಿಮಾ ಚಿತ್ರೀಕರಣಗೊಂಡು ಗಮನಸೆಳೆದಿದೆ.
ಸಿನಿಮಾದ ಪ್ರತಿ ಕಲಾವಿದರಿಗೆ ನೀಡಿದ ಪ್ರತಿಯೊಂದು ಪಾತ್ರವನ್ನು ಶಿಸ್ತುಬದ್ಧವಾಗಿ ನಿಭಾಯಿಸಿ ತಮ್ಮ ಪಾತ್ರಗಳಿಗೆ ಮೆರುಗಿನ ಶಕ್ತಿಯನ್ನು ತುಂಬಿ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡವರು ಮತ್ತು ಕೊಡಗಿನ ನೆಲೆಸಿರುವ ಇತರ ಸಮುದಾಯದವರು ಸಹ ಈ ನೆಲದ ಮತ್ತು ಮೂಲ ಸಮುದಾಯದವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಮೂಲಕ ಜಾಗೃತರಾಗುವುದು ಜತೆಗೆ ನಮ್ಮ ಸಂಸ್ಕೃತಿಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಪರಿಯನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ.
"ಭೀರ್ಯ"ತಪ್ಪದೇ ಕುಟುಂಬ ಸಮೇತ ಒಂದು ಗಂಟೆ 47 ನಿಮಿಷಗಳ ಕಾಲ ಕುಳಿತು ನೋಡಬಹುದಾದ, ಹಾಗೂ ನೋಡಲೇಬೇಕಾದ ಉತ್ತಮ ಕೊಡವ ಸಿನಿಮಾ.
✍️....ಜಗದೀಶ್ ಜೋಡುಬೀಟಿ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network