Header Ads Widget

Responsive Advertisement

ಮರಂದೋಡ ಗ್ರಾಮದಲ್ಲಿ ತೋಟಕ್ಕೆ ದಾಳಿಯಿಟ್ಟ ಕಾಡಾನೆಗಳು


ಮರಂದೋಡ ಗ್ರಾಮದಲ್ಲಿ ತೋಟಕ್ಕೆ ದಾಳಿಯಿಟ್ಟ ಕಾಡಾನೆಗಳು

ಮಡಿಕೇರಿ ತಾಲ್ಲೂಕಿನ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮರಂದೋಡ ಗ್ರಾಮದ ಮೇರಿಯಂಡ ಅಂಗಡಿ ಹತ್ತಿರವಿರುವ ಮಾರ್ಚಂಡ ಪ್ರವೀಣ್‌ ಎಂಬುವವರ ತೋಟಕ್ಕೆ ಅಂದಾಜು 5ರಿಂದ6 ಕಾಡಾನೆಗಳು ಲಗ್ಗೆಯಿಟ್ಟು ತೋಟವನ್ನು ಹಾಳು ಮಾಡಿ ನಂತರ ತೋಟದಲ್ಲಿರುವ ಕೆರೆಗೆ ಇಳಿದು ತುಳಿದ ಪರಿಣಾಮ ಸರಿ ಸುಮಾರು 200ಕ್ಕೂ ಹೆಚ್ಚು ಮೀನುಗಳು ಸತ್ತು ಬಿದ್ದಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ. 



ಕೊಡಗಿನ ಹಲವೆಡೆ ಕಾಡಾನೆ ಮತ್ತು ಹುಲಿ ಸೇರಿದಂತೆ ವನ್ಯಜೀವಿಗಳ ಉಪಟಳ ದಿನೇದಿನೇ ಹೆಚ್ಚುತ್ತಿದೆ. ಕಾಡಾನೆಗಳ ದಾಳಿಯಿಂದ ಪ್ರಾಣ ಹಾನಿಯೂ ವ್ಯಾಪಕಗೊಳ್ಳುತ್ತಿದೆ. ವನ್ಯಪ್ರಾಣಿಗಳಿಂದಗಳಿಂದ ರೈತರ ಫಸಲು ಉಳಿಸಿಕೊಳ್ಳುವುದು ಬೆಳೆಗಾರರಿಗೆ ಬಹುದೊಡ್ಡ ಸವಾಲಾಗಿದೆ. ಅಲ್ಲದೆ ಕೂಲಿ ಕಾರ್ಮಿಕರು ತೋಟಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣವಿಲ್ಲ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.