ಆರ್‍ಟಿಒ ಕಚೇರಿ ಬಳಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಂಚಿಕೆ; ಡಾ.ಬಿ.ಸಿ.ಸತೀಶ
ಮಡಿಕೇರಿ ಜೂ.01: ಕೊಡಗು ಜಿಲ್ಲೆಯಲ್ಲಿ 2018 ರ ಆಗಸ್ಟ್‍ನಲ್ಲಿ ಸುರಿದ ಭಾರಿ ಮಳೆಯಿಂದ ನೆಲೆ ಕಳೆದುಕೊಂಡು ಮನೆ ಹಸ್ತಾಂತರಕ್ಕೆ ಬಾಕಿ ಇದ್ದ 75 ಕುಟುಂಬಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ನಿರ್ಮಿಸಲಾಗಿರುವ ಮನೆಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಚೀಟಿ/ಲಾಟರಿ ತೆಗೆಯುವ ಮೂಲಕ ಬುಧವಾರ ಮನೆ ಹಂಚಿಕೆ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ರಾಜೀವ್ ಗಾಂಧಿ ವಸತಿ ನಿಗಮದ ಎಂಜಿನಿಯರ್ ಶ್ರೀನಿವಾಸ್ ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಚೀಟಿ ತೆಗೆಯುವ ಮೂಲಕ ಮನೆ ಹಂಚಿಕೆ ಮಾಡಲಾಯಿತು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿದ್ದ ಕುಟುಂಬಗಳಿಗೆ ಮೊದಲ ಹಂತದಲ್ಲಿ ಕರ್ಣಂಗೇರಿಯಲ್ಲಿ 35 ಮನೆಗಳು, ಮಾದಾಪುರ ಬಳಿಯ ಜಂಬೂರಿನಲ್ಲಿ 383, ಮದೆನಾಡು ಬಳಿ 80 ಮನೆಗಳು, ಹಾಗೆಯೇ ಹಾಕತ್ತೂರು ಬಳಿಯ ಬಿಳಿಗೇರಿಯಲ್ಲಿ 22, ಮತ್ತು ಗಾಳಿಬೀಡು ಬಳಿ 140 ಮನೆಗಳು ಸೇರಿದಂತೆ ಒಟ್ಟು ಮೂರು ಹಂತದಲ್ಲಿ 660 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ಉಳಿದಂತೆ ಕೆ.ನಿಡುಗಣೆ ಗ್ರಾ.ಪಂ.ವ್ಯಾಪ್ತಿಯ ಆರ್‍ಟಿಒ ಕಚೇರಿ ಬಳಿ 75 ಮನೆಗಳನ್ನು ನಿರ್ಮಿಸಲಾಗಿದ್ದು, ಆ ನಿಟ್ಟಿನಲ್ಲಿ ಬುಧವಾರ ಮನೆ ಹಂಚಿಕೆ ಪ್ರಕ್ರಿಯೆ ಮಾಡಲಾಗಿದೆ. ಉಳಿದಂತೆ ಈ ತಿಂಗಳ ಅಂತ್ಯದೊಳಗೆ ಸಂತ್ರಸ್ತರಿಗೆ ಮನೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಮನೆ ಹಂಚಿಕೆಯ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸೂಚನಾ ಫಲಕದಲ್ಲಿ ಅಥವಾ ವೆಬ್‍ಸೈಟ್ http://www.kodagu.nic.in ಪ್ರಕಟಿಸಲಾಗಿದ್ದು, ಸಂತ್ರಸ್ತ ಕುಟುಂಬದವರು ಯಾವ ನಂಬರಿನ ಮನೆ ಯಾವ ಕುಟುಂಬಕ್ಕೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸಂತ್ರಸ್ತರಿಗೆ ಮನೆ ಸಂಖ್ಯೆ ನಿಗಧಿಯಾಗಿರುವುದರಿಂದ ವಿದ್ಯುತ್ ಸಂಪರ್ಕವನ್ನು ಪಡೆಯಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಪ್ರತಿ ಮತ್ತು ಕುಟುಂಬದವರ ಭಾವಚಿತ್ರವನ್ನು ಸೆಸ್ಕ್ ಕಚೇರಿಗೆ ನೀಡಲು ಮುಂದಾಗಬೇಕು. ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಇನ್ಫೋಸಿಸ್ ಸಂಸ್ಥೆಯಿಂದ ಜಂಬೂರಿನಲ್ಲಿ ಮನೆ ನಿರ್ಮಿಸಲಾಗುತ್ತಿದ್ದು, ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಬಾಕಿ ಇವೆ ಎಂದು ಡಾ.ಬಿ.ಸಿ.ಸತೀಶ ಅವರು ಹೇಳಿದರು.
