Header Ads Widget

Responsive Advertisement

ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ ನಡೆದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ


ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ ನಡೆದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಮಾನವೀಯತೆಗಾಗಿ ಯೋಗ ಸಂದೇಶದೊಂದಿಗೆ ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ಇಂದು ನಡೆಯಿತು.

ಬೆಳ್ಳಿಗ್ಗೆ 8 ಗಂಟೆಗೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಟಿ. ಜಯಣ್ಣರವರು ಉದ್ಘಾಟಿಸಿ ಮಾತನಾಡಿ ವಿಶ್ವದಾದ್ಯಂತ ನಡೆಯುತ್ತಿರುವ ಯೋಗ ದಿನಾಚರಣೆಯು ವಿಶೇಷವಾಗಿ ಭಾರತದ ಕೊಡುಗೆಯಾದ ಯೋಗ ನಮ್ಮ ದಿನನಿತ್ಯದ ಜೀವನದಲ್ಲಿ ತೊಡಗಿಸಿಕೊಂಡರೆ ನಮ್ಮ ಆರೋಗ್ಯ, ಆಯುಸ್ಸು ವೃದ್ದಿಯಾಗುತ್ತದೆ ಎಂದರು. ಬಳಿಕ ಮಾತನಾಡಿದ ಇವರು ಯುವ ಜನತೆ ಯೋಗದ ಕಡೆ ಹೆಚ್ಚು ಗಮನ ಹರಿಸಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು. ಈ ಯೋಗವು ಇಂದಿನ ಯೋಗ ದಿನಾಚರಣೆಗೆ ಮಾತ್ರ ಸೀಮೀತವಾಗದೆ ಪ್ರತಿ ನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ನುಡಿದರು. ಹಾಗೆ ಪ್ರತಿ ಗ್ರಾಮಗ್ರಾಮಗಳಲ್ಲಿ ಯೋಗದ ಮಹತ್ವದ ಬಗ್ಗೆ ಜಾಗೃತಿ ಮೂಡಲು ಸಹಕಾರಿಯಾಗುವಂತೆ ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಯೋಜಿಲಾಗಿದೆ ಎಂದು ತಿಳಿಸಿದರು.


ಪಂಚಾಯಿತಿಯ ಹಿರಿಯ ಸದಸ್ಯರಾದ ಶ್ರೀ ಶಂಭಯ್ಯನವರು, ನೆರೆದಿದ್ದ ಶಾಲ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಯೋಗ ಮಾಡುವುದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿ ಹೇಳಿದರು. ಅಲ್ಲದೇ ಯೋಗದಿಂದ ಆಗುವ ಲಾಭದ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕ್ಲೋಸ್‌ ಬರ್ನ್‌ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಸುಜಾತ ಭಾಗವಹಿಸಿದ್ದರು. ಇವರೊಂದಿಗೆ ಪಂಚಾಯಿತಿಯ ಪಿ.ಡಿ.ಓ, ಪಂಚಾಯಿತಿ ಸದಸ್ಯರುಗಳು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

ಬೆಳ್ಳಿಗೆ 8ಗಂಟೆಯಿಂದ 9 ಗಂಟೆಯವರಗೆ ಯೋಗಪಟು ರವಿಕಾಂತ್‌ರವರೊಂದಿಗೆ ನೆರೆದಿದ್ದ ಸರ್ವರೂ ಯೋಗಾಭ್ಯಾಸ ನಡೆಸಿದರು. ನಂತರ ಲಘು ಉಪಹಾರ ಹಾಗೂ ಕಾಫಿ ಸೇವಿಸುವುದರೊಂದಿಗೆ ಕಾರ್ಯಕ್ರಮವು ಸಮಾರೋಪಗೊಂಡಿತ್ತು.