ರಾಜೀವ್ ಗಾಂಧಿ ವಸತಿ ನಿಗಮದ ಎಂಜಿನಿಯರ್ ಶ್ರೀನಿವಾಸ್ ಅವರು ಮನೆ ಹಸ್ತಾಂತರ ಸಂದರ್ಭದಲ್ಲಿ ಮನೆ ಹಕ್ಕುಪತ್ರ ವಿತರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಸಂತ್ರಸ್ತ ಫಲಾನುಭವಿಗಳ ಹೆಸರು ಮತ್ತು ಲಾಟರಿ ಮೂಲಕ ಹಂಚಿಕೆ ಮಾಡಲಾದ ಮನೆ ಸಂಖ್ಯೆ:-ಪಿ.ಎಂ.ಅಣ್ಣು(38), ಶೇಖ್‍ರಂಜಾನ್(44), ಕೆ.ಸಿ.ದಾಮೋದರ(04), ಪ್ರದೀಪ್ ಕೆ.ಪಿ.(54), ಚಂಡೀರ ಪೆÇನ್ನಪ್ಪ ಕಾಳಪ್ಪ(18), ಪಾಣತ್ತಲೆ ಜನಾರ್ಧನ(70), ಕುಕ್ಕೇರ ವಸಂತ(63), ಎಚ್.ಎಸ್.ಗಣೇಶ್(26), ಸೀತಮ್ಮ ಬಿ.ಎಸ್(21), ಟಿ..ಎಂ.ಅಪ್ಪು ಆಚಾರಿ (46), ಆನಂದ ಪಿ.ಜಿ.(56), ಅಕ್ಕಮ್ಮ ಪಿ.ಜಿ(66), ಸೋಮೇಟ್ಟಿ ಗಿರೀಶ್(60), ಪಿ.ಕೆ.ಪುಷ್ಪ(39), ಟಿ.ಕೆ.ಗುಲಾಬಿ(75), ಪಿ.ಎ.ಜಯಲಕ್ಷ್ಮಿ(30), ಸೂರಪ್ಪ(03), ಸಿ.ಟಿ.ಕುಸುಮ(19), ಎಂ.ಕೆ.ಶಿವಯ್ಯ(05), ಎಂ.ಜಯರಾಮ್(57), ಕೆ.ಎಸ್.ಉಮಶಂಕರ್(43), ಹರೀಶ್ ಐ.ಎಸ್.(74), ಟಿ.ಎಸ್.ಚಂದ್ರಶೇಖರ್(36), ಎ.ಐ.ಬಾಬು(31), ಎ.ಎಸ್.ಪ್ರಭಾಕರ ಭಟ್(51), ಎಂ.ಜಿ.ಯೂಸೂಪ್(07), ರೇಣುಕ ಎನ್.ಸಿ.(17), ಪಾರ್ವತಿ ಕೆ.(49), ಆ್ಯನಿ(24), ನಾಗಮ್ಮ ಪಿ.(28), ಹಿಲ್ಡಾಜೇಕ್ಸ್(58), ಕವಿತಾ ಪಿ.ಬಿ(22), ಬಿ.ಎಸ್.ಯಶೋಧ(23), ಫೆಲಿಕ್ಸ್ ಜೇಕ್ಸ್(02), ಟಿ.ಎನ್.ಸುಧಾಕರ(08), ಎಸ್.ಮೀನಾಕ್ಷಿ(68), ಸುಂದರಿ ಬಿ.ಜೆ.(52), ಸಾವಿತ್ರಿ(06), ಜೆ.ಬಿ.ಸರಸ್ವತಿ(55), ಹೆಲನ್ ಕ್ರಾಸ್ತ(11), ವಿನ್ಸೆಂಟ್ ಕ್ರಾಸ್ತ(64), ಕೆ.ಎಂ.ಶಿವಶೇಖರ್(29), ಶಂಕರ ಕೆ.(59), ಎಂ.ಎಸ್.ಕಾವೇರಪ್ಪ(34), ಫಾತೀಮಾ(35), ಪಿ.ಪಿ.ಜೇಮ್ಸ್(50), ಖಾಸಿಂ ಬೇಗ್(32), ರಾಮಕೃಷ್ಣಚಾರಿ(27), ಧನು(15), ಗಂಗಮ್ಮ ಎಚ್.ಪಿ.(45), ಶಶಿಕಲ(71), ಟಿ.ಎನ್.ವಿಜಯ(67), ವಿಶ್ವನಾಥ ಕೆ.ಎಂ.(16), ಎಚ್.ಎಂ.ಸುಧಾಕರ(41), ಡಿ.ವಿ.ಪ್ರೇಮಲೀಲಾ(01), ಟಿ.ಎಲ್.ಹರೀಶ್(09), ಎಂ.ಯು.ಹೊನ್ನಪ್ಪ(42), ಎಂ.ಸಿ.ಶೇಖರ(14), ಪಿ.ಸಿ.ನಾಗೇಶ್(13), ಕೆ.ಟಿ.ಸುಶೀಲ(12), ಎ.ಪಿ.ಘನಾವತಿ(40), ಟಿ.ಎಸ್.ರವಿ(10), ಶ್ರೀನಿವಾಸ್ ಎಚ್.ಟಿ.(33), ಬಿ.ಎಂ.ಸತೀಶ್(37), ವೈ.ಎಸ್.ಚಂದ್ರಹಾಸ(69), ಅಪ್ಪಣ್ಣ ಎಚ್.ಸಿ.(65), ಎಚ್.ಸಿ.ಪದ್ಮಯ್ಯ(53), ಪಿ.ಎಸ್.ಮುತ್ತಮ್ಮ(72), ರಾಜೇಶ್ ಎಚ್.ಎಂ.(20), ರಮೇಶ್ ಎಂ.ಎಂ.(73), ಪೆÇನ್ನಮ್ಮ ಎಚ್.ಎಂ.(62), ಬಿ.ಬಿ.ನಳಿನಿ(61), ಟಿ.ಎಲ್.ಮುತ್ತಪ್ಪ(47), ಸವಿತ ಬಾಯಿ(48) ಮತ್ತು ಪಿ.ಬಾಗಿ(25).
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